Landslide: ಉತ್ತರಾಖಂಡದಲ್ಲಿ ಗುಡ್ಡ ಕುಸಿತ; ಪ್ರಾಣ ಭಯದಿಂದ ಓಡಿ ಹೋದ ಜನರು, ವಿಡಿಯೋ ಇಲ್ಲಿದೆ

ಕೆಲವು ವಾರಗಳ ಹಿಂದೆ, ಹಿಮಾಚಲ ಪ್ರದೇಶದ ಕಿನ್ನೌರ್​​ನಲ್ಲಿ ಪ್ರಬಲ ಭೂಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ ಸುಮಾರು 28 ಜನರು ಮೃತಪಟ್ಟಿದ್ದರು

ಗುಡ್ಡ ಕುಸಿತ

ಗುಡ್ಡ ಕುಸಿತ

 • Share this:
  ಉತ್ತರಾಖಂಡದಲ್ಲಿ ಸಂಭವಿಸಿರುವ ಮತ್ತೊಂದು ಭೂಕುಸಿತದಿಂದಾಗಿ ತಾನಕ್ಪುರ್ ಮತ್ತು ಚಂಪಾವತ್​ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಅಲ್ಲಿ ಗುಡ್ಡ ಕುಸಿದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಡ್ಡ ಕುಸಿತದ ರಭಸಕ್ಕೆ ವಾಹನಗಳ ಜೊತೆಗೆ ಜನರು ಕೊಚ್ಚಿ ಹೋಗಿದ್ದಾರೆ. ರಸ್ತೆ ಬದಿಯಲ್ಲೇ ಇದ್ದ ಗುಡ್ಡ ಭಾಗಶಃ ಕುಸಿದಿದೆ. ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಜನರು ತಮ್ಮ ವಾಹನಗಳೊಂದಿಗೆ ಕೊಚ್ಚಿಕೊಂಡು ಹೋಗಿದ್ದಾರೆ.

  ಗುಡ್ಡ ಕುಸಿದಿರುವ ಪರಿಣಾಮ ತಾನಕ್ಪುರ-ಚಂಪಾವತ್ ನ್ಯಾಷನಲ್ ಹೈವೇ ಬಂದ್ ಆಗಿದೆ. ಉತ್ತರಾಖಂದ ಚಂಪಾವತ್​ ಬಳಿಕ ಸ್ವಾಲಾ ಬಳಿ ಈ ಗುಡ್ಡ ಕುಸಿತ ಸಂಭವಿಸಿದೆ. ವಿಡಿಯೋದಲ್ಲಿ ಗುಡ್ಡದ ಮೇಲಿಂದ ಕಲ್ಲು ಬಂಡೆಗಳು ಉರುಳುತ್ತಿರುವ ಹಾಗೂ ಟನ್​ಗಟ್ಟಲೇ ಮಣ್ಣು ಕುಸಿಯುತ್ತಿರುವ ದೃಶ್ಯ ಸೆರೆಯಾಗಿದೆ. ಜೊತೆಗೆ ಗುಡ್ಡದ ಮೇಲಿದ್ದ ಮರ ಗಿಡಗಳು ಸಹ ಮಣ್ಣಿನ ಜೊತೆ ಕುಸಿದಿವೆ.

  ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿಯಲ್ಲಿ ನಿಂತಿದ್ದ ಕಾರುಗಳು ಹಾಗೂ ಇತರೆ ವಾಹನಗಳು ಮಣ್ಣಿನಡಿ ಸಿಲುಕಿವೆ. ಗುಡ್ಡ ಕುಸಿಯುತ್ತಿದ್ದಂತೆ ಜನರು ಪ್ರಾಣಭಯದಿಂದ ಓಡಿ ಹೋಗಿದ್ದಾರೆ. ಇನ್ನೂ ಕೆಲವರು ಭೀಕರ ದೃಶ್ಯವನ್ನು ಮೊಬೈಲ್​ಗಳಲ್ಲಿ ಸೆರೆಹಿಡಿದಿದ್ದಾರೆ.

  ಇದನ್ನೂ ಓದಿ:Bengaluru: ಬಾಯ್ಲರ್​ ಸ್ಪೋಟ ಪ್ರಕರಣ; ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಸಾವು, ಕಂಪನಿ ಮಾಲೀಕ ನಾಪತ್ತೆ  ಜಿಲ್ಲಾ ಮ್ಯಾಜಿಸ್ಟ್ರೇಟ್​ ವಿನೀತ್​ ತೋಮರ್​ ಮಾತನಾಡಿ, ಹೆದ್ದಾರಿ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸಲು ಕನಿಷ್ಠ 2 ದಿನವಾದರೂ ಬೇಕು. ಅಲ್ಲಿಯವರೆಗೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

  ಕೆಲವು ವಾರಗಳ ಹಿಂದೆ, ಹಿಮಾಚಲ ಪ್ರದೇಶದ ಕಿನ್ನೌರ್​​ನಲ್ಲಿ ಪ್ರಬಲ ಭೂಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ ಸುಮಾರು 28 ಜನರು ಮೃತಪಟ್ಟಿದ್ದರು. ಹಲವು ಮಂದಿ ಮಣ್ಣಿನಡಿ ಸಿಲುಕಿ ಕಣ್ಮರೆಯಾಗಿದ್ದರು. ಪ್ರಯಾಣಿಕರನ್ನು ತುಂಬಿದ್ದ ಬಸ್, ಅನೇಕ ವಾಹನಗಳು, ಟ್ರಕ್​​ಗಳ ಗುಡ್ಡ ಕುಸಿದಿತ್ತು.

  ಇದನ್ನೂ ಓದಿ:B S Yediyurappa: ರಾಜ್ಯ ಪ್ರವಾಸಕ್ಕೆ ಹೊಸ ಕಾರು ಖರೀದಿಸಿದ ಮಾಜಿ ಸಿಎಂ ಯಡಿಯೂರಪ್ಪ

  ರಕ್ಷಣಾ ಕಾರ್ಯಾಚರಣೆ ನಡೆಸಿ, ಸುಮಾರು 28 ದೇಹಗಳನ್ನು ಹೊರತೆಗೆದಿದ್ದರು, ಇನ್ನೂ ಹಲವು ಕಣ್ಮರೆಯಾಗಿದ್ದಾರೆ. ಎಚ್​ಆರ್​ಟಿಸಿ ಬಸ್​ ಗುರುವಾರ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

  ಗುಡ್ಡದ ಮೇಲಿಂದ ಬಿದ್ದ ಕಲ್ಲುಗಳ ರಭಸಕ್ಕೆ ಟ್ರಕ್​ ನದಿ ಬದಿಗೆ ಕೊಚ್ಚಿ ಹೋಗಿತ್ತು. ಟ್ರಕ್ ಚಾಲಕನ ಮೃತದೇಹವೂ ಪತ್ತೆಯಾಗಿತ್ತು. ಇನ್ನೂ 2 ಕಾರುಗಳು ಹಾನಿಯಾಗಿದ್ದವು. ಆದರೆ ಆ ಕಾರುಗಳಲ್ಲಿ ಯಾರೂ ಸಹ ಇರಲಿಲ್ಲ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Latha CG
  First published: