ರಾಹುಲ್ ಗಾಂಧಿಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯಿಸಿ ಪತ್ರ ಬರೆದ ವಾಸ್ಮಿ ಚಂದ್ ರೆಡ್ಡಿ

ರಾಹುಲ್ ಗಾಂಧಿಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿ ಎಐಸಿಸಿ ಕಾರ್ಯದರ್ಶಿ ವಾಸ್ಮಿ ಚಂದ್ ರೆಡ್ಡಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ(ಜೂ. 24) : ಸದ್ಯ ಇಡೀ‌ ದೇಶದಲ್ಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ನಡೆಗಳನ್ನು ಗಟ್ಟಿ ದನಿಯಲ್ಲಿ ಖಂಡಿಸುತ್ತಿರುವ ಏಕೈಕ ನಾಯಕ ರಾಹುಲ್ ಗಾಂಧಿ ಅವರನ್ನು ಮತ್ತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರನ್ನಾಗಿ ನೇಮಿಸುವ ಕೂಗು ಎದ್ದಿದೆ.

ಕೊರೋನಾ ಮತ್ತು ಲಾಕ್​ಡೌನ್ ಸಮಸ್ಯೆಗಳು ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಎಐಸಿಸಿ ಮಹಾ ಅಧಿವೇಶನ ನಡೆದಿರುತ್ತಿತ್ತು. ಜೊತೆಗೆ ಆ ಮಹಾ ಅಧಿವೇಶನದಲ್ಲೇ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷಗಾದಿಯಲ್ಲಿ ಪ್ರತಿಷ್ಠಿಸುವ ನಿರ್ಧಾರವೂ ಆಗಿರುತ್ತಿತ್ತು. ಆದರೆ ಕೊರೋನಾ ಮತ್ತು ಲಾಕ್​ಡೌನ್ ಸಮಸ್ಯೆಗಳಿಂದಾಗಿ ಎಐಸಿಸಿ ಮಹಾ ಅಧಿವೇಶನವೇ ಮುಂದಕ್ಕೆ ಹೋಗುತ್ತಿದೆ.

ಸದ್ಯದ ಮಾಹಿತಿಗಳ ಪ್ರಕಾರ ಬಿಹಾರ ವಿಧಾನಸಭಾ ಚುನಾವಣೆವರೆಗೂ ಎಐಸಿಸಿ ಮಹಾ ಅಧಿವೇಶನ ನಡೆಯುವುದು ಅನುಮಾನ. ಅದಾದ ಬಳಿಕ ಮಹಾ ಅಧಿವೇಶನ ನಡೆದು ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿಸುವ ತೀರ್ಮಾನ ಕೈಗೊಂಡರೂ ಅವರು ಮುಂದಿನ ವರ್ಷ ನಡೆಯುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆವರೆಗೂ ಅಧ್ಯಕ್ಷಗಾದಿ ಸ್ವೀಕರಿಸುವ ಸಾಧ್ಯತೆಗಳಿಲ್ಲ.

ಆದರೆ ಈ ನಡುವೆ ರಾಹುಲ್ ಗಾಂಧಿಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿ ಎಐಸಿಸಿ ಕಾರ್ಯದರ್ಶಿ ವಾಸ್ಮಿ ಚಂದ್ ರೆಡ್ಡಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ಇಂದು ಒಂದೇ ದಿನ ದೆಹಲಿಯಲ್ಲಿ 3,788 ಕೊರೋನಾ ಪ್ರಕರಣಗಳು ಪತ್ತೆ

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತಾಗಿತ್ತು. ಈಗ ವಾಸ್ಮಿ ಚಂದ್ ರೆಡ್ಡಿ ಪತ್ರ ಬರೆದಿರುವುದರಿಂದ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಒತ್ತಾಯಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋತ‌ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷಗಾದಿಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ವಾಪಸ್ ಪಡೆಯಬೇಕೆಂದು ಭಾರೀ ಒತ್ತಡ ಬಂದಿದ್ದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕಾರಣ ಮತ್ತೆ ಸೋನಿಯಾ ಗಾಂಧಿ ಅವರನ್ನೇ ಎಐಸಿಸಿ ಅಧ್ಯಕ್ಷರನ್ನಾಗಿ ಹಂಗಾಮಿಯಾಗಿ ನೇಮಿಸಲಾಗಿತ್ತು. ಸದ್ಯ ಮತ್ತೆ ಅಧ್ಯಕ್ಷರಾಗುವ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
First published: