Onion Price: ಈ ಊರಿನಲ್ಲಿ ಬೆಳ್ಳಿ ಅಡವಿಟ್ಟರೆ ಸಾಲವಾಗಿ ಸಿಗುತ್ತೆ ಈರುಳ್ಳಿ!

Onion Price Today: ವಾರಾಣಸಿಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರಿಂದ ನಡೆಸಲ್ಪಡುವ ಅಂಗಡಿಗಳಲ್ಲಿ ಬೆಳ್ಳಿ ವಸ್ತುಗಳು ಅಥವಾ ಆಧಾರ್​ ಕಾರ್ಡ್​ ಅನ್ನು ಒತ್ತೆಯಾಗಿಟ್ಟುಕೊಂಡು ಈರುಳ್ಳಿಯ ಸಾಲ ನೀಡಲಾಗುತ್ತದೆ.

Sushma Chakre | news18-kannada
Updated:December 3, 2019, 12:38 PM IST
Onion Price: ಈ ಊರಿನಲ್ಲಿ ಬೆಳ್ಳಿ ಅಡವಿಟ್ಟರೆ ಸಾಲವಾಗಿ ಸಿಗುತ್ತೆ ಈರುಳ್ಳಿ!
ಸಾಂದರ್ಭಿಕ ಚಿತ್ರ
  • Share this:
ವಾರಾಣಸಿ (ಡಿ. 3): ಈರುಳ್ಳಿ ಬೆಲೆ ಗಗನಕ್ಕೇರಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಅನೇಕ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಕೂಡ ಈರುಳ್ಳಿ ಬಳಕೆಯನ್ನು ಕಡಿಮೆ ಮಾಡಲಾಗಿದೆ. ಈರುಳ್ಳಿಯ ಬೆಲೆ ಏರಿಕೆಯಾಗಿರುವುದು ಒಂದೆಡೆಯಾದರೆ ಇನ್ನು ಕೆಲವೆಡೆ ಈರುಳ್ಳಿ ಖರೀದಿಸಲು ಸಿದ್ಧರಿದ್ದರೂ ಉತ್ತಮ ಈರುಳ್ಳಿಗಳು ಸಿಗದ ಪರಿಸ್ಥಿತಿ ಇದೆ.

ಈ ಕಾರಣದಿಂದಲೇ ವಾರಾಣಸಿಯ ಕೆಲವು ಅಂಗಡಿಗಳಲ್ಲಿ ಹೊಸ ಮಾರ್ಗ ಕಂಡುಕೊಳ್ಳಲಾಗಿದೆ. ಇಲ್ಲಿನ ಕೆಲವು ಅಂಗಡಿಗಳಲ್ಲಿ ಈರುಳ್ಳಿಯನ್ನು ಸಾಲ ಕೊಡಲಾಗುತ್ತದೆ. ಆದರೆ, ಅದಕ್ಕೆ ಪ್ರತಿಯಾಗಿ ಆಧಾರ್ ಕಾರ್ಡ್​ ಅಥವಾ ಬೆಳ್ಳಿ ಆಭರಣಗಳನ್ನು ಅಡ ಇಡಬೇಕಾಗುತ್ತದೆ!

ಹೌದು, ಈರುಳ್ಳಿಯನ್ನು ಸಾಲ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲು ವಾರಾಣಸಿ ಜನರು ಮುಂದಾಗಿದ್ದಾರೆ. ಇದಕ್ಕೆ ಸಮಾಜವಾದಿ ಪಕ್ಷದ ಯುವಘಟಕದ ಕಾರ್ಯಕರ್ತರು ಜೊತೆಯಾಗಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರಿಂದ ನಡೆಸಲ್ಪಡುವ ಅಂಗಡಿಗಳಲ್ಲಿ ಬೆಳ್ಳಿ ವಸ್ತುಗಳು ಅಥವಾ ಆಧಾರ್​ ಕಾರ್ಡ್​ ಅನ್ನು ಒತ್ತೆಯಾಗಿಟ್ಟುಕೊಂಡು ಈರುಳ್ಳಿಯ ಸಾಲ ನೀಡಲಾಗುತ್ತದೆ.

Namma Metro: ಬೆಂಗಳೂರು ಮೆಟ್ರೋದಲ್ಲಿ ಕೊಂಡೊಯ್ಯಬಹುದು ಪೆಪ್ಪರ್​ ಸ್ಪ್ರೇ; ಮಹಿಳೆಯರ ಸುರಕ್ಷತೆಗೆ ಹೊಸ ಕ್ರಮ

ಈ ಬಗ್ಗೆ ಎಎನ್​ಐಗೆ ಮಾಹಿತಿ ನೀಡಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತರು ಈರುಳ್ಳಿ ಬೆಲೆ ಏರಿಕೆ ವಿರುದ್ಧ ನಮ್ಮ ಪ್ರತಿಭಟನೆಯನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕೆಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದೇವೆ. ತರಕಾರಿಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರಿಗೆ ಬಹಳ ತೊಂದರೆ ಆಗುತ್ತಿದೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಆಧಾರ್ ಕಾರ್ಡ್​ ಅಥವಾ ಬೆಳ್ಳಿ ಆಭರಣಗಳನ್ನು ಒತ್ತೆಯಾಗಿಟ್ಟುಕೊಂಡು ಈರುಳ್ಳಿಯನ್ನು ಸಾಲ ಕೊಡುತ್ತೇವೆ. ಅಂಗಡಿಗಳಲ್ಲಿ ಈರುಳ್ಳಿಗಾಗಿ ಲಾಕರ್​ಗಳನ್ನು ಕೂಡ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.ಲಕ್ನೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಸೆಂಬ್ಲಿ ಹೊರಗೆ ಒಂದು ಕೆ.ಜಿ. ಈರುಳ್ಳಿಗೆ 40 ರೂ.ನಂತೆ ಮಾರಾಟ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ವಾರಾಣಸಿಯಲ್ಲಿ ಈ ರೀತಿ ಮಾಡಲಾಗಿದೆ. ಇದೇ ರೀತಿ ಎಲ್ಲ ರಾಜ್ಯಗಳಲ್ಲೂ ವಿರೋಧ ಪಕ್ಷಗಳ ಕಾರ್ಯಕರ್ತರು ಮತ್ತು ರೈತರು ಈರುಳ್ಳಿ ಬೆಲೆಯ ಏರಿಕೆಯನ್ನು ಖಂಡಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. 
First published: December 3, 2019, 11:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading