Women's Day : 50 ಸಾವಿರಕ್ಕೂ ಹೆಚ್ಚು ಹಾವುಗಳ ರಕ್ಷಿಸಿರುವ ದೇಶದ ಮೊದಲ ಮಹಿಳೆ ವನಿತಾ ಬೋರಡೆಗೆ ನಾರಿ ಶಕ್ತಿ ಪ್ರಶಸ್ತಿ

50 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ಮೊದಲ ಮಹಿಳೆ ಎಂಬ ಖ್ಯಾತಿಗೆ ವನಿತಾ ಜಗದೇವ್ ಬೋರಡೆ ಪಾತ್ರರಾಗಿದ್ದಾರೆ. ಮಹಿಳಾ ದಿನಾಚರಣೆ ಅಂಗವಾಗಿ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ವನಿತಾ ಜಗದೇವ್ ಬೋರಡೆ

ವನಿತಾ ಜಗದೇವ್ ಬೋರಡೆ

 • Share this:
  ಅಂತರಾಷ್ಟ್ರೀಯ ಮಹಿಳಾ ದಿನದ (International women's day) ಸಂದರ್ಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (President Ramnath Kovind) ಅವರು ಮಂಗಳವಾರ ಮಹಿಳಾ ಸಬಲೀಕರಣದಲ್ಲಿ (Women Empowerment) ಅತ್ಯುತ್ತಮ ಕೊಡುಗೆ ನೀಡಿದ 29 ಮಹಿಳೆಯರಿಗೆ 2020 ಮತ್ತು 2021 ನೇ ಸಾಲಿನ ನಾರಿ ಶಕ್ತಿ ಪುರಸ್ಕಾರವನ್ನು (Naari Shakti ) ಪ್ರದಾನ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಮಹಿಳೆಯರಿಗೆ ರಾಷ್ಟ್ರಪತಿ ಅವರು 28 ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಇವುಗಳಲ್ಲಿ 2020 ರ 14 ಪ್ರಶಸ್ತಿಗಳು ಮತ್ತು 2021 ರ 14 ಪ್ರಶಸ್ತಿಗಳು ಸೇರಿವೆ. ನಾರಿ ಶಕ್ತಿ ಪುರಸ್ಕಾರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪಕ್ರಮದ ಅಡಿಯಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ನೀಡಲಾಗುತ್ತದೆ.

  ವನ್ಯಜೀವಿ ಸಂರಕ್ಷಕಿ ವನಿತಾ ಜಗದೇವ್ ಬೋರಡೆಗೆ (Vaneeta Jagadev Borade) ನಾರಿ ಶಕ್ತಿ ಗೌರವ ಪ್ರದಾನ

  ಇನ್ನು ಮಹಿಳಾ ದಿನಾಚರಣೆ ಅಂಗವಾಗಿ ವನ್ಯಜೀವಿ ಸಂರಕ್ಷಣಾ ವಲಯದಲ್ಲಿ ಕೆಲಸ ಮಾಡಿದ ಮಹಿಳೆಗೆ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ವನಿತಾ ಜಗದೇವ್ ಬೋರಡೆ ಅವರಿಗೆ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ಗೌರವವನ್ನು ರಾಷ್ಟ್ರಪತಿಗಳು ತಮ್ಮ ಕೈಯಿಂದಲೇ ನೀಡಿರುವುದು ಹೆಮ್ಮೆಯ ಸಂಗತಿ.

  50 ಸಾವಿರಕ್ಕೂ ಹೆಚ್ಚು ಹಾವುಗಳ ರಕ್ಷಣೆ ಮಾಡಿರುವ ವನಿತಾಗೆ ನಾರಿ ಶಕ್ತಿ ಪುರಸ್ಕಾರ

  ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ಮೊದಲ ಮಹಿಳೆ ಎಂಬ ಖ್ಯಾತಿಗೆ ವನಿತಾ ಜಗದೇವ್ ಬೋರಡೆ ಪಾತ್ರರಾಗಿದ್ದಾರೆ. ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ವನಿತಾ ಅವರು ವನ್ಯಜೀವಿ ಸಂರಕ್ಷಣೆಯ ವಿಶೇಷ ಪ್ರಯತ್ನಗಳ ಹಿನ್ನೆಲೆ ಅವರಿಗೆ ಈ ಪ್ರತಿಷ್ಠಿತ ಮನ್ನಣೆ ನೀಡಿ ಗೌರವಿಸಲಾಗಿದೆ.

  ಇದನ್ನೂ ಓದಿ: ನಗು ಮುಖ..ಕೈಯಲ್ಲಿ ತಾಯಿಯ ಪತ್ರ.. ಯುದ್ಧಭೂಮಿಯಲ್ಲಿ ‘ಬುದ್ಧ’ನಂತೆ 1,400 km ಬಾಲಕನ ಏಕಾಂಗಿ ಪಯಣ!

  ಹಾವುಗಳ ಸಂರಕ್ಷಣೆಗಾಗಿ ಜಾಗೃತಿ ಅಭಿಯಾನ

  ಹಾವುಗಳನ್ನು ಉಳಿಸುವುದರ ಜೊತೆಗೆ ಅವುಗಳ ಸಂರಕ್ಷಣೆಗಾಗಿ ಜಾಗೃತಿ ಅಭಿಯಾನವನ್ನೂ ವನಿತಾ ನಡೆಸುತ್ತಾರೆ. 50 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಉಳಿಸಿ, ಸಂರಕ್ಷಿಸಿದ ಹಿನ್ನೆಲೆ ಅವರಿಗೆ 'ಹಾವುಗಳ ಸ್ನೇಹಿತೆ' ಎಂದು ಕರೆಯಲಾಗುತ್ತದೆ.

  ಜನರು ತಮ್ಮ ಸ್ನೇಹಿತರನ್ನು ಭೇಟಿಯಾಗುವಂತೆ ವನಿತಾ ಹಾವುಗಳನ್ನು ಹಿಡಿಯುತ್ತಾಳೆ. ಹಾವುಗಳೊಂದಿಗಿನ ಅವಳ ಸ್ನೇಹ, ಅವುಗಳ ಜೊತೆಗಿನ ಒಡನಾಟ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಕೆಲವರು ಆಕೆ ಹಾವು ಹಿಡಿಯುವುದನ್ನು ಕಂಡು ಆಶ್ಚರ್ಯ ಪಟ್ಟಿದ್ದಾರೆ. ಕೈಯಲ್ಲಿ ಹಾವು ಇದ್ದರೂ ಸಹ ಶಾಂತವಾಗಿ ಅವುಗಳನ್ನು ಹಿಡಿದುಕೊಂಡು ಹೋಗಿ, ಕಾಡಿಗೆ ಬಿಟ್ಟು, ರಕ್ಷಣೆ ಮಾಡುತ್ತಾಳೆ.

  ವನಿತಾ ಜಗದೇವ್ ಬೋರಡೆ ಹೆಸರಲ್ಲಿ ಅಂಚೆ ಚೀಟಿ ಬಿಡುಗಡೆ

  ನಾರಿ ಶಕ್ತಿ ಪುರಸ್ಕಾರದ ಗೌರವದೊಂದಿಗೆ, ಭಾರತೀಯ ಅಂಚೆ ಇಲಾಖೆಯು ವನಿತಾಳ ಸಾಹಸಮಯ ಕಾರ್ಯವನ್ನು ಮೆಚ್ಚಿದ್ದು, ಅವಳ ಹೆಸರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಗೌರವಿಸಿದೆ. ಈ ಹಿಂದೆ ಮಹಾರಾಷ್ಟ್ರ ಸರ್ಕಾರವು ಛತ್ರಪತಿ ಶಿವಾಜಿ ಮಹಾರಾಜ್ ವನಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ವನಿತಾ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಕೆಲಸ ಮಾಡುವ ಸೊಯ್ರೆ ವಂಚರೆ ಮಲ್ಟಿಪರ್ಪಸ್ ಫೌಂಡೇಶನ್‌ನ ಸ್ಥಾಪಕರಾಗಿದ್ದಾರೆ.

  2020 ಮತ್ತು 2021 ನೇ ಸಾಲಿನ ನಾರಿ ಶಕ್ತಿ ಪ್ರಶಸ್ತಿ ಪ್ರದಾನ

  ಇನ್ನು COVID-19 ಸಾಂಕ್ರಾಮಿಕ ರೋಗದಿಂದ ಉಂಟಾದ ವಿಪತ್ತಿನ ಹಿನ್ನೆಲೆ 2020 ರ ಪ್ರಶಸ್ತಿ ಸಮಾರಂಭವನ್ನು 2021 ರಲ್ಲಿ ನಡೆಸಲು ಸಾಧ್ಯವಾಗಲಿಲ್ಲ. 2020 ನೇ ಸಾಲಿನ ನಾರಿ ಶಕ್ತಿ ಪುರಸ್ಕಾರ ವಿಜೇತರು ಉದ್ಯಮಶೀಲತೆ, ಕೃಷಿ, ನಾವೀನ್ಯತೆ, ಸಮಾಜ ಕಾರ್ಯ, ಕಲೆ, ಕರಕುಶಲ, STEMM ಸೇರಿವೆ. (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಗಣಿತ) ಮತ್ತು ವನ್ಯಜೀವಿ ಸಂರಕ್ಷಣಾ ವಲಯದಲ್ಲಿ ಕೆಲಸ ಮಾಡಿದ ಮಹಿಳೆಯರಿಗೆ ಪ್ರದಾನ ಮಾಡಲಾಗಿದೆ.

  2021 ನೇ ಸಾಲಿನ ನಾರಿ ಶಕ್ತಿ ಪುರಸ್ಕಾರ ವಿಜೇತರಲ್ಲಿ ಭಾಷಾಶಾಸ್ತ್ರ, ಉದ್ಯಮಶೀಲತೆ, ಕೃಷಿ, ಸಮಾಜಕಾರ್ಯ, ಕಲೆ, ಕರಕುಶಲ, ವ್ಯಾಪಾರಿ, ನೌಕಾಪಡೆ, STEMM, ಶಿಕ್ಷಣ, ಸಾಹಿತ್ಯ, ವಿಕಲಚೇತನರ ಹಕ್ಕುಗಳು ಇತ್ಯಾದಿ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಮಹಿಳೆಯರು ಸೇರಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನದಂದು ನಾರಿ ಶಕ್ತಿ ಪುರಸ್ಕಾರ ಪುರಸ್ಕೃತ ಮಹಿಳೆಯರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಶುಭಾಶಯ ತಿಳಿಸಿದ್ದರು.

  ಇದನ್ನೂ ಓದಿ: ನಾರಿ ಶಕ್ತಿಗೆ ಮೋದಿ ಸೆಲ್ಯೂಟ್, ಮಹಿಳಾ ದಿನಾಚರಣೆಯಂದು ಮೋದಿ ಮಾತು

  ನಾರಿ ಶಕ್ತಿ ಪುರಸ್ಕಾರಕ್ಕೆ ಮರ್ಚೆಂಟ್ ನೇವಿ ಕ್ಯಾಪ್ಟನ್ ರಾಧಿಕಾ ಮೆನನ್, ಸಾಮಾಜಿಕ ಉದ್ಯಮಿ ಅನಿತಾ ಗುಪ್ತಾ, ಸಾವಯವ ಕೃಷಿ ಬುಡಕಟ್ಟು ಹೋರಾಟಗಾರ್ತಿ ಉಷಾಬೆನ್ ದಿನೇಶ್ಭಾಯಿ ವಾಸವ, ನಾವೀನ್ಯತೆ ಖ್ಯಾತಿಯ ನಾಸಿರಾ ಅಖ್ತರ್, ಇಂಟೆಲ್ ಇಂಡಿಯಾ ಮುಖ್ಯಸ್ಥೆ ನಿವೃತ್ತಿ ರೈ, ಡೌನ್ ಸಿಂಡ್ರೋಮ್ ಕಥಕ್ ನರ್ತಕಿ ಸಾಯಲಿ ನಂದಕಿಶೋರ್, ವನಿತಾ ಹಾವು ಉಳಿಸಿದ ಮೊದಲ ಮಹಿಳೆ, ಗಣಿತಜ್ಞೆ ನೀನಾ ಗುಪ್ತಾ ಅವರು ಭಾಜನರಾಗಿದ್ದಾರೆ.
  Published by:renukadariyannavar
  First published: