Tomato-Onion Price: ಎಲ್ಲೆಡೆ ತರಕಾರಿ ಬೆಲೆ ಗಗಕ್ಕೇರಿದ್ರೆ, ಇಲ್ಲಿ ಮಾತ್ರ ಟೊಮೇಟೊ-ಈರುಳ್ಳಿ ಬೆಲೆ ಕಡಿಮೆಯಂತೆ

ಅಗ್ಗದ ಬೆಲೆಗೆ ಟೊಮೆಟೊವನ್ನು ನವೆಂಬರ್ 24 ರಂದು ಜೋಧ್‌ಪುರ, ರಾಜಸ್ಥಾನ ಮತ್ತು ಗುಜರಾತ್‌ನ ಬೋಡೆಲಿಯಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ 1 ಕೆಜಿ ಟೊಮೆಟೊ ಬೆಲೆ 23 ರೂಪಾಯಿಗೆ ಮಾರಾಟವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಡೀ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ (Tomato Market) ಎನಿಸಿಕೊಂಡ ಕೋಲಾರ (Kolar APMC) ಎಪಿಎಂಸಿಯಲ್ಲಿ ಇದೀಗ ಟೊಮೆಟೋಗೆ ಐತಿಹಾಸಿಕ ಬಂಪರ್‌ ಬೆಲೆ (Bumper Price) ಬಂದಿರುವುದಂತೂ ನಿಜ. ಇನ್ನು ಮೊಟ್ಟೆ (egg)ಮಾಂಸ ಖರೀದಿಸಬಹುದು ಆದರೆ ಟೊಮೇಟೊ ಖರೀದಿಸಲು ಸಾಧ್ಯವಿಲ್ಲ ಎಂದು ಹೆಂಗಸರು ಗೇಲಿ ಮಾಡುತ್ತಿದ್ದಾರೆ, ಇನ್ನೊಂದೆಡೆ ಟೊಮೇಟೊಗೂ ಬ್ಯಾಂಕ್‌ ಸಾಲ (bank loan) ಕೊಡಬೇಕು ಎಂದು ಹಾಸ್ಯ ಚಟಾಕಿಗಳು ಹರಿದಾಡುತ್ತಿವೆ. ಇದರ ಮಧ್ಯೆ ದೇಶದ ಕೆಲ ಭಾಗಗಳಲ್ಲಿ ಟೊಮೇಟೊ ಅತಿ ಕಡಿಮೆ ಬೆಲೆಗೆ ಸಿಗುವುದು ನಿಜಕ್ಕೂ ಆಶ್ವರ್ಯ. ರಾಜ್ಯ ಸೇರಿದಂತೆ 1 ಕೇಜಿ ಟೊಮೆಟೋ (Tomato) 125 ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ.ನಾಟಿ, ಸೀಡ್ಸ್‌ ತಳಿಯ ಟೊಮೆಟೋಗೆ ಉತ್ತಮ ಬೆಲೆ ಬಂದಿದೆ. 15 ಕೇಜಿಯ ಒಂದು ಬಾಕ್ಸ್‌ (Box) ಟೊಮೆಟೋ 1900ಕ್ಕೆ ಮಾರಾಟವಾಗಿದೆ. ಸಾಮಾನ್ಯ ಟೊಮೆಟೋ (tomato) ಕೇಜಿಗೆ ಎಪಿಎಂಸಿಯಲ್ಲಿ ಕೇಜಿಗೆ 46 ರೂ.ನಂತೆ ಮಾರಾಟವಾಗುತ್ತಿವೆ. ಇದು ಅಂಗಡಿಗಳಲ್ಲಿ .80ರಿಂದ 120 ರೂ. ಗೆ ಮಾರಲಾಗುತ್ತಿರುವುದು ಗ್ರಾಹಕರ ಜೇಬಿಗೆ ಭಾರಿ (consumers' pockets.)ಪೆಟ್ಟು ಬಿದ್ದಿದೆ.

  ಇದನ್ನು ಓದಿ:ಇನ್ನೂ 10 ದಿನ Tomato Price ಏರುತ್ತಲೇ ಇರುತ್ತೆ; ಟೊಮೊಟೊ ದುಬಾರಿ ಬೆಲೆಗೆ ‘ಮಹಾ’ ಪರಿಹಾರ ಬೇಕಿದೆ!

  ಟೊಮೇಟೊ ಬೆಲೆ ಏರಿಕೆಯಿಂದ ಸದಾ ಮಾಡಲಾಗುತ್ತಿದ್ದ ಸುಲಭದ ಟೊಮೇಟೊ ಗೊಜ್ಜು ಮಾಡಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳು ನಾಡು ಮತ್ತು ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಟೊಮೆಟೋ ಬೆಳೆಗೆ ಹಾನಿಯಾಗಿದೆ. ಬೆಲೆ ಗಗಕ್ಕೇರಿದೆ. ಸದ್ಯ ದೇಶದ ಸಾಮಾನ್ಯ ನಾಗರಿಕರು ಹಣದುಬ್ಬರದ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ದೇಶದ ವಿವಿಧ ಪ್ರದೇಶಗಳಲ್ಲಿನ ಆಹಾರ ಪದಾರ್ಥಗಳ ಬೆಲೆಯಲ್ಲಿ ಭಾರಿ ಏರಿಕೆಯತ್ತ ಮುಖಮಾಡಿದೆ. ವರದಿ ಪ್ರಕಾರ ಪೋರ್ಟ್ ಬ್ಲೇರ್ ನಲ್ಲಿ ಟೊಮೇಟೊ ಅತಿ ಹೆಚ್ಚು ಅಂದರೆ ಇಲ್ಲಿ 1 ಕೆಜಿ ಟೊಮೆಟೊ ಬೆಲೆ 135 ರೂಗೆ ಬೆಲೆಗೆ ಮಾರಾಟವಾಗುತ್ತಿದೆ. ಇನ್ನು ದೆಹಲಿಯಲ್ಲಿ ಟೊಮೆಟೊ ಕೆಜಿಗೆ 80 ರೂ.ಗೆ ಮಾರಾಟವಾಗುತ್ತಿದೆ.

  ಈ ರಾಜ್ಯಗಳಲ್ಲಿ ಬೆಲೆ ವ್ಯತ್ಯಸ
  ವರದಿಯೊಂದರ ಪ್ರಕಾರ, ಅಗ್ಗದ ಬೆಲೆಗೆ ಟೊಮೆಟೊವನ್ನು ನವೆಂಬರ್ 24 ರಂದು ಜೋಧ್‌ಪುರ, ರಾಜಸ್ಥಾನ ಮತ್ತು ಗುಜರಾತ್‌ನ ಬೋಡೆಲಿಯಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ 1 ಕೆಜಿ ಟೊಮೆಟೊ ಬೆಲೆ 23 ರೂಪಾಯಿಗೆ ಮಾರಾಟವಾಗಿದೆ. ಮತ್ತೊಂದೆಡೆ ದೇಶದ ಹಮೀರ್‌ಪುರದಲ್ಲಿ ಅಗ್ಗದ ಆಲೂಗಡ್ಡೆ ಮಾರಾಟವಾಗಿದೆ. ಇಲ್ಲಿ ಜನರು ಆಲೂಗಡ್ಡೆಯನ್ನು ಕೆಜಿಗೆ 11 ರೂ ಕೊಟ್ಟು ಖರೀದಿಸುತ್ತಿದ್ದಾರೆ. ಇದಲ್ಲದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಡಿಮೆ ಬೆಲೆಯ ಈರುಳ್ಳಿ ಸಿಗುತ್ತಿದೆ. ಇಲ್ಲಿ ಈರುಳ್ಳಿ ಬೆಲೆ ಕೆಜಿಗೆ 11 ರೂ ಆಗಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಈರುಳ್ಳಿ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ತರಕಾರಿ, ಪೆಟ್ರೋಲ್‌ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿರುವಾಗ ಕೆಲ ಪ್ರದೇಶಗಳಲ್ಲಿ ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿರುವುದು ನಿಜಕ್ಕೂ ಗಮರ್ನಾಹ.

  ಇದನ್ನು ಓದಿ:Tomato Rate: ಕೋಲಾರದಲ್ಲಿ 1 ಸಾವಿರ ರೂ. ದಾಟಿದ ಟೊಮೆಟೊ ಬೆಲೆ, ಏರಿಕೆಯಾದರೂ ಕೋಲಾರದ ರೈತರಿಗೆ ಭಾರೀ ನಿರಾಸೆ

  ಅಲ್ಲಿ ತೈಲಗಳ ಬೆಲೆ ಜಾಸ್ತಿ
  ದೇಶದ ವಿವಿಧ ಸ್ಥಳಗಳಲ್ಲಿ ಖಾದ್ಯ ತೈಲಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಪೋರ್ಟ್ ಬ್ಲೇರ್ 1 ಲೀಟರ್ ಸಾಸಿವೆ ಎಣ್ಣೆ ಪ್ಯಾಕ್ ಅನ್ನು 234 ರೂ.ಗೆ ಮಾರಾಟ ಮಾಡುತ್ತಿದ್ದರೆ, ನಮ್ಮ ರಾಜ್ಯದ ಶಿವಮೊಗ್ಗದಲ್ಲಿ ಸಾಸಿವೆ ಎಣ್ಣೆ 110 ರೂ.ಗೆ ಮಾರಾಟವಾಗುತ್ತಿದೆ. ಲಕ್ನೋದಲ್ಲಿ ಶೇಂಗಾ ಎಣ್ಣೆ ಕೆಜಿಗೆ 265 ರೂ. ಇದ್ದರೆ, ಮೇಘಾಲಯದ ಜೋವಾಯ್ ನಲ್ಲಿ 140 ರೂಪಾಯಿ ಇದೆ, ಅಕಾಲಿಕ ಮಳೆ ಸುರಿದು ನಮ್ಮಲ್ಲಿ ತರಕಾರಿಗಳ ಬೆಲೆಯನ್ನು ಮಾತನಾಡಿಸಲು ಸಾಧ್ಯವಾಗುತ್ತಿಲ್ಲ, ಇನ್ನು ಆ ಕಡೆ ತೈಲಗಳು ದುಪ್ಪಟ್ಟು ಏರಿಕೆಯಾಗಿರುವುದನ್ನು ನೋಡಬಹುದು. ಟೊಮೆಟೊ ಕಡಿಮೆ ಬೆಲೆಗೆ ಸಿಗುತ್ತಿರುವ ವಿಷ್ಯಾ ಕೇಳಿ ಇಲ್ಲಿನ ಮಹಿಳೆಯರು ಹೌದೇ ಎಂದು ಮೂಗಿನ ಮೇಲೆ ಬೆರಳಿಟ್ಟ್ಕೋತಿದ್ದಾರೆ.
  Published by:vanithasanjevani vanithasanjevani
  First published: