• Home
 • »
 • News
 • »
 • national-international
 • »
 • Police Atrocity: ಪೊಲೀಸ್ ದರ್ಪಕ್ಕೆ ಬಡ ವ್ಯಾಪಾರಿಯ ಎರಡೂ ಕಾಲು ಕಟ್, ಇವ್ರೇನು ಮನುಷ್ಯರಾ ಸ್ವಾಮಿ?

Police Atrocity: ಪೊಲೀಸ್ ದರ್ಪಕ್ಕೆ ಬಡ ವ್ಯಾಪಾರಿಯ ಎರಡೂ ಕಾಲು ಕಟ್, ಇವ್ರೇನು ಮನುಷ್ಯರಾ ಸ್ವಾಮಿ?

ರೈಲು ಹರಿದು ಎರಡು ಕಾಲು ಕಳೆದುಕೊಂಡ ವ್ಯಾಪಾರಿ

ರೈಲು ಹರಿದು ಎರಡು ಕಾಲು ಕಳೆದುಕೊಂಡ ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು ದರ್ಪ ಮೆರೆದಿದ್ದು, ವ್ಯಾಪಾರಿಯೊಬ್ಬರ ತರಕಾರಿ, ತಕ್ಕಡಿ ಮುಂತಾದವುಗಳನ್ನು ರೈಲ್ವೆ ಟ್ರ್ಯಾಕ್‌ ಗೆ ಎಸೆದ್ದಿದು, ರೈಲು ಹರಿದು ವ್ಯಾಪಾರಿ ಎರಡು ಕಾಲು ಕಳೆದುಕೊಂಡಿದ್ದಾನೆ.

 • News18 Kannada
 • 2-MIN READ
 • Last Updated :
 • Uttar Pradesh, India
 • Share this:

  ಬೀದಿ ತರಕಾರಿ ವ್ಯಾಪಾರಿಯೊಬ್ಬರು (Vendor)  ರೈಲಿಗೆ ಸಿಲುಕಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh ) ಕಾನ್ಪುರದಲ್ಲಿ (Kanpur)  ಶುಕ್ರವಾರ ಸಂಜೆ (ಡಿ.2) ನಡೆದಿದೆ. ಕಾನ್ಪುರದ ಕಲ್ಯಾಣಪುರ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದ ತರಕಾರಿ ತಕ್ಕಡಿಯನ್ನು ತೆಗೆದುಕೊಳ್ಳಲು ಹೋದಾಗ ಏಕಾಏಕಿ ವ್ಯಾಪಾರಿಯ ಮೇಲೆ ರೈಲು ಹರಿದಿದೆ. ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು (Police)  ದರ್ಪ ಮೆರೆದಿದ್ದು, ಆ ವ್ಯಾಪಾರಿಯ ತರಕಾರಿ, ತಕ್ಕಡಿ ಮುಂತಾದವುಗಳನ್ನು ರೈಲ್ವೆ ಟ್ರ್ಯಾಕ್‌ ಗೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವ್ಯಕ್ತಿ ತನ್ನ ಎರಡು ಕಾಲನ್ನು ಕಳೆದುಕೊಂಡು ಅಸಹಾಯಕನಾಗಿ ರೈಲ್ವೆ ಟ್ರ್ಯಾಕ್‌ (Train track)  ಮೇಲೆ ಬಿದ್ದು ನರಳಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ.


  ಘಟನೆಯ ವಿವರ ಹೀಗಿದೆ


  ಜಿ.ಟಿ. ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಇಂದಿರಾ ನಗರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶಾದಾಬ್ ಖಾನ್ ಮತ್ತು ಹೆಡ್ ಕಾನ್‌ಸ್ಟೆಬಲ್ ಇರ್ಫಾನ್ ಅಲಿಯಾಸ್ ಲಡ್ಡೂ ಎಂಬ ವ್ಯಾಪಾರಿಯ ಸ್ಕೇಲ್, ತೂಕದ ಕಲ್ಲು ಮತ್ತು ತರಕಾರಿಗಳನ್ನು ರೈಲ್ವೆ ಹಳಿಗಳ ಕಡೆಗೆ ಎಸೆದ್ದಿದ್ದಾರೆ. ಈ ಹಿನ್ನೆಲೆ ವ್ಯಾಪಾರಿಯು ಅದನ್ನು ಎತ್ತಿಕೊಳ್ಳಲು ಹೋಗುತ್ತಿದ್ದಾಗ ರೈಲು ಬಂದು ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ತರಕಾರಿ ಮುಂತಾದ ವಸ್ತುಗಳನ್ನು ಎಸೆದ ಪೊಲೀಸರು ಆ ವ್ಯಾಪಾರಿ ಗಾಯಗೊಂಡಿರುವುದನ್ನು ನೋಡಿದರೂ ಆತನ ಕಡೆಗೆ ನೋಡದೆ ಖಾಕಿ ದರ್ಪ ಮೆರೆದಿದ್ದಾರೆ ಎಂದು ವರದಿಯಾಗಿದೆ.


  ಇದನ್ನೂ ಓದಿ: Marriage Cancel: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!


  ಇರ್ಫಾನ್ ಅಲಿಯಾಸ್ ಲಡ್ಡೂ ಎಂಬ ವ್ಯಾಪಾರಿಯಯನ್ನು ಕಾನ್ಪುರದ ಎಲ್ಎಲ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ನನ್ನ ಮಗನ ಎರಡೂ ಕಾಲುಗಳು ಸ್ಥಳದಲ್ಲೇ ತುಂಡಾಗಿದೆ ಎಂದು ವ್ಯಾಪಾರಿಯ ತಂದೆ ಸಲೀಂ ಅಹ್ಮದ್‌ ದುಃಖ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಅನಾಗರಿಕ ರೀತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದೂ ಆರೋಪ ಮಾಡಿದ್ದಾರೆ .


  ಮಾರಾಟಗಾರರಿಂದ ದಿನಕ್ಕೆ 50 ರೂ. ಪಡೆಯುವ ಪೊಲೀಸರು


  ಪ್ರತಿ ಮಾರಾಟಗಾರರಿಂದ ದಿನಕ್ಕೆ 50 ರೂಪಾಯಿಗಳನ್ನು ಪಡೆಯುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೀಗಿದ್ದರೂ ಅವರ ಖಾಕಿ ದರ್ಪ ನಿಲ್ಲುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.


  ಇದನ್ನೂ ಓದಿ: Trend: ಮೊಟ್ಟೆಗಳನ್ನು ಬಾಹ್ಯಾಕಾಶದಿಂದ ಬಿಟ್ಟರೂ ಒಡೆಯುತ್ತಿಲ್ಲ, ಸಖತ್ ವೈರಲ್ ಆಗ್ತಿದೆ ಈ ವಿಡಿಯೋ


  ಘಟನೆಯ ಬಗ್ಗೆ ಡಿಸಿಪಿ ಹೇಳಿದ್ದೇನು ?


  ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಹೆಚ್ಚುವರಿ ಡಿಸಿಪಿ ಲಖನ್ ಯಾದವ್, ಇರ್ಫಾನ್ ಅಲಿಯಾಸ್ ಲಡ್ಡೂ ರೈಲ್ವೆ ಹಳಿಯ ಹತ್ತಿರ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಆ ವೇಳೆ, ಪೊಲೀಸರು ಬಂದು ಆತನಿಗೆ ಸ್ಥಳ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾಗ ಆ ವ್ಯಾಪಾರಿಯ ಸ್ಕೇಲ್‌ ಇತರ ಸಾಮಾನುಗಳು ರೈಲ್ವೆ ಹಳಿಗಳ ಮೇಲೆ ಬಿದ್ದಿದೆ.


  ಈ ಸಮಯದಲ್ಲಿ ಏಕಾಏಕಿ ರೈಲು ಆತನ ಮೇಲೆ ಹರಿದಿದೆ. ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಪೊಲೀಸರು ಪ್ರತಿ ಮಾರಾಟಗಾರರಿಂದ ದಿನಕ್ಕೆ 50 ರೂಪಾಯಿ ಪಡೆಯುತ್ತಾರೆ. ಆದರೂ ಅವರನ್ನು ಎಂಬ ಸ್ಥಳೀಯರ ಆರೋಪವನ್ನು ಡಿಸಿಪಿ ಯಾದವ್‌ ತಳ್ಳಿಹಾಕಿದ್ದು, ಈ ಪ್ರದೇಶದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವುದು ನಿತ್ಯ ನಡೆಯುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

  Published by:Usha P
  First published: