PUC Certificate: ವಾಹನ ಸವಾರರೇ ಎಚ್ಚರ.. ನಿಮ್ಮ ಬಳಿ ಮಾಲಿನ್ಯ ಪ್ರಮಾಣ ಪತ್ರ ಇದೆಯೇ ಒಮ್ಮೆ ನೋಡಿಕೊಳ್ಳಿ!

Vehicle pollution Control: ರಾಷ್ಟ್ರದ ರಾಜಧಾನಿಯಲ್ಲಿ ಚಳಿಗಾಲದಲ್ಲಿ ಮಾಲಿನ್ಯದ ಮಟ್ಟ ಸಾಮಾನ್ಯವಾಗಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ವಾಹನ ಮಾಲೀಕರಿಗೆ ತಾವು ಯಾವುದೇ ವಾಹನವನ್ನು ಹೊರಗೆ ತೆಗೆದುಕೊಂಡು ಹೋದರೂ ಪಿಯುಸಿ ಪ್ರಮಾಣ ಪತ್ರ ಹೊಂದಿರಲೇಬೇಕು ಎಂದು ಹೇಳಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Pollution under control: ನೀವು ದೆಹಲಿಯಲ್ಲಿ ನೆಲೆಸಿದ್ದು, ಇನ್ಮುಂದೆ ನೀವು ನಿಮ್ಮ ವಾಹನ ತೆಗೆದುಕೊಂಡು ಹೊರಗೆ ಹೋಗುವುದಕ್ಕೂ ಮುಂಚಿತವಾಗಿ ನಿಮ್ಮ ವಾಹನದ ಮಾಲಿನ್ಯ ಪ್ರಮಾಣ ಪತ್ರ (PUC) ಇದೆಯೋ, ಇಲ್ಲವೋ ಎನ್ನುವುದನ್ನು ಒಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ. ಪಿಯುಸಿ ಪ್ರಮಾಣ ಪತ್ರ ಇಲ್ಲದೆ ಹೋದರೆ ಮೊದಲು ಹೋಗಿ ವಾಹನದ ಮಾಲಿನ್ಯ ತಪಾಸಣೆಯ ಕೇಂದ್ರಕ್ಕೆ ಹೋಗಿ ನಿಮ್ಮ ವಾಹನ ಎಷ್ಟು ಹೊಗೆಯನ್ನು ಉಗುಳುತ್ತಿದೆ ಎನ್ನುವುದನ್ನು ಪರೀಕ್ಷೆ ಮಾಡಿಕೊಂಡು ಅದಕ್ಕೆ ಸೂಕ್ತವಾದ ಪ್ರಮಾಣ ಪತ್ರ ಪಡೆದುಕೊಳ್ಳುವುದು ಒಳ್ಳೆಯದು. ಸಾಮಾನ್ಯವಾಗಿ ನಾವು ಪಿಯುಸಿ ಪ್ರಮಾಣ ಪತ್ರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನಾವು ಆಗಾಗ ವಾಹನಗಳ ಮಾಲಿನ್ಯ ಸಹ ತಪಾಸಣೆ ಮಾಡಿಸಬೇಕು, ಆದರೆ ನಾವು ಮಾಡಿಸುವುದೇ ಇಲ್ಲ.

  ಆದರೆ ಈಗ ಇದರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಭಾರಿ ದಂಡ ನೀಡಬೇಕಾಗುತ್ತದೆ ಮತ್ತು ನಿಮ್ಮ ವಾಹನ ಚಾಲನಾ ಪರವಾನಗಿಯನ್ನು ಸಹ 3 ತಿಂಗಳುಗಳ ಕಾಲ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.

  ರಾಷ್ಟ್ರದ ರಾಜಧಾನಿಯಲ್ಲಿ ಚಳಿಗಾಲದಲ್ಲಿ ಮಾಲಿನ್ಯದ ಮಟ್ಟ ಸಾಮಾನ್ಯವಾಗಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ದೆಹಲಿ ಸರ್ಕಾರದ ಸಾರಿಗೆ ಇಲಾಖೆಯು ವಾಹನ ಮಾಲೀಕರಿಗೆ ತಾವು ಯಾವುದೇ ವಾಹನವನ್ನು ಹೊರಗೆ ತೆಗೆದುಕೊಂಡು ಹೋದರೂ ಪಿಯುಸಿ ಪ್ರಮಾಣ ಪತ್ರ ಹೊಂದಿರಲೇಬೇಕು ಎಂದು ಹೇಳಿದೆ. ಹೀಗೆ ತಮ್ಮ ವಾಹನದ ಪಿಯುಸಿ ಪ್ರಮಾಣ ಪತ್ರ ಇಲ್ಲದೆ ಹೋದಲ್ಲಿ 3 ತಿಂಗಳ ಕಾಲ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವುದು ಮತ್ತು ದಂಡವನ್ನೂ ಕಟ್ಟಬೇಕಾಗುತ್ತದೆ ಎಂದು ಸಹ ಹೇಳಿದೆ.

  ಒಂದು ವೇಳೆ ಪಿಯುಸಿ ಪ್ರಮಾಣಪತ್ರ ವಿಲ್ಲದೆ ಸಿಕ್ಕಿಬಿದ್ದರೆ, ವಾಹನ ಮಾಲೀಕರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಅವರು ತಮ್ಮ ಚಾಲನಾ ಪರವಾನಗಿಯನ್ನು ಸಹ 3 ತಿಂಗಳ ಕಾಲ ಹೊಂದಲು ಅನರ್ಹರಾಗುತ್ತಾರೆ ಎಂದು ಸಾರಿಗೆ ಇಲಾಖೆಯು ಭಾನುವಾರದಂದು ಹೊರಡಿಸಿದ ಸಾರ್ವಜನಿಕ ನೋಟಿಸ್‌ನಲ್ಲಿ ತಿಳಿಸಲಾಗಿದೆ.

  ದೆಹಲಿಯಲ್ಲಿ ಇರುವಂತಹ ಮಾಲಿನ್ಯ ನಿಯಂತ್ರಿಸಲು ಮತ್ತು ಗಾಳಿಯ ಗುಣಮಟ್ಟ ಸುಧಾರಿಸಲು ದೆಹಲಿಯ ಸರ್ಕಾರದ ಸಾರಿಗೆ ಇಲಾಖೆಯು ಅನೇಕ ರೀತಿಯ ಕಟ್ಟು ನಿಟ್ಟಿನ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದ್ದು, ಅದರಲ್ಲಿ ಇದು ಒಂದು ಕ್ರಮ ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ವಾಹನ ಮಾಲೀಕರಿಗೆ ತಮ್ಮ ವಾಹನಗಳ ಮಾಲಿನ್ಯ ತಪಾಸಣೆ ಮಾಡಿಸಿ ಪಿಯುಸಿ ಪ್ರಮಾಣ ಪತ್ರವನ್ನು ಜೊತೆಗೆ ಇರಿಸಿಕೊಂಡು ಪ್ರಯಾಣಿಸುವಂತೆ ವಿನಂತಿಸಿಕೊಂಡಿದೆ.

  ಕಾರ್ಬನ್ ಮೊನಾಕ್ಸೈಡ್ ಮತ್ತು ಇಂಗಾಲದ ಡೈಆಕ್ಸೈಡ್‌ನಂತಹ ವಿವಿಧ ಮಾಲಿನ್ಯಕಾರಕಗಳನ್ನು ಹೊರಸೂಸುವಿಕೆ ಮಾನದಂಡಗಳ ಪ್ರಕಾರ ವಾಹನವನ್ನು ಪರೀಕ್ಷಿಸಲಾಗುತ್ತದೆ, ನಂತರ ಅವರಿಗೆ ಪಿಯುಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

  "ಚಾಲನಾ ಪರವಾನಗಿಯ ಅಮಾನತು, ಯಾವುದೇ ದಂಡ, ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಸಾರಿಗೆ ಇಲಾಖೆ ಅಧಿಕೃತಗೊಳಿಸಿದ ಮಾಲಿನ್ಯ ತಪಾಸಣಾ ಕೇಂದ್ರಗಳಿಂದ ತಮ್ಮ ವಾಹನಗಳನ್ನು ಪರಿಶೀಲಿಸಿಕೊಳ್ಳುವಂತೆ ಎಲ್ಲಾ ನೋಂದಾಯಿತ ವಾಹನ ಮಾಲೀಕರಿಗೆ ಕೋರಲಾಗಿದೆ" ಎಂದು ಸಾರ್ವಜನಿಕ ನೋಟಿಸ್‌ನಲ್ಲಿ ತಿಳಿಸಲಾಗಿದೆ.

  Read Also ⇒ PM Kisan Samman Nidhi Yojana app: ಸರ್ಕಾರದಿಂದ ಸಿಗುತ್ತೆ ವರ್ಷಕ್ಕೆ 6 ಸಾವಿರ ರೂ! ನೋಂದಣಿ ಹೀಗೆ ಮಾಡಿ..

  ದೆಹಲಿಯಲ್ಲಿ ಸಾರಿಗೆ ಇಲಾಖೆ ಅಧಿಕೃತಗೊಳಿಸಿದ 900ಕ್ಕೂ ಹೆಚ್ಚು ವಾಹನ ಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಪೆಟ್ರೋಲ್ ಮತ್ತು ಸಿಎನ್‌ಜಿ ಚಾಲಿತ ದ್ವೀಚಕ್ರ ವಾಹನಗಳ ಮಾಲಿನ್ಯ ತಪಾಸಣೆಗೆ 60 ರೂಪಾಯಿ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 80 ರೂಪಾಯಿ ಶುಲ್ಕವನ್ನೂ ನೀಡಬೇಕಾಗುತ್ತದೆ. ಡೀಸೆಲ್ ವಾಹನಗಳ ಮಾಲಿನ್ಯ ತಪಾಸಣೆಗೆ 100 ರೂಪಾಯಿ ಶುಲ್ಕವನ್ನೂ ನೀಡಬೇಕಾಗುತ್ತದೆ.
  First published: