10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ತರಕಾರಿ ಮಾರುತ್ತಿದ್ದ ಬಾಲಕಿ

ಇದೀಗ ಬಡತನ ವಿರುದ್ಧ ವಿದ್ಯಾಭ್ಯಾಸದ ಮೂಲಕ ಹೋರಾಟ ನಡೆಸುತ್ತಿರುವ ಈ ವಿದ್ಯಾರ್ಥಿ ಮುಂಬರುವ ದಿನಗಳಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವ ಗುರಿ ಇಟ್ಟುಕೊಂಡಿದ್ದಾರೆ.

zahir | news18
Updated:May 7, 2019, 3:25 PM IST
10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ತರಕಾರಿ ಮಾರುತ್ತಿದ್ದ ಬಾಲಕಿ
@ಲಾಲ್ರಿನ್ನುಂಗಿ
  • News18
  • Last Updated: May 7, 2019, 3:25 PM IST
  • Share this:
ಮನುಷ್ಯ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲ. ಇಂತಹ ಸಾಧನೆಗೆ ಬಡತನ ಮತ್ತು ಶ್ರೀಮಂತಿಕೆ ಎಂಬುದಿಲ್ಲ ಎಂದು ಮಿಜೋರಂನ ಈ ಪೋರಿ ನಿರೂಪಿಸಿದ್ದಾರೆ. ಇತ್ತೀಚೆಗೆ ನಡೆದ ಹೈಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್​ (HSLC) ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್​ ಆಗುವ ಮೂಲಕ ದೇಶದ ಗಮನ ಸೆಳೆದಿದ್ದಾರೆ ಲಾಲ್ರಿನ್ನುಂಗಿ. 500 ಅಂಕಗಳಿಗೆ 486 ಮಾರ್ಕ್​ಗಳನ್ನು ಪಡೆದ ಲಾಲ್ರಿನ್ನುಂಗಿಯ ಈ ಸಾಧನೆಯ ಹಿಂದೆ ಸ್ಪೂರ್ತಿಯಾಗುವಂತಹ ಒಂದು ಕಷ್ಟ ಕಾರ್ಪಣ್ಯದ ಕಥೆಯೊಂದಿದೆ.

ಮಿಜೋರಂನ ಸಿಹ್​ಪುರ್​ ಮಾರುಕಟ್ಟೆಗೆ ಭೇಟಿ ನೀಡುವ ಜನ ಸಾಮಾನ್ಯರಿಗೆ ಲಾಲ್ರಿನ್ನುಂಗಿ ಮುಖ ಚಿರ ಪರಿಚಿತ. ಏಕೆಂದರೆ ಪ್ರತಿದಿನ ಈ ಪುಟ್ಟ ಪೋರಿ ತಾಯಿಯೊಂದಿಗೆ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿರುತ್ತಾಳೆ. ಬಿಡುವಿನ ವೇಳೆಯಲ್ಲಿ ಪೋಷಕರ ನೆರವಿಗೆ ನಿಲ್ಲುವ ಲಾಲ್ರಿನ್ನುಂಗಿ ಉಳಿದ ಸಮಯದಲ್ಲಿ ವಿದ್ಯಾಭ್ಯಾಸದತ್ತ ಗಮನ ಹರಿಸುತ್ತಿದ್ದಳು. ಒಂದೆಡೆ ಓದು ಮತ್ತೊಂದೆಡೆ ಬೀದಿ ಬದಿ ವ್ಯಾಪಾರ. ಬಡತನದೊಂದಿಗೆ ಶಿಕ್ಷಣದ ಜವಾಬ್ದಾರಿ ಹೆಗಲೇರಿಸಿಕೊಂಡಿದ್ದ ಲಾಲ್ರಿನ್ನುಂಗಿ ಇದೀಗ ಮಣಿಪುರದ ಟಾಪರ್​ ವಿದ್ಯಾರ್ಥಿ. ಇಡೀ ದೇಶವನ್ನೇ ತನ್ನತ್ತ ನೋಡುವಂತಹ ಸಾಧನೆ ಮಾಡಿ ಪೋಷಕರ ಮುಖದಲ್ಲಿ ನಗು ಮೂಡಿಸಿದ್ದಾರೆ. ಅಲ್ಲದೆ ಹುಟ್ಟೂರಿಗೆ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ. ಇಡೀ ರಾಜ್ಯಕ್ಕೆ ಪ್ರಥಮಳಾಗಿ ಗುರುತಿಸಿಕೊಂಡಿದ್ದ ಬಳಿಕ ಸಹ  ತರಕಾರಿ ಮಾರಾಟದಲ್ಲಿ ತೊಡಗಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು ಲಾಲ್ರಿನ್ನುಂಗಿ. ಈ ಬಗ್ಗೆ ಕೇಳಿದಾಗ ತಾಯಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎನ್ನುತ್ತಲೇ ಜೀವನದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂಬ ಸಮಜಾಯಿಷಿ ಮುಂದಿಡುತ್ತಾಳೆ.

ಲಾಲ್ರಿನ್ನುಂಗಿಯ ಡಬಲ್ ರೋಲ್ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಸಮಯ ಸಿಕ್ಕಾಗೆಲ್ಲಾ ಐಜ್ವಾಲ್ ನಗರದಲ್ಲಿ ಹಾಲನ್ನು ಸಹ ಮಾರಾಟ ಮಾಡುತ್ತಾಳೆ. ಕೆಲವೊಮ್ಮೆ ಇದರಿಂದ ತರಗತಿಗಳೂ ಸಹ ಮಿಸ್ ಆಗಿದುದ್ದುಂಟಂತೆ. ಈ ಸಾಧಕಿಯ ಕುಟುಂಬವು ಸಿಹ್​ಪಿರ್​ ಗ್ರಾಮದಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದು, ದಿನಂಪ್ರತಿ ತರಕಾರಿ ಮಾರಾಟದಿಂದ ಜೀವನ ಸಾಗಿಸುತ್ತಿದ್ದಾರೆ. ಬಾಲ್ಯದಿಂದಲೇ ಕಷ್ಟ ಕಾರ್ಪಣ್ಯಗಳನ್ನು ನೋಡಿ ಬೆಳೆದಿದ್ದ ಲಾಲ್ರಿನ್ನುಂಗಿಗೆ ಬಡತನೇ ಈಗ ಸವಾಲಾಗಿ ಪರಿಣಮಿಸಿದೆ.

ಇದೀಗ ಬಡತನ ವಿರುದ್ಧ ವಿದ್ಯಾಭ್ಯಾಸದ ಮೂಲಕ ಹೋರಾಟ ನಡೆಸುತ್ತಿರುವ ಈ ವಿದ್ಯಾರ್ಥಿ ಮುಂಬರುವ ದಿನಗಳಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವ ಗುರಿ ಇಟ್ಟುಕೊಂಡಿದ್ದಾರೆ. ಆದರೆ ಇದರ ಪ್ರವೇಶಾತಿ ಪರೀಕ್ಷೆಯನ್ನು ಬರೆಯಲು ತುಂಬಾ ಸಮಯ ತೆಗೆದುಕೊಳ್ಳಬೇಕಿರುವುದು ಕೂಡ ಈ ಪುಟಾಣಿಯ ಚಿಂತೆಯಾಗಿದೆ. ಏಕೆಂದರೆ ವೈದ್ಯಕೀಯ ಸೇವೆಯನ್ನುಸಲ್ಲಿಸಬೇಕೆಂಬ ಆಸೆಯಿದ್ದರೂ, ಅಲ್ಲಿಯವರೆಗೂ ಕುಟುಂಬವನ್ನು ಒತ್ತಡದಲ್ಲಿರಿಸಲು ಬಯಸುವುದಿಲ್ಲ ಎನ್ನುತ್ತಾರೆ. ಹಾಗೆಯೇ ಮುಂದೊಂದು ದಿನ ರಾಜಕಾರಣಿ ಆಗುತ್ತೇನೆ ಎಂದು ಸಹ ವಿಶ್ವಾಸ ವ್ಯಕ್ತಪಡಿಸುತ್ತಾಳೆ ಈ ಪುಟ್ಟ ಪೋರಿ.

ಸಾಮಾನ್ಯ ಬಡ ವರ್ಗದಲ್ಲಿ ಜನಿಸಿರುವ ಲಾಲ್ರಿನ್ನುಂಗಿ ಸಿಹ್​ಪಿರ್​ನ ಯಂಗ್ ಲರ್ನರ್ ಸ್ಕೂಲ್​ ಮೂಲಕ ವಿದ್ಯಾಭ್ಯಾಸವನ್ನು ಆರಂಭಿಸಿದ್ದರು. ಬಳಿಕ ಪ್ರೆಸ್​ಬೈಟೆರಿಯನ್ ಇಂಗ್ಲಿಷ್ ಶಾಲೆಗೆ ಸೇರ್ಪಡೆಗೊಂಡ ಬಾಲಕಿಗೆ ಅಲ್ಲಿನ ಅಧ್ಯಾಪಕರಿಂದ ಉತ್ತಮ ಪ್ರೋತ್ಸಾಹ ದೊರೆಯಿತು. ಅದರಂತೆ ತನ್ನ ಕಠಿಣ ಪರಿಶ್ರಮ ಮತ್ತು ಟೀಚರ್​ಗಳ ಬೆಂಬಲದಿಂದ 9ನೇ ತರಗತಿಯಲ್ಲಿ ಅತ್ತ್ಯುತ್ತಮ ಅಂಕಗಳೊಂದಿಗೆ ಉತೀರ್ಣರಾಗಿದ್ದರು. ಇದೀಗ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಶಾಲೆಯ ಹೆಸರನ್ನು ಉಜ್ವಲಗೊಳಿಸಿದ್ದಾಳೆ. ಈಕೆಯ ನಡತೆ ಮತ್ತು ಶಿಸ್ತು ವಿಧೇಯತೆಯ ಬಗ್ಗೆ ಶಾಲಾ ಶಿಕ್ಷಕರೇ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಶಾಲೆಯಲ್ಲಿ ಎಷ್ಟೇ ಶ್ರೀಮಂತ ವಿದ್ಯಾರ್ಥಿಗಳಿದ್ದರೂ ಲಾಲ್ರಿನ್ನುಂಗಿ ಮಾತ್ರ ಅವರೆಲ್ಲರ ಮುಂದೆ ತನ್ನ ಬಡತನವನ್ನು ಮೆಟ್ಟಿ ನಿಂತು ಸಾಧನೆ ಮಾಡಿ ತೋರಿಸಿದ್ದಾರೆ.
ಮನೆಯ ಕಿರಿಯ ಸದಸ್ಯಳಾಗಿರುವ ಲಾಲ್ರಿನ್ನುಂಗಿ, ವಾರಾಂತ್ಯದಲ್ಲಿ ಮತ್ತು ರಜಾದಿನಗಳಲ್ಲಿ ತರಕಾರಿ ಮಾರಾಟದಲ್ಲಿ ಸಹಾಯ ಮಾಡುತ್ತಾಳೆ. ಬೀದಿ ಬದಿಯಲ್ಲಿ ತರಕಾರಿ ಮಾರುವ ಬಗ್ಗೆ ಯಾವುದೇ ನಾಚಿಕೆಯನ್ನು ಆಕೆ ಪಟ್ಟುಕೊಂಡಿಲ್ಲ. ಏಕೆಂದರೆ ವಿದ್ಯಾಭ್ಯಾಸವನ್ನು ಮುಂದುವರೆಸಲು ತನ್ನ ಪೋಷಕರಿಗೆ ಸಹಾಯ ಮಾಡಬೇಕೆಂದು ಆಕೆಗೆ ಚೆನ್ನಾಗಿ ಗೊತ್ತಿದೆ ಎನ್ನುತ್ತಾರೆ ತಂದೆ ಜೊತಾಂತ್ಲುವಾಂಗ.

ನಮ್ಮ ಮಗಳ ಸಾಧನೆ ಬಗ್ಗೆ ಹೆಮ್ಮೆಯಿದೆ. ಎಲ್ಲರೂ ಈಗ ನಮ್ಮನ್ನು ಹೊಗಳುತ್ತಿದ್ದಾರೆ. ಆದರೆ ನಾವು ಏನೂ ಮಾಡಿಲ್ಲ. ಎಲ್ಲವೂ ದೇವರ ದಯೆ. ಆಕೆಯ ಕಠಿಣ ಪ್ರರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಮಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ ತಾಯಿ ಲಲ್ಹಿಮ್ಪುಯಿ.
ಒಟ್ಟಿನಲ್ಲಿ ಬಡತನದ ಬೇಗೆಯಲ್ಲಿ ಅರಳಿದ ಲಾಲ್ರಿನ್ನುಂಗಿ ಮಣಿಪುರದ ಟಾಪ್ ವಿದ್ಯಾರ್ಥಿನಿಯಾಗಿ ಹೊರ ಹೊಮ್ಮಿದ್ದಾರೆ. ಮುಂದೆ ಅವರ ಕನಸಿನಂತೆ ವೈದ್ಯಕೀಯ ಸೇವೆ ಸಲ್ಲಿಸಲು ಹಾಗೂ ರಾಜಕಾರಣಿಯಾಗಿ ಭವ್ಯ ಭಾರತವನ್ನು ನಿರ್ಮಿಸುವ ಕನಸು ಕೂಡ ಈಡೇರಲಿ ಎಂಬುದು ಎಲ್ಲರ ಆಶಯ.
First published: May 7, 2019, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading