BJP National Executive Council: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಮನೇಕಾ ಗಾಂಧಿ, ವರುಣ್ ಗಾಂಧಿ ಹೊರಕ್ಕೆ!

ಬಿಜೆಪಿಯ ಹೊಸ ಟೀಂನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 80 ಜನ ಕಾರ್ಯಕಾರಿ ಸದಸ್ಯರಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಿಥುನ್ ಚಕ್ರವರ್ತಿ ಸಹ ಕಾರ್ಯಾಕಾರಿ ಸದಸ್ಯರಾಗಿದ್ದಾರೆ. 13 ಸದಸ್ಯರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.

ವರುಣ್ ಗಾಂಧಿ, ಮನೇಕಾ ಗಾಂಧಿ,

ವರುಣ್ ಗಾಂಧಿ, ಮನೇಕಾ ಗಾಂಧಿ,

 • Share this:
  ಗುರುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ (BJP's national executive council) ಹೊಸ ಸದಸ್ಯರ ಪಟ್ಟಿ ಬಿಡುಗಡೆಯಾಗಿದ್ದು, ಮಾಜಿ ಸಚಿವೆ ಮನೇಕಾ ಗಾಂಧಿ (Maneka Gandhi) ಹಾಗೂ ಅವರ ಪುತ್ರ ಸಂಸದ ವರುಣ್ ಗಾಂಧಿ (Varun Gandhi) ಹೆಸರನ್ನು ಕೈ ಬಿಡಲಾಗಿದೆ. ಲಖಿಂಪುರ್ ಖೇರಿ (Lakhimpur Kheri Violence) ಹಿಂಸಾಚಾರ ವಿಷಯದಲ್ಲಿ ವರುಣ್ ಗಾಂಧಿ, ರೈತರನ್ನು ಬೆಂಬಲಿಸಿದ ಹಿನ್ನೆಲೆ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಇರ್ವರ ನಾಯಕರ ಜೊತೆ ವಿನಯ್ ಕಟಿಯಾರ್ ಅವರಿಗೂ ಕಾರ್ಯಕಾರಿಣಿಯಿಂದ ಕೊಕ್ ಕೊಡಲಾಗಿದೆ.

  ಒಂದೂವರೆ ವರ್ಷದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಬಂಗಾಳ ಚುನಾವಣೆ ವೇಳೆ ಕಮಲ ಹಿಡಿದ ನಟ ಮಿಥುನ್ ಚಕ್ರವರ್ತಿಗೆ ಸ್ಥಾನ ನೀಡಲಾಗಿದೆ. ತಮಿಳಿನಾಡಿನ ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಹೆಸರು ಈ ಪಟ್ಟಿಯಲ್ಲಿದೆ. ಬಿಜೆಪಿಯ ಕಾರ್ಯಕಾರಿಣಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎಲ್.ಕೆ.ಅಡ್ವಾಣಿ, ಡಾ.ಮುರಳಿ ಮನೋಹರ್ ಜೋಶಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಪಿಯೂಷ್ ಗೋಯಲ್ ಸೇರಿದಂತೆ 80 ಸದಸ್ಯರನ್ನು ಒಳಗೊಂಡಿದೆ. ಇವರ ಜೊತೆ 50 ವಿಶೇಷ ಆಮಂತ್ರಿತರು ಮತ್ತು 179 ಜನ ಸ್ಥಾಯಿ ಆಮಂತ್ರಿತ ಸದಸ್ಯರು ಬಿಜೆಪಿ ಕಾರ್ಯಕಾರಿಣಿಯಲ್ಲಿದ್ದಾರೆ.

  309 ಸದಸ್ಯರ ಹೆಸರು ಘೋಷಣೆ

  ಇಂದು ಒಟ್ಟು 309 ಸದಸ್ಯರ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಪಕ್ಷದ ಕೇಂದ್ರೀಯ ಪದಾಧಿಕಾರಿಗಳು, ಎಲ್ಲ ಮೋರ್ಚಾಗಳ ಅಧ್ಯಕ್ಷರು, ಎಲ್ಲ ರಾಷ್ಟ್ರೀಕ ವಕ್ತಾರರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ಸ್ಥಳೀಯ ಅಧ್ಯಕ್ಷರು, ಎಲ್ಲ ರಾಜ್ಯಗಳ ಬಿಜೆಪಿ ಉಸ್ತುವಾರಿ ನಾಯಕರು, ರಾಜ್ಯಸಭಾ ಮತ್ತು ಲೋಕಸಭಾ ಮುಖ್ಯ ಸಚೇತಕರು ಅನೇಕ ಮುಖಂಡರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

  ಮಾಜಿ ಸಿಎಂಗಳಿಗೆ ಆದ್ಯತೆ

  ಬಿಜೆಪಿಯ ಹೊಸ ಟೀಂನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 80 ಜನ ಕಾರ್ಯಕಾರಿ ಸದಸ್ಯರಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಿಥುನ್ ಚಕ್ರವರ್ತಿ ಸಹ ಕಾರ್ಯಾಕಾರಿ ಸದಸ್ಯರಾಗಿದ್ದಾರೆ. 13 ಸದಸ್ಯರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಇದರಲ್ಲಿ ಛತ್ತೀಸಗಢದ ಮಾಜಿ ಸಿಎಂ ರಮಣ್ ಸಿಂಗ್, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ, ಜಾರ್ಖಂಡ್ ಮಾಜಿ ಸಿಎಂ ರಘುವರ್ ದಾಸ್ ಹೆಸರುಗಳಿವೆ. 7 ಸದಸ್ಯರನ್ನು ರಾಷ್ಟ್ರೀಯ ಮಹಾಸಚಿವರನ್ನಾಗಿ ಮಾಡಲಾಗಿದೆ. ಇದರಲ್ಲಿ ಕೈಲಾಶ್ ವಿಜಯವರ್ಗಿಯ ಅವರ ಹೆಸರಿದೆ.

  ತೇಜಸ್ವಿ ಸೂರ್ಯ ಮುಂದುವರಿಕೆ

  ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಸಂಸದ ತೇಜಸ್ವಿ ಸೂರ್ಯ ಅವರನ್ನ ಮುಂದುವರಿಸಲಾಗಿದೆ. ತಮಿಳುನಾಡಿನ ಶಾಸಕಿ ವನ್ತಿ ಶ್ರೀನಿವಾಸ್ ಅವರನ್ನು ಬಿಜೆಪಿ ಮಹಿಳಾ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ರಾಜಕುಮಾರ್ ಚಹರ್ ಗೆ ಕಿಸಾನ್ ಮೋರ್ಚಾ, ಲಾಲ್ ಸಿಂಗ್ ಆರ್ಯ ಅವರಿಗೆ ಎಸ್‍ಸಿ ಮೋರ್ಚಾ, ಸಮೀರ್ ಓರಾಂವ್‍ಗೆ ಎಸ್.ಟಿ ಮೋರ್ಚಾ ಮತ್ತು ಜಮಾಲ್ ಸಿದ್ಧಿಕ್ ಗೆ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಸ್ಥಾನ ನೀಡಲಾಗಿದೆ.

  ಇದನ್ನು ಓದಿ: Lakhimpur Kheri Violence: ಸಚಿವರ ಮಗ ಮಿಶ್ರಾನನ್ನು ವಿಚಾರಣೆಗೆ ಕರೆಸಿಕೊಂಡ ಪೊಲೀಸರು; ಪಂಜಾಬ್ ಗಡಿಯಲ್ಲಿ ಸಿಧು ಬಂಧನ

  ನವೆಂಬರ್ 7ರಂದು ಮೊದಲ ಬೈಠಕ್

  ಬಿಜೆಪಿಯ ಮೊದಲ ರಾಷ್ಟ್ರೀಯ ಕಾರ್ಯಕಾರಿಣಿಯ ಮೊದಲ ಬೈಠಕ್ ನವದೆಹಲಿಯಲ್ಲಿ ನವೆಂಬರ್ 7ರಂದು ನಡೆಯಲಿದೆ. 2020ರಲ್ಲಿ ಜೆ.ಪಿ.ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ನಡೆಯುತ್ತಿರುವ ಬೈಠಕ್ ಇದಾಗಿದೆ. ಈ ಬೈಠಕ್ ನಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.

  ವರದಿ: ಮೊಹ್ಮದ್​​ ರಫೀಕ್ಕೆ
  Published by:HR Ramesh
  First published: