Gyanvapi Masjid Case: ಜ್ಞಾನವಾಪಿ ಮಸೀದಿಯಲ್ಲಿ ಪೂಜೆಯ ಹಕ್ಕು ಎತ್ತಿ ಹಿಡಿದ ವಾರಾಣಸಿ ಕೋರ್ಟ್​

Gyanvapi Masjid Case: ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಮುಸ್ಲಿಂ ಪರ ವಕೀಲರ ವಾದವನ್ನು ತಳ್ಳಿ ಹಾಕಿದ್ದು, ಶೃಂಗಾರಗೌರಿ ಪೂಜೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದೆ. ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ್ದ ಐವರು ಮಹಿಳೆಯರ ಅರ್ಜಿಯನ್ನು ಪುರಸ್ಕರಿಸಿದೆ.

ವಿವಾದಕ್ಕೆ ಒಳಗಾದ ಜ್ಞಾನವಾಪಿ ಮಸೀದಿ

ವಿವಾದಕ್ಕೆ ಒಳಗಾದ ಜ್ಞಾನವಾಪಿ ಮಸೀದಿ

  • Share this:
ವಾರಾಣಸಿ(ಸೆ.12): ಜ್ಞಾನವಾಪಿ (Gyanvapi Masjid Case) ಶೃಂಗಾರ ಗೌರಿ ಪ್ರಕರಣದ ವಿಚಾರಣೆ ನಡೆಸಬಹುದೇ ಅಥವಾ ಇಲ್ಲವೇ ಎಂಬ ವಿಚಾರವಾಗಿ ಮಹತ್ವದ ತೀರ್ಪು ಪ್ರಕಟಿಸಿದ ವಾರಣಾಸಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ (Varanasi District Court) ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದೆ. ಕೋರ್ಟ್​ ಈ ತೀರ್ಪಿನಿಂದ ಮುಸ್ಲಿಂ ಪರ ವಕೀಲರಿಗೆ ತೀವ್ರ ಹಿನ್ನಡೆಯಾಗಿದೆ. ಈ ಮೊದಲು ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ ಎರಡೂ ಕಡೆಯವರು ತಮ್ಮ ವಾದ ಮಂಡಿಸಿದ್ದರು. ಒಂದೆಡೆ ವಿಷಯವನ್ನು ಉಳಿಸಿಕೊಳ್ಳಲು ಹಿಂದೂ ಪರವಾಗಿ ಹಲವಾರು ಪುರಾವೆಗಳನ್ನು ಪ್ರಸ್ತುತಪಡಿಸಿದ್ದಾರೆ. ಮತ್ತೊಂದೆಡೆ, ಈ ಪ್ರಕರಣವನ್ನು ವಜಾಗೊಳಿಸಲು ಮುಸ್ಲಿಂ ಕಡೆಯವರು ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ಸಲ್ಲಿಸಿದ್ದರು.

ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಮುಸ್ಲಿಂ ಪರ ವಕೀಲರ ವಾದವನ್ನು ತಳ್ಳಿ ಹಾಕಿದ್ದು, ಶೃಂಗಾರಗೌರಿ ಪೂಜೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದೆ. ಅಲ್ಲದೇ ಈ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ನಿಗದಿಪಡಿಸಿದೆ.  ಇನ್ನು ಮಸೀದಿಯಲ್ಲಿ ವರ್ಷಕ್ಕೆ ಕೇವಲ ಒಂದು ಬಾರಿ ಪೂಜೆ ನಡೆಸಲು ಇದ್ದ ಅವಕಾಶವನ್ನು ಪ್ರಶ್ನಿಸಿದ್ದ ಐವರು ಮಹಿಳೆಯರು, ತಮಗೆ ಯಾವತ್ತೂ ಇಲ್ಲಿ ಪೂಜೆ ನಡೆಸಲು ಅವಕಾಶ ನೀಡುವಂತೆ ಕೋರಿ ಐವರು ಮಹಿಳೆಯರು ಕೋರ್ಟ್​ ಮೆಟ್ಟಿಲೇರಿದ್ದರೆಂಬುವುದು ಉಲ್ಲೇಖನೀಯ.

ಇದನ್ನೂ ಓದಿ: Gyanvapi mosque: ಬಿಗಿ ಭದ್ರತೆಯಲ್ಲಿ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ

ಈವರೆಗೆಗಿನ ವಾದವೇನು?

ಆಗಸ್ಟ್ 24 ರಂದು ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆ ನಡೆಸಿತ್ತು. ಈ ವಿಚಾರಣೆಯ ನಂತರ ನಿರ್ಧಾರವನ್ನು ಸೋಮವಾರಕ್ಕೆ ಕಾಯ್ದಿರಿಸಲಾಯಿತು. ಅಂತಿಮ ವಿಚಾರಣೆ ವೇಳೆ ಮುಸ್ಲಿಂ ಪರ ವಕೀಲ ಶಮೀಮ್ ಅಹ್ಮದ್ ನ್ಯಾಯಾಲಯದಲ್ಲಿ ತಮ್ಮ ಪರ ವಾದ ಮಂಡಿಸಿದರು. ಆಗ ಅವರು ಜ್ಞಾನವಾಪಿ ಮಸೀದಿ ವಕ್ಫ್‌ನ ಆಸ್ತಿ, ಆದ್ದರಿಂದ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ನಡೆಸುವ ಹಕ್ಕು ಇಲ್ಲ ಎಂದು ಹೇಳಿದ್ದರು.

Gyanvapi mosque case Varanasi court to decide course of action today
ಜ್ಞಾನವಾಪಿ ಮಸೀದಿ


ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?

ಹಿಂದೂ ಪರ ವಕೀಲರೂ ವಾದ ಮಂಡಿಸಿದ್ದರು

ಮತ್ತೊಂದೆಡೆ, ಹಿಂದೂಗಳ ಪರವಾಗಿ ವಕೀಲ ಮದನ್ ಮೋಹನ್ ಯಾದವ್, ಜ್ಞಾನವಾಪಿ ಮಸೀದಿ ಅಲ್ಲ, ಅದು ದೇವಾಲಯದ ಒಂದು ಭಾಗವಾಗಿದೆ. ಹೀಗಾಗಿ 1991 ರ ಪೂಜಾ ಸ್ಥಳಗಳ ಕಾಯಿದೆ ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ವಾದಿಸಿದ್ದರು. ನಂತರ ಹಿಂದೂಗಳ ಪರವಾಗಿ ವಿಚಾರಣೆಯ ಸಮಯದಲ್ಲಿ, ಮುಸ್ಲಿಂ ಕಡೆಯವರು ಸಲ್ಲಿಸಿದ ದಾಖಲೆಗಳ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿತ್ತು. ಇದೀಗ ಸೋಮವಾರದ ವಿಚಾರಣೆಯಲ್ಲಿ ನ್ಯಾಯಾಲಯ ಈ ಪ್ರಕರಣದ ತೀರ್ಪು ಪ್ರಕಟಿಸಿದೆ

ಇನ್ನು ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಅರ್ಧ ಡಜನ್‌ಗೂ ಹೆಚ್ಚು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ ಎಂಬುವುದು ಉಲ್ಲೇಖನೀಯ.

ವಾರಾಣಸಿಯಲ್ಲಿ ಬಿಗಿ ಭದ್ರತೆ

ಇದೇ ವೇಳೆ ವಾರಾಣಸಿಯಲ್ಲಿ ವಿಚಾರಣೆಗೂ ಮುನ್ನ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಜಿಲ್ಲೆಯ ಭದ್ರತೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎ. ಸತೀಶ್ ಗಣೇಶ್ ಭಾನುವಾರ ಮಾಹಿತಿ ನೀಡಿದ್ದಾರೆ. ಜ್ಞಾನವಾಪಿ-ಶೃಂಗಾರ ಗೌರಿ ಪ್ರಕರಣದ ತೀರ್ಪನ್ನು ಜಿಲ್ಲಾ ನ್ಯಾಯಾಲಯ ಸೋಮವಾರ ಪ್ರಕಟಿಸಲಿದೆ ಎಂದರು. ಈ ಹಿಂದೆಯೇ ಸೆಕ್ಷನ್ 144 ಜಾರಿಗೊಳಿಸಲು ಸೂಚನೆ ನೀಡಲಾಗಿದೆ. ಧಾರ್ಮಿಕ ಗುರುಗಳೊಂದಿಗೆ ಸಂವಹನ ನಡೆಸಲು ಸಹ ಸೂಚನೆಗಳನ್ನು ನೀಡಲಾಗಿದೆ.
Published by:Precilla Olivia Dias
First published: