ಪಾಕಿಸ್ತಾನದಲ್ಲಿ ಜೈಷ್ ಉಗ್ರ ಕ್ಯಾಂಪ್ ಉಡಾಯಿಸಿದ ಪಂಚ ಭಾರತೀಯ ಯೋಧರಿಗೆ ವಾಯುಸೇನಾ ಪದಕ

ಮಿರೇಜ್ ಯುದ್ಧವಿಮಾನದ ಪೈಲಟ್​ಗಳಾಗಿ ಉಗ್ರರ ಕ್ಯಾಂಪ್ ಉಡಾಯಿಸಿದವರು ಅಮಿತ್ ರಂಜನ್, ರಾಹುಲ್ ಬಸೋಯಾ, ಪಂಕಜ್ ಭುಜಾಡೆ, ಬಿಕೆಎನ್ ರೆಡ್ಡಿ ಮತ್ತು ಶಶಾಂಕ್ ಸಿಂಗ್.

news18
Updated:August 14, 2019, 5:09 PM IST
ಪಾಕಿಸ್ತಾನದಲ್ಲಿ ಜೈಷ್ ಉಗ್ರ ಕ್ಯಾಂಪ್ ಉಡಾಯಿಸಿದ ಪಂಚ ಭಾರತೀಯ ಯೋಧರಿಗೆ ವಾಯುಸೇನಾ ಪದಕ
ಸಾಂದರ್ಭಿಕ ಚಿತ್ರ
  • News18
  • Last Updated: August 14, 2019, 5:09 PM IST
  • Share this:
ನವದೆಹಲಿ(ಆ. 14): ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ಮಾಡಿದ್ದ ಭಾರತದ ವಾಯುಸೇನೆ ಪೈಲಟ್​ಗಳಿಗೆ ಮೆಡಲ್​ಗಳನ್ನ ನೀಡಿ ಗೌರವಿಸಲಾಗಿದೆ. ಬಾಲಾಕೋಟ್ ವಾಯುದಾಳಿ ಕಾರ್ಯಾಚರಣೆಯಲ್ಲಿದ್ದ ವಿಂಗ್ ಕಮಾಂಡರ್ ಅಮಿತ್ ರಂಜನ್ ಮತ್ತು ಸ್ಕ್ವಾಡ್ರನ್ ಲೀಡರ್​ಗಳಾದ ರಾಹುಲ್ ಬಸೋಯಾ, ಪಂಕಜ್ ಭುಜಾಡೆ, ಬಿಕೆಎನ್ ರೆಡ್ಡಿ ಮತ್ತು ಶಶಾಂಕ್ ಸಿಂಗ್ ಅವರಿಗೆ ವಾಯು ಸೇನಾ ಮೆಡಲ್ ಕೊಡಲಾಗಿದೆ. ಈ ಐವರೂ ಕೂಡ ಆ ಕಾರ್ಯಾಚರಣೆಯಲ್ಲಿ ಮಿರೇಜ್ 2000 ಫೈಟರ್ ವಿಮಾನದ ಪೈಲಟ್​ಗಳಾಗಿ ಕಾರ್ಯನಿರ್ವಹಿಸಿದ್ದರು. ಕ್ಷಿಪ್ರಗತಿಯಲ್ಲಿ, ಶರವೇಗದಲ್ಲಿ ತಮ್ಮ ಕಾರ್ಯಾಚರಣೆಯನ್ನು ನಿಖರವಾಗಿ ಮಾಡಿ ಮುಗಿಸಿ ಇವರು ವಾಪಸ್ ಬಂದಿದ್ದರು.

40 ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮ ಉಗ್ರ ದಾಳಿ ಘಟನೆಗೆ ಪ್ರತೀಕಾರವಾಗಿ ಭಾರತೀಯ ಸೇನೆಯು 2016ರ ಫೆಬ್ರವರಿಯಲ್ಲಿ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ಮಾಡಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಒಳಗಿರುವ ಪಖ್ತುಂಕ್ವ ಪ್ರಾಂತ್ಯದೊಳಗಿರುವ ಬಾಲಾಕೋಟ್​ನಲ್ಲಿ ಜೈಷ್ ಉಗ್ರರ ಶಿಬಿರವನ್ನು ಟಾರ್ಗೆಟ್ ಮಾಡಲಾಯಿತು. ಈ ಐವರು ಏರ್​ಫೋರ್ಸ್ ಪೈಲಟ್​ಗಳು ತಮ್ಮ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಕಾಶ್ಮೀರ ವಿಚಾರದಲ್ಲಿ ವಿರೋಧಿಸುವವರ ಮನ ಮಾವೋವಾದಿ, ಭಯೋತ್ಪಾದಕರ ಪರ ಮಿಡಿಯುತ್ತದೆ: ಪ್ರಧಾನಿ ಮೋದಿ!

ಬಾಲಾಕೋಟ್​ನಲ್ಲಿ ಭಾರತದಿಂದ ವಾಯುದಾಳಿಯಾದ ಒಂದು ದಿನದ ಬಳಿಕ ಪಾಕಿಸ್ತಾನೀ ಸೇನೆಯ ವಿಮಾನಗಳು ಭಾರತದ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದ್ದವು. ಆಗ ನಡೆದ ಘರ್ಷಣೆಯಲ್ಲಿ ಭಾರತೀಯ ಯುದ್ಧವಿಮಾನಗಳು ಪಾಕಿಸ್ತಾನೀಯರನ್ನು ಹಿಮ್ಮೆಟ್ಟಿಸಿದವು. ಹಳೆಯ ಮಿಗ್-21 ಬೈಸನ್ ಯುದ್ಧವಿಮಾನ ಚಲಾಯಿಸುತ್ತಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದ ಅಮೆರಿಕ ನಿರ್ಮಿತ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಪಾಕಿಸ್ತಾನದ ಗಡಿಭಾಗದೊಳಗೆ ಇಳಿದ ಅಭಿನಂದನ್ ಅವರನ್ನು ಪಾಕಿಸ್ತಾನೀಯರು ಬಂಧಿಸಿದರು. 3 ದಿನಗಳ ಬಳಿಕ ಅವರನ್ನು ಪಾಕ್ ಬಿಡುಗಡೆಗೊಳಿಸಿತು.

ಅಭಿನಂದನ್ ಅವರ ಧೈರ್ಯಶಾಲಿತನವನ್ನು ಪರಿಗಣಿಸಿ ಅವರಿಗೆ ವೀರ ಚಕ್ರ ನೀಡಲಾಗುತ್ತಿದೆ. ಹಾಗೆಯೇ, ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರಿಗೂ  ಯುದ್ಧ ಸೇವಾ ಮೆಡಲ್ ಕೊಟ್ಟು ಗೌರವಿಸಲಾಗುತ್ತಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published: August 14, 2019, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading