ದೇವರಿಗೇ ಉಸಿರುಗಟ್ಟಿಸಿದ ಮಾಲಿನ್ಯ; ರಕ್ಷಣೆಗಾಗಿ ಮಾಸ್ಕ್​ ತೊಟ್ಟ ಭಗವಂತ

ನಂಬಿಕೆಗೆ ಹೆಸರಾಗಿರುವ ವಾರಣಾಸಿಗಳಲ್ಲಿ ದೇವರ ಮೂರ್ತಿಗಳನ್ನು ಜೀವಂತ ವಿಗ್ರಹದಂತೆ ಕಾಣಲಾಗುತ್ತದೆ. ಇಲ್ಲಿನ ದೇವರ ಮೂರ್ತಿಗಳನ್ನು ಸಂತೋಷ ಹಾಗೂ ಸುಖಕರವಾಗಿ ನೋಡಿಕೊಳ್ಳಲಾಗುತ್ತದೆ.

Seema.R | news18-kannada
Updated:November 7, 2019, 12:27 PM IST
ದೇವರಿಗೇ ಉಸಿರುಗಟ್ಟಿಸಿದ ಮಾಲಿನ್ಯ; ರಕ್ಷಣೆಗಾಗಿ ಮಾಸ್ಕ್​ ತೊಟ್ಟ ಭಗವಂತ
ಮುಖಕ್ಕೆ ಮಾಸ್ಕ್​ ಹಾಕಿರುವ ದೇವರ ವಿಗ್ರಹ
  • Share this:
ವಾರಾಣಾಸಿ (ನ.07): ದೆಹಲಿ, ಪಂಜಾಬ್​, ನೋಯ್ಡಾ, ಉತ್ತರ ಪ್ರದೇಶದಲ್ಲಿ ವಾಯುಮಾಲಿನ್ಯದಿಂದ ಜನರು ತತ್ತರಿಸಿದ್ದು, ಜನರು ಶುದ್ಧಗಾಳಿಗಾಗಿ ಪರಿತಪಿಸುವಂತೆ ಆಗಿದೆ. ಈ ಮಾಲಿನ್ಯ ದೇವರಿಗೂ ಕೂಡ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿದ್ದು, ಇದರ ರಕ್ಷಣೆಗಾಗಿ ದೇವರ ವಿಗ್ರಹಕ್ಕೆ ಮಾಸ್ಕ್​ ಹಾಕಿ ಭಗವಂತನನ್ನು ಕಾಪಾಡಲು ಪೂಜಾರಿಗಳು ಮುಂದಾಗಿದ್ದಾರೆ.

ಪ್ರಸಿದ್ಧ ಪುಣ್ಯಕ್ಷೇತ್ರವಾದ ವಾರಾಣಾಸಿಯಲ್ಲಿ ವಾಯುಮಾಲಿನ್ಯದ ಮಟ್ಟ ಮಿತಿಮೀರಿದ್ದು, ಇದರಿಂದ ದೇವತೆಗಳನ್ನು ರಕ್ಷಿಸಲು ಪೂಜಾರಿಗಳು ದೇವರ ಮೂರ್ತಿಗೆ ಮಾಸ್ಕ್​ ಹಾಕಿದ್ದಾರೆ. ದೇವರ ಮೂಗು ಬಾಯಿ ಮುಚ್ಚಿದ್ದು, ಭಕ್ತರು ಮಾಸ್ಕ್​ ತೊಟ್ಟ ದೇವರ ದರ್ಶನ ಮಾಡುವಂತೆ ಆಗಿದೆ.

ವಾರಾಣಾಸಿಯಲ್ಲಿನ ಶಿವ-ಪಾರ್ವತಿ, ಆಂಜನೇಯ, ರಾಮ ಲಕ್ಷಣ ದೇವಾಲಯಗಳಲ್ಲಿ ಈ ರೀತಿ ದೃಶ್ಯ ಕಂಡು ಬಂದಿದೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪೂಜಾರಿಗಳು, ದೇವರಿಗೆ ಹಬ್ಬ ಹರಿದಿನಗಳಲ್ಲಿ ಹೊಸ ಬಟ್ಟೆ ಹಾಕುತ್ತೇವೆ.  ಅದೇ ರೀತಿ ಮಾಲಿನ್ಯದಿಂದ ರಕ್ಷಿಸಲು ಈ ರೀತಿ ಮೂರ್ತಿ ಮುಖಕ್ಕೆ ಬಟ್ಟೆ ಕಟ್ಟಿದ್ದೇವೆ ಎಂದರು.ನಂಬಿಕೆಗೆ ಹೆಸರಾಗಿರುವ ವಾರಣಾಸಿಗಳಲ್ಲಿ ದೇವರ ಮೂರ್ತಿಗಳನ್ನು ಜೀವಂತ ವಿಗ್ರಹದಂತೆ ಕಾಣಲಾಗುತ್ತದೆ. ಇಲ್ಲಿನ ದೇವರ ಮೂರ್ತಿಗಳನ್ನು ಸಂತೋಷ ಹಾಗೂ ಸುಖಕರವಾಗಿ ನೋಡಿಕೊಳ್ಳಲಾಗುತ್ತದೆ.

ಬೇಸಿಗೆಯಲ್ಲಿ ಇಲ್ಲಿನ ವಿಗ್ರಹವನ್ನು ತಂಪಾಗಿಡಲು ಶ್ರೀಗಂಧವನ್ನು ಹಚ್ಚಲಾಗುತ್ತದೆ. ಚಳಿಗಾಗದಲ್ಲಿ ಉಣ್ಣೆ ಬಟ್ಟೆಗಳಿಂದ ದೇವರನ್ನು ರಕ್ಷಿಸಲಾಗುವುದು. ಅದೇ ರೀತಿ ಮಾಲಿನ್ಯದಿಂದ ರಕ್ಷಿಸಲು ಈ ರೀತಿ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹರೀಶ್​ ಮಿಶ್ರಾ ಎಂಬ ಅರ್ಚಕರು ತಿಳಿಸಿದ್ದಾರೆ ಎಂದು ಐಎಎನ್​ಎಸ್​ ವರದಿ ಮಾಡಿದೆ,

ಇನ್ನು ಇಲ್ಲಿನ ಎಲ್ಲಾ ದೇವತೆಗಳ ಮುಖವನ್ನು ಇದೇ ರೀತಿ ಧೂಳಿನಿಂದ ಸಂರಕ್ಷಿಸಲಾಗುತ್ತಿದೆ. ಆದರೆ, ಇಲ್ಲಿನ ಕಾಳಿ ವಿಗ್ರಹಕ್ಕೆ ಮಾತ್ರ ಯಾವುದೇ ರೀತಿ ಮಾಸ್ಕ್​ ಹಾಕಲು ಮುಂದಾಗಿಲ್ಲ. ಕಾರಣ, ಉಗ್ರ ಸ್ವರೂಪಿಣಿಯಾಗಿ  ನಾಲಿಗೆ ಚಾಚಿರುವ ಕಾಳಿಯ ಮುಖ ಮುಚ್ಚಿದರೆ ಆಕೆ ಬೇಸರಗೊಳ್ಳುತ್ತಾಳೆ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

ಇದನ್ನು ಓದಿ: ಸರ್ಕಾರ ರಚನೆಗಾಗಿ ತಮ್ಮ ಶಾಸಕರ ಖರೀದಿಗೆ ಮುಂದಾದ ಬಿಜೆಪಿ; ಶಿವಸೇನೆ ಆರೋಪ

ದೀಪಾವಳಿ ಬಳಿಕ ವಾರಾಣಾಸಿಯಲ್ಲಿ ಮಾಲಿನ್ಯಕಾರಕ ಕಣ 2.5 ಮಟ್ಟ ಇದೆ. ಇನ್ನು ಉತ್ತರ ಪ್ರದೇಶದಲ್ಲಿ ವಾಯುಮಾಲಿನ್ಯ ಮಟ್ಟ ಹೆಚ್ಚಿರುವ ಹಿನ್ನೆಲೆ ಇದರ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಜಾರಿಗೆ ತಂದಿರುವಂತೆ ಸಮ-ಬೆಸ ಸಂಖ್ಯೆಗಳ ವಾಹನಸಂಚಾರವನ್ನು ಅಳವಡಿಸಿಕೊಳ್ಳುವ ಕುರಿತು ಅಧಿಕಾರಿಗಳ ಸಲಹೆ ಪಡೆದಿದ್ದಾರೆ. ಇನ್ನು ವಾಯುಮಾಲಿನ್ಯ ಹೆಚ್ಚಾಲು ಆಯಾ ರಾಜ್ಯಗಳೆ ಕಾರಣ ಎಂದು ಸುಪ್ರೀಂಕೋರ್ಟ್​ ಕೂಡ ಚಾಟಿ ಬೀಸಿದೆ.

First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ