ಚೆನ್ನೈ (ನವೆಂಬರ್ 16): ದೇಶದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಗಳಲ್ಲೊಂದಾದ ವಾಸನ್ ಐ ಕೇರ್ ಸ್ಥಾಪಕ ಎಎಂ ಅರುಣ್ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಕೆಲವರು ಅರುಣ್ ಅವರದ್ದು ಆತ್ಮಹತ್ಯೆ ಎಂದರೆ, ಇನ್ನೂ ಕೆಲವರು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದಿದ್ದಾರೆ. ಆದರೆ, ಈ ಬಗ್ಗೆ ಇನ್ನೂವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ತಮಿಳುನಾಡಿನ ತಿರುಚ್ಚಿಯಲ್ಲಿ ಕುಟುಂಬ ನಡೆಸಿಕೊಂಡು ಹೋಗುತ್ತಿದ್ದ ಔಷಧಾಲಯ ಉದ್ಯಮವನ್ನು 1991ರಲ್ಲಿ ಅರುಣ್ ಕೈಗೆತ್ತಿಕೊಂಡರು. ವಾಸನ್ ಮೆಡಿಕಲ್ ಹಾಲ್ ಎಂಬುದು ಇದರ ಹೆಸರಾಗಿತ್ತು. 2002ರಲ್ಲಿ ತಿರುಚ್ಚಿಯಲ್ಲಿ ವಾಸನ್ ಐ ಕೇರ್ ಹೆಸರಿನ ಕಣ್ಣಿನ ಆಸ್ಪತ್ರೆಯನ್ನು ಅರುಣ್ ಆರಂಭಿಸಿದರು. ಇದು ಅವರು ಸ್ಥಾಪಿಸಿದ ಮೊದಲ ಕಣ್ಣಿನ ಆಸ್ಪತ್ರೆ.
ನಂತರ ವರುಣ್ ದಕ್ಷಿಣ ಭಾರತದಲ್ಲಿ 100ಕ್ಕೂ ಅಧಿಕ ಕಡೆಗಳಲ್ಲಿ ಕಣ್ಣಿನ ಆಸ್ಪತ್ರೆಯನ್ನು ಆರಂಭಿಸಿದರು. ವಾಸನ್ ಐ ಕೇರ್ ಕಣ್ಣಿನನ ಚಿಕಿತ್ಸೆಗೆ ತುಂಬಾನೇ ಹೆಸರು ಮಾಡಿತ್ತು. ಆದರೆ, 2015ರಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕಾರ್ತಿ ಭಾಗಿಯಾಗಿದ್ದ ಅಕ್ರಮ ಹಣ ವಹಿವಾಟಿನ ಪ್ರಕರಣದಲ್ಲಿ ವಾಸನ್ ಐ ಕೇಸ್ ಹೆಸರು ಸೇರಿಕೊಂಡಿತ್ತು. ಕಾರ್ತಿ ಕಪ್ಪು ಹಣವನ್ನು ಬಿಳಿ ಮಾಡಲು ಈ ಸಂಸ್ಥೆಯನ್ನು ಬಳಕೆ ಮಾಡಿಕೊಂಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಅನೇಕ ವಾಸನ್ ಐ ಕೇರ್ ಮೇಲೆ ತೆರಿಗೆ ಇಲಾಖೆ ಹಾಗೂ ಜಾರಿನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ