Viral Video: ತರಕಾರಿ ಮೇಲೆ ಮೂತ್ರ ವಿಸರ್ಜಿಸಿ ಮಾರುತ್ತಿದ್ದ ವ್ಯಾಪಾರಿ; ಇಲ್ಲಿದೆ ಶಾಕಿಂಗ್ ವಿಡಿಯೋ

ಆರೋಪಿ ಷರೀಫ್ ವಿರುದ್ಧ ಕೋಮು ವಾತಾವರಣ ಕದಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಾಗೂ ಸೋಂಕು ಹರಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಆರೋಪಿ ತರಕಾರಿ ವ್ಯಾಪಾರಿ

ಆರೋಪಿ ತರಕಾರಿ ವ್ಯಾಪಾರಿ

 • Share this:
  ಲಕ್ನೋ: ತರಕಾರಿಗಳ ಮೇಲೆ ಮೂತ್ರ ವಿಸರ್ಜಿಸಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಈ ವ್ಯಾಪಾರಿ (Vegetable Vendor) ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುವಾಗಲೇ (Urinating On Vegetables ) ಸಿಕ್ಕಿಬಿದ್ದಿದ್ದಾನೆ. ಉತ್ತರ ಪ್ರದೇಶದ (Uttar Pradesh) ಬರೇಲಿ ಜಿಲ್ಲೆಯಲ್ಲಿ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಷರೀಫ್ ಎಂಬ ತರಕಾರಿ ವ್ಯಾಪಾರಿಯನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಬರೇಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral)  ಆಗಿದೆ.

  ಈ ಪ್ರಕರಣ ಉತ್ತರ ಪ್ರದೇಶದ ಬರೇಲಿಯ ಇಜ್ಜತ್‌ನಗರ ಪ್ರದೇಶದಲ್ಲಿ ನಡೆದಿದೆ. ನಗರದಲ್ಲಿ ವಾಸವಿರುವ ಸ್ಥಳೀಯರಾದ ದುರ್ಗೇಶ್ ಗುಪ್ತಾ ಅವರು ತಮ್ಮ ಕಾರಿನಲ್ಲಿ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದರು. ಇದೇ ವೇಳೆ, 55 ವರ್ಷದ ತರಕಾರಿ ವ್ಯಾಪಾರಿ ಕಾಲೋನಿಯ ರಸ್ತೆ ಬದಿಯಲ್ಲಿ ತರಕಾರಿ ಗಾಡಿ ಎಳೆಯುತ್ತಿದ್ದು, ಕೈಗಾಡಿಯ ಕೆಳಗೆ ಇಟ್ಟಿದ್ದ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಗಮನಿಸಿದ್ದಾರೆ. ಅಲ್ಲದೇ ಈ ವ್ಯಾಪಾರಿ ತರಕಾರಿಗಳ ಮೇಲೆ ಮೂತ್ರ ವಿಸರ್ಜಿಸುವುದನ್ನು ಸಾಕ್ಷಿಗಾಗಿ ವಿಡಿಯೋ ಮಾಡಿಕೊಂಡಿದ್ದಾರೆ.  ಇಷ್ಟುದಿನ ಇದೇ ವ್ಯಾಪಾರಿ ಬಳಿ ತರಕಾರಿ ಖರೀದಿಸುತ್ತಿದ್ದ ಸ್ಥಳೀಯರು
  ದುರ್ಗೇಷ್ ಗುಪ್ತಾ ಈ ವಿಡಿಯೋವನ್ನು ಸ್ಥಳೀಯರಿಗೆ ತೋರಿಸಿದಾಗ ಸಿಟ್ಟಿಗೆದ್ದ ಸ್ಥಳೀಯ ಜನರು ಷರೀಫ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಪ್ರಕರಣದ ಕುರಿತು ಮಾತನಾಡಿದ ಹಿಂದೂ ಜಾಗರಣ ಮಂಚ್‌ನ ಜಿಲ್ಲಾಧ್ಯಕ್ಷ ಹರ್ಷ್ ಭಾರದ್ವಾಜ್, ಈ ವ್ಯಕ್ತಿ ಹಲವಾರು ವರ್ಷಗಳಿಂದ ಇಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾನೆ. ಷರೀಫ್ ಅವರ ವಯಸ್ಸು ಮತ್ತು ಕಠಿಣ ಪರಿಶ್ರಮವನ್ನು ಗಮನಿಸಿ ನೆರೆಹೊರೆಯ ಬಹುಪಾಲು ಜನರು ಅವರಿಂದ ತರಕಾರಿಗಳನ್ನು ಖರೀದಿಸುತ್ತಿದ್ದರು. ಆದರೆ ಈ ಕೃತ್ಯದಿಂದ ಜನರ ನಂಬಿಕೆ ಛಿದ್ರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Video: ಹಿಜಾಬ್ ಹಾಕದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿ ಯುವತಿಯ ಕೊಲೆ

  ಆರೋಪಿ ತರಕಾರಿ ಮಾರಾಟಗಾರನನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಕೈಗಾಡಿಯ ಕೆಳಭಾಗದಲ್ಲಿ ಇಟ್ಟಿದ್ದ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ ಎಂದು ಬರೇಲಿ ಎಸ್‌ಎಸ್‌ಪಿ ಅನಿರುದ್ಧ್ ಪಂಕಜ್ ತಿಳಿಸಿದ್ದಾರೆ.

  ಇದನ್ನೂ ಓದಿ: National Wife Appreciation Day: ಇಂದು ಹೆಂಡತಿಯನ್ನು ಹೊಗಳುವ ರಾಷ್ಟ್ರೀಯ ದಿನ! ಮದುವೆಯಾದ ಗಂಡಸರಿಗೆ ಆಲ್ ದಿ ಬೆಸ್ಟ್

  ಈ ಆರೋಪಗಳಡಿ ಪ್ರಕರಣ ದಾಖಲು
  ಆರೋಪಿ ಷರೀಫ್ ವಿರುದ್ಧ ಕೋಮು ವಾತಾವರಣ ಕದಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಾಗೂ ಸೋಂಕು ಹರಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
  Published by:ಗುರುಗಣೇಶ ಡಬ್ಗುಳಿ
  First published: