Vedanta: ಭಾರತದ ಯುದ್ಧತಂತ್ರ ವಿಚಾರಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಿ

ವೇದಾಂತ ಸಾಹಿತ್ಯವು ಭಾರತೀಯ ರಾಜತಾಂತ್ರಿಕತೆ ಮತ್ತು ಯುಗಗಳಿಂದಲೂ ಯುದ್ಧಕ್ಕೆ ಪ್ರಬಲ ಮಾರ್ಗದರ್ಶಿಯಾಗಿದೆ. ವೇದಾಂತದ ಸೂಕ್ತಿಗಳು ಧರ್ಮ ಯುದ್ಧದ ತತ್ವವನ್ನು ಬೋಧಿಸುತ್ತವೆ. ಭಗವದ್ಗೀತೆಯಲ್ಲಿ ಹೇಳಿರುವಂತೆ ಧರ್ಮವು ಧ್ವಂಸಗೊಂಡಾಗ ಯುದ್ಧ ಅನಿವಾರ್ಯ ಎಂದಾದಲ್ಲಿ ನೀತಿವಂತರು ಆಯುಧ ಹಿಡಿಯಬಹುದೆಂಬ ಮಾತನ್ನು ತಿಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದಶಕಗಳಿಂದಲೂ ಜಾರಿಯಲ್ಲಿದ್ದ ಹಲವಾರು ಗೊಂದಲಮಯ ಕಟ್ಟುಪಾಡುಗಳು ಹಾಗೂ ಸಮ್ಮಿಶ್ರ ಸರಕಾರಗಳ ನಂತರ ಭಾರತವು 2014 ರಲ್ಲಿ ಬಹುಮತದ ಸರಕಾರದ ಆಶ್ರಯವನ್ನು ಪಡೆದುಕೊಂಡಿತು. 2019 ರಲ್ಲಿ ಪ್ರೇರಿತ ನಾಯಕರಾದ ನರೇಂದ್ರ ಮೋದಿಯವರು (PM Narendra Modi) ಸಮಕಾಲೀನ ಯುಗಧರ್ಮದೊಂದಿಗೆ ಯಶಸ್ವಿಯಾಗಿ ಸಂಪರ್ಕ ಸಾಧಿಸಿಕೊಂಡು ದೇಶದ ಅಭ್ಯುದಯವನ್ನು (Development of the Nation) ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ವಿಶ್ವಾಸವಿದೆ. ರಾಷ್ಟ್ರದ ಚೈತನ್ಯದೊಂದಿಗೆ ಆತ್ಮದ ಸಂವಹನ ನಡೆಸಲು ಸ್ವಯಂ-ತ್ಯಾಗ ಮಾಡುವ ನಾಯಕನ ಸಾಮರ್ಥ್ಯ ಅಪರೂಪದ್ದಾಗಿದ್ದರೂ ಭಾರತದ ಇತಿಹಾಸದಲ್ಲಿ ಇದೇನು ಅಭೂತಪೂರ್ವ ಘಟನೆಯಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ (Mahatma Gandhi) ವಿಷಯದಲ್ಲಿ ಕೂಡ ಹೀಗೆಯೇ ನಡೆದಿತ್ತು ಎಂಬುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.


ವೇದಾಂತದ ಕಟ್ಟಾಅಭಿಮಾನಿ ನರೇಂದ್ರ ಮೋದಿ:


ವೈಯಕ್ತಿಕವಾಗಿ ನರೇಂದ್ರ ಮೋದಿಯವರು ವೇದಾಂತದ ಕಟ್ಟಾ ಅಭಿಮಾನಿಯಾಗಿದ್ದಾರೆ. ಸ್ವಚ್ಛ ಭಾರತ (Clean India) ಅಭಿಯಾನದಲ್ಲಿ ಅಂತೆಯೇ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಯಾವುದೇ ಕಾರ್ಯಕ್ರಮದಲ್ಲಿ ಮೋದಿಯವರು ಸ್ವಾಮಿ ವಿವೇಕಾನಂದರ ಹಾಗೂ ವೇದಾಂತದ ಬೋಧನೆಗಳನ್ನು ಪ್ರಸ್ತಾವಿಸಿದ್ದಾರೆ.


ವಾಸ್ತವವಾಗಿ, ಗ್ರೀನ್ ಗ್ರಿಡ್ಸ್ ಇನಿಶಿಯೇಟಿವ್-ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ (OSOWOG), 2018 ರ ಅಕ್ಟೋಬರ್‌ನಲ್ಲಿ ನಡೆದ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ISA) ನ ಮೊದಲ ಅಸೆಂಬ್ಲಿಯಲ್ಲಿ ಮೋದಿಯವರು ಏಷ್ಯಾ, ಆಫ್ರಿಕಾ ಹಾಗೂ ಇನ್ನುಳಿದ ದೇಶಗಳು ಒಳಗೊಂಡಂತೆ ಸಂಪೂರ್ಣ ವಿಶ್ವವನ್ನೇ ಒಂದಾಗಿಸುವ ಗುರಿಯನ್ನು ಹೊಂದಿರುವ ಕಲ್ಪನೆಯನ್ನು ಮೊದಲ ಬಾರಿಗೆ ಪ್ರಸ್ತಾವಿಸಿದರು. ಸಂಪೂರ್ಣ ವಿಶ್ವವೇ ಸೂರ್ಯ-ಆಧ್ಯಾತ್ಮಿಕ ಪರಮಾತ್ಮನ ಶಕ್ತಿಗೆ ಸಮಾನವಾಗಿದೆ ಎಂಬುದಾಗಿ ಉಲ್ಲೇಖಿಸಿದ್ದರು.


ಮಾನವ ಪ್ರಜ್ಞೆಯನ್ನು ಬೆಳಗಿಸುವ ಶಕ್ತಿಯೊಂದಿಗೆ ವೇದಾಂತ ಭಾರತೀಯ ಜೀವನ ಮತ್ತು ಸಂಸ್ಕೃತಿಯ ಪ್ರತಿಯೊಂದು ಅಂಶವನ್ನು ಪೋಷಿಸಿದೆ ಮತ್ತು ಸಲಹಿದೆ ಈ ಮೂಲಕ ಭಾರತವನ್ನು ವಿಶ್ವದ ಅತ್ಯಂತ ಚೇತರಿಸಿಕೊಳ್ಳುವ ಮತ್ತು ಅದ್ಭುತವಾದ ನಾಗರಿಕತೆಯನ್ನಾಗಿ ಮಾಡಿದೆ. ಉಪನಿಷತ್ತುಗಳ ಮೂರು ಪ್ರಮುಖ ಮೂಲಗಳಾದ ಬ್ರಹ್ಮ ಸೂತ್ರಗಳು ಮತ್ತು ಭಗವದ್ಗೀತೆಗಳಿಂದ ಪಡೆದ ವೇದಾಂತದ ಅನೇಕ ಅಪ್ರತಿಮ ನಿಯಮಗಳು ಇಂದಿನ ದಿನಗಳಲ್ಲಿ ಆಧುನಿಕ ಭಾರತೀಯ ರಕ್ಷಾಕವಚವಾಗಿದೆ ಹಾಗೂ ವಿದೇಶಾಂಗ ನೀತಿಗೆ ಮಾರ್ಗದರ್ಶಕವಾಗಿದೆ.


ಸೈದ್ಧಾಂತಿಕ ಮಟ್ಟದಲ್ಲಿ ಭಾರತವು 26 ನೇ ಜನವರಿ 1950 ರಂದು ತನ್ನ ರಾಷ್ಟ್ರೀಯ ಧ್ಯೇಯವಾಕ್ಯವಾದ ಸತ್ಯಮೇವ ಜಯತೇ ಎಂಬ ಮಂತ್ರವನ್ನು ಅಳವಡಿಸಿಕೊಂಡಿದೆ. ಮತ್ತೊಂದು 'ಮಹಾವಾಕ್ಯ' (ಅತ್ಯುನ್ನತ ಘೋಷಣೆ) 'ವಸುಧೈವ ಕುಟುಂಬಕಂ' (ಜಗತ್ತು ಒಂದು ಕುಟುಂಬ), ಇದನ್ನು 'ಮಹಾ ಉಪನಿಷತ್' ನಿಂದ ಪಡೆಯಲಾಗಿದೆ.


ಸ್ವತಃ ಮೋದಿಯವರೇ ಈ ಘೋಷಣೆಗಳನ್ನು ರಾಜಕೀಯ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ಮೂಲಾಧಾರವೆಂದು ಒಪ್ಪಿಕೊಂಡಿದ್ದಾರೆ. ನೆರೆಹೊರೆಯ ದೇಶಗಳೊಂದಿಗಿನ ಆಪ್ತತೆ ಮತ್ತು ಲಸಿಕೆ ಮೈತ್ರಿಯಲ್ಲಿ ಮೋದಿಯವರ ಸಿದ್ಧಾಂತಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸಿದೆ. ಪಂಚಶೀಲ, ಬಹು-ಜೋಡಣೆ, ಡಿ-ಹೈಫನೇಟೆಡ್ ಸಂಬಂಧಗಳು ಮತ್ತು ಪ್ರಚೋದನೆಯ ಮುಖಾಂತರ ಕಾರ್ಯತಂತ್ರದ ಸಂಯಮವು ಮೊದಲಾದ ಭಾರತದ ವಿದೇಶ ನೀತಿಯ ಅನೇಕ ಅಂಶಗಳು ವೇದಾಂತಿ ದೃಷ್ಟಿಕೋವನ್ನು ಸೂಚಿಸುತ್ತದೆ.


ಆಧ್ಯಾತ್ಮಿಕ ಮತ್ತು ತಾತ್ವಿಕ ನೀತಿಗಳೊಂದಿಗೆ ಸಂಸ್ಕೃತಿಯೊಂದಿಗೆ ಮೇಳೈಸಿಕೊಂಡಿದೆ:


ವೇದಾಂತದ ಪ್ರಭಾವವು ಭಾರತದ ಆಧ್ಯಾತ್ಮಿಕ ಮತ್ತು ತಾತ್ವಿಕ ನೀತಿಗಳಿಗೆ ಸೀಮಿತವಾಗಿಲ್ಲ, ಇದು ಭಾರತೀಯ ರಾಜಕೀಯ ಮತ್ತು ಕಾರ್ಯತಂತ್ರದ ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ವೇದಾಂತದ ಅದ್ವೈತ ತತ್ತ್ವಶಾಸ್ತ್ರದಲ್ಲಿ ಬ್ರಹ್ಮನೊಂದಿಗಿನ ವೈಯಕ್ತಿಕ ಆತ್ಮದ (ಆತ್ಮ) ಅತ್ಯಗತ್ಯ ಸಮ್ಮಿಲನವು ಭಾರತದಲ್ಲಿ ಈ ವಿಚಾರಗಳನ್ನು ಅಭ್ಯಾಸ ಮಾಡುವವರಿಗೆ ಅಪರಿಮಿತ ಭರವಸೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಒದಗಿಸಿದೆ.


ಹೀಗಾಗಿ ಭಾರತವು ಯುಗಗಳಿಂದಲೂ ತೀವ್ರವಾದ ಸಾಮಾಜಿಕ-ರಾಜಕೀಯ ಮತ್ತು ಮಾನವೀಯ ವಿಪತ್ತುಗಳನ್ನು ಜಯಿಸಲು ಸಹಾಯ ಮಾಡುತ್ತದೆ. ಅಹಂ ಬ್ರಹ್ಮಾಸ್ಮಿ ಎಂಬ ವೇದಾಂತಿಯ ತತ್ವವು ಕ್ರಾಂತಿಕಾರಿ ನಾಯಕರವರೆಗೆ ಅನೇಕರನ್ನು ಪ್ರೇರೇಪಿಸಿದೆ ಮತ್ತು ದೀರ್ಘಕಾಲದ ಸವಾಲುಗಳ ಮುಖಾಂತರ ಪ್ರಾಚೀನ ನಾಗರಿಕತೆಗೆ ದೃಢತೆಯನ್ನು ಒದಗಿಸಿದೆ.


ಇದು ಭಾರತೀಯ ಕಾರ್ಯತಂತ್ರದ ಚಿಂತನೆಯನ್ನು ಹಿನ್ನಡೆಗಳನ್ನು ಮೀರಿ ಆಶಾವಾದದಿಂದ ನೋಡಲು ಅನುವು ಮಾಡಿಕೊಟ್ಟಿದೆ. ವೇದಾಂತದ ದೃಷ್ಟಿಕೋನವು ಭಾರತೀಯ ಸಮಾಜವನ್ನು ವ್ಯಾಪಿಸಿದೆ ಮತ್ತು ಪಂಗಡದ ಚಾಲಿತ ಚಿಂತನೆಯನ್ನು ಮೀರುವಂತೆ ಮಾಡಿದೆ. ಇದು ಬ್ರಹ್ಮನೊಂದಿಗಿನ ಆತ್ಮನ ಸ್ವರಮೇಳಕ್ಕೆ ಹೋಲುತ್ತದೆ.


ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ವೇದಾಂತದ ನಿಯಮಗಳು ಜಾತಿ, ಭಾಷೆ ಅಥವಾ ಧರ್ಮವನ್ನು ಲೆಕ್ಕಿಸದೆ ಸಂಪೂರ್ಣ ರಾಷ್ಟ್ರದಲ್ಲಿ ಪರಿಚಲನೆ ಸೃಷ್ಟಿಸಿದವು. ವಸಾಹತುಶಾಹಿ ಸಂಕೋಲೆಗಳನ್ನು ಕಿತ್ತೊಗೆದು ಜನರಲ್ಲಿರುವ ಅಪಾರ ಸಾಮರ್ಥ್ಯವನ್ನು ಬಹಿರಂಗಪಡಿಸಿದವು.


ಸ್ವಯಂ ಅರಿವಿನ ಚೈತನ್ಯವನ್ನು ಹುಟ್ಟುಹಾಕುವ ಮೂಲಕ, ವೇದಾಂತ ತತ್ವಶಾಸ್ತ್ರವು 19 ನೇ ಶತಮಾನದ ಸುಧಾರಣಾ ಚಳುವಳಿಗಳಿಗೆ ಸ್ಫೂರ್ತಿ ನೀಡಿತು. ರಾಜಾ ರಾಮ್ ಮೋಹನ್ ರಾಯ್ ಅವರ ಬ್ರಹ್ಮ ಸಮಾಜ, ದಯಾನಂದ ಸರಸ್ವತಿಯವರ ಆರ್ಯ ಸಮಾಜ, ವಿವೇಕಾನಂದರ ರಾಮಕೃಷ್ಣ ಮಿಷನ್ ಹೀಗೆ ಹಲವಾರು ಸಂಸ್ಥೆಗಳು ರೂಪುಗೊಂಡವು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತಹ ವರ್ಗರಹಿತ ಸಮಾಜ ಮತ್ತು ರಾಜ್ಯ ಸಮಾಜವಾದದ ಕ್ರಾಂತಿಕಾರಿ ವಕೀಲರನ್ನು ಪ್ರೇರೇಪಿಸಿತು.


‘ಆತ್ಮ ನಿರ್ಭರ ಭಾರತ’ ಅಂಶದ ಪರಿಕಲ್ಪನೆ:


ಹಿಂದೆಂದಿಗಿಂತಲೂ ಭಾರತದ ದೃಷ್ಟಿಕೋನವು ವೇದಾಂತದ ಅದ್ವೈತ ಶಾಲೆಯಿಂದ ವಿವರಿಸಲಾದ ಅಂತರ್ ಸಂಪರ್ಕತೆಯ ಮೇಲೆ ಸ್ಥಾಪನೆಗೊಂಡಿದೆ. ಹೀಗಾಗಿ, ‘ಸ್ವರಾಜ್ಯ’ ಪರಿಕಲ್ಪನೆಯು ಆಧ್ಯಾತ್ಮಿಕ ಮತ್ತು ರಾಜಕೀಯ ಪರಿಕಲ್ಪನೆಯಾಗಿದೆ. ರಾಷ್ಟ್ರದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಮೋಚನೆಯೊಂದಿಗೆ ಅಂತರ್-ಸಂಪರ್ಕಿತ ಜಗತ್ತಿನಲ್ಲಿ ಸಮೀಕರಿಸಬಹುದು. ಭೌಗೋಳಿಕ-ಕಾರ್ಯತಂತ್ರದ ಮಟ್ಟದಲ್ಲಿ, ಸ್ವರಾಜ್ಯವು ಭಾರತದ ಕಾರ್ಯತಂತ್ರದ ಸ್ವಾಯತ್ತತೆಯನ್ನು ವ್ಯಾಖ್ಯಾನಿಸುತ್ತದೆ. ಪ್ರಧಾನಿ ಮೋದಿಯವರ ಅಡಿಯಲ್ಲಿ ‘ಆತ್ಮ ನಿರ್ಭರ ಭಾರತ’ ಎಂಬ ಅಂಶವು ಮತ್ತೊಂದು ಕಲ್ಪನೆಯಾಗಿದೆ. ಭಾರತದ ಆರ್ಥಿಕ ಪ್ರಯಾಣದಲ್ಲಿ ಈ ಅಂಶಗಳು ಸ್ವಾತಂತ್ರ್ಯವನ್ನು ಸೂಚಿಸುತ್ತದೆ.


ಸ್ವರಾಜ್ಯ ಎಂದರೆ ಎಲ್ಲರ ವಿಮೋಚನೆ ಅಭ್ಯುದಯ ಎಂಬ ಕಲ್ಪನೆಯು ಗಾಂಧಿಯವರ ಆದರ್ಶವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯಂತೆ ರಾಷ್ಟ್ರಗಳು ಸ್ವತಂತ್ರವಾಗಿ ಮತ್ತು ಮಾನವೀಯತೆಯ ದೊಡ್ಡ ಗುರಿಗಳೊಂದಿಗೆ ಸಹಜೀವನದ ಸಂಬಂಧವನ್ನು ಹೊಂದಿರುವಾಗ, ಪ್ರಾದೇಶಿಕ ಮತ್ತು ಜಾಗತಿಕ ಸಾರ್ವಜನಿಕ ಅಂಶಗಳಿಗೆ ವ್ಯಾಪಕ ಬದ್ಧತೆಯೊಂದಿಗೆ ಭಯೋತ್ಪಾದನೆಯ ವಿರುದ್ಧ, ಶುದ್ಧ ಶಕ್ತಿ, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು, ಹವಾಮಾನ ಬದಲಾವಣೆ, ವಿಪತ್ತು ಪರಿಹಾರ ಮತ್ತು ಮಾನವೀಯ ನೆರವು ಮೊದಲಾದ ಸ್ವಾವಲಂಬನೆಯ ಮನೋಭಾವನೆಯನ್ನು ಉಂಟುಮಾಡುತ್ತದೆ.


ವಿಶ್ವಕ್ಕೆ ಸರ್ವೋದಯದ ಪಾಠ:


ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿ ಹಾಗೂ ಬಾಹ್ಯ ಒಗ್ಗೂಡಿಕೆಯನ್ನು ಒತ್ತಿಹೇಳುವ ವೇದಾಂತದ ವಿಧಾನವು ರಾಷ್ಟ್ರಗಳನ್ನು ಹೆಚ್ಚು ಸ್ವತಂತ್ರಗೊಳಿಸಬಹುದು. ವೇದಾಂತದ ನಿಯಮಗಳು ವಿಶ್ವಕ್ಕೆ ಸರ್ವೋದಯದ ಪಾಠವನ್ನು ಕಲಿಸುತ್ತದೆ. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ಹೇಳಿದ ಮಾತನ್ನು ನೆನಪಿಸಿಕೊಳ್ಳಲೇಬೇಕು.


“ನನ್ನ ರಾಷ್ಟ್ರೀಯತೆ ನನ್ನ ಸ್ವದೇಶಿಯಂತೆ ವಿಶಾಲವಾಗಿದೆ. ಇಡೀ ಜಗತ್ತಿಗೆ ಪ್ರಯೋಜನವಾಗುವಂತೆ ನಾನು ಭಾರತದ ಉದಯವನ್ನು ಬಯಸುತ್ತೇನೆ” ಇದೇ ಹಾದಿಯಲ್ಲಿ ಮೋದಿಯವರು ಪ್ರಧಾನಿ ಮೋದಿಯವರು 25 ನೇ ಸೆಪ್ಟೆಂಬರ್ 2021 ರಂದು 76 ನೇ ಯುಎನ್ ಜನರಲ್ ಅಸೆಂಬ್ಲಿಯಲ್ಲಿನ ಭಾಷಣದಲ್ಲಿ ಭಾರತ ಬೆಳೆದಾಗ ಸಂಪೂರ್ಣ ವಿಶ್ವವೇ ಬೆಳೆಯುತ್ತದೆ ಭಾರತ ಸುಧಾರಣೆಗೊಂಡಾಗ ಜಗತ್ತು ರೂಪಾಂತರಗೊಳ್ಳುತ್ತದೆ ಎಂಬ ಮಾತನ್ನು ಉಲ್ಲೇಖಿಸಿದ್ದರು.


ವೇದಾಂತ ಸಾಹಿತ್ಯವು ಭಾರತೀಯ ರಾಜತಾಂತ್ರಿಕತೆ ಮತ್ತು ಯುಗಗಳಿಂದಲೂ ಯುದ್ಧಕ್ಕೆ ಪ್ರಬಲ ಮಾರ್ಗದರ್ಶಿಯಾಗಿದೆ. ವೇದಾಂತದ ಸೂಕ್ತಿಗಳು ಧರ್ಮ ಯುದ್ಧದ ತತ್ವವನ್ನು ಬೋಧಿಸುತ್ತವೆ. ಭಗವದ್ಗೀತೆಯಲ್ಲಿ ಹೇಳಿರುವಂತೆ ಧರ್ಮವು ಧ್ವಂಸಗೊಂಡಾಗ ಯುದ್ಧ ಅನಿವಾರ್ಯ ಎಂದಾದಲ್ಲಿ ನೀತಿವಂತರು ಆಯುಧ ಹಿಡಿಯಬಹುದೆಂಬ ಮಾತನ್ನು ತಿಳಿಸುತ್ತದೆ. ಇದಕ್ಕೆ ತಕ್ಕ ಉದಾಹರಣೆಯೆಂದರೆ ಭಾರತದ ಗಡಿಯಲ್ಲಿ ಚೀನಾದ ಆಕ್ರಮಣಕಾರಿ ನಡೆಗಳಿಗೆ ಭಾರತದ ದೃಢವಾದ ಪ್ರತಿಕ್ರಿಯೆಯಾಗಿದೆ.


ವೇದಾಂತಿ ಸಿದ್ಧಾಂತ ಮಿಲಿಟರಿ ಅಧ್ಯಯನಗಳಿಗೆ ಹೇಗೆ ಪೂರಕವಾಗಿದೆ:


ವೇದಾಂತಿ ಸಿದ್ಧಾಂತಕ್ಕೆ ಅವಿಭಾಜ್ಯವಾಗಿರುವ ಭಗವದ್ಗೀತೆಯು ಮಿಲಿಟರಿ ಅಧ್ಯಯನಗಳಿಗೆ ಸಂಬಂಧಿಸಿದಂತೆ ಅಪಾರ ಮೌಲ್ಯವನ್ನು ಪಡೆದುಕೊಂಡಿದೆ. ಕರ್ಮ ಅಥವಾ ಕ್ರಿಯೆಯ ಮೂಲಕ ಮೋಕ್ಷವನ್ನು ನೀಡುತ್ತದೆ ಅಂದರೆ ಅರ್ಜುನನನ್ನು 'ರಾಜಸಿಕ್' (ಸ್ವಾರ್ಥ ಭಾವೋದ್ರೇಕ ಮತ್ತು ಆಕ್ರಮಣಶೀಲತೆ) ಅಥವಾ 'ತಾಮಸಿಕ್' (ಕತ್ತಲೆಯ ಭಾವನೆಗಳು - ನಿಷ್ಕ್ರಿಯತೆ) ಯಿಂದ ನಡೆಸಲ್ಪಡದ ಬದ್ಧವಾದ 'ಸಾತ್ವಿಕ ಕರ್ಮಯೋಗಿ' ಆಗಿ ವಿಕಸನಗೊಳ್ಳಲು ಪ್ರೇರೇಪಿಸಿದಂತೆಯೇ ವೇದಾಂತದ ತತ್ವಗಳು ಸತ್ಯವನ್ನು ಮರುಸ್ಥಾಪಿಸಲು ಹಾಗೂ ಉನ್ನತ ಉದ್ದೇಶಕ್ಕಾಗಿ ಹೋರಾಡಲು ನೀತಿವಂತ ಪ್ರೇರಣೆಗಳನ್ನು ಒದಗಿಸುತ್ತದೆ.


ಮಾತೃಭೂಮಿಯೆಡೆಗೆ ಕರ್ತವ್ಯ ಕಲ್ಪನೆಯ ಬದ್ಧತೆಯ ಮೌಲ್ಯವಾಗಿದೆ. ಭಾರತದ ಅನೇಕ ನೀತಿ ಹಾಗೂ ಕಾರ್ಯಗಳಿಗೆ ಮಾರ್ಗದರ್ಶನ ನೀಡುವ ಸಾತ್ವಿಕ ನಿಯಮವಾಗಿದೆ. ವೇದಾಂತದಲ್ಲಿರುವ ಸಿದ್ಧಾಂತಗಳು ಭಾರತೀಯ ಮಹತ್ವದ ಸಂಪ್ರದಾಯದ ಭಾಗವಾಗಿದ್ದು ಇದಕ್ಕೆ ವ್ಯಾಪಕವಾಗಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸುವ ಮೂಲಕ ಪ್ರಸಿದ್ಧಗೊಳಿಸಬೇಕಿದೆ.


(ಲೇಖಕರು: ಸುಜನ್ ಚಿನೋಯ್. ಇವರು ಮಾಜಿ ರಾಯಭಾರಿಯಾಗಿರುವ ಮನೋಹರ್ ಪರಿಕ್ಕರ್ ಪ್ರಸ್ತುತ ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಸ್‌ನ(ರಕ್ಷಣಾ ಅಧ್ಯಯನಗಳು ಹಾಗೂ ವಿಶ್ಲೇಷಣೆಗಳ ವಿಶ್ವವಿದ್ಯಾನಿಲಯದ ಮಹಾನಿರ್ದೇಶಕರು)ಡೈರೆಕ್ಟರ್ ಜನರಲ್ ಆಗಿದ್ದಾರೆ)


Published by:Soumya KN
First published: