Vande Bharat Mission: ಆಗಸ್ಟ್​ 1ರಿಂದ 5ನೇ ಹಂತದ ವಂದೇ ಭಾರತ್ ಮಿಷನ್ ಆರಂಭ; 15ಕ್ಕೂ ಹೆಚ್ಚು ದೇಶಗಳಿಗೆ ವಿಮಾನ ವ್ಯವಸ್ಥೆ

ವಂದೇ ಭಾರತ್ ಮಿಷನ್​ನಡಿ ಆಗಸ್ಟ್ 1ರಿಂದ ಅಮೆರಿಕಾ, ಕೆನಡಾ, ಕತಾರ್, ಒಮಾನ್, ಯುಎಇ, ಆಸ್ಟ್ರೇಲಿಯಾ, ಜರ್ಮನಿ, ಥೈಲ್ಯಾಂಡ್, ಸಿಂಗಾಪುರ್, ಇಂಗ್ಲೆಂಡ್, ಜರ್ಮನಿ, ಸೌದಿ ಅರೆಬಿಯಾ, ಬಹ್ರೇನ್, ನ್ಯೂಜಿಲೆಂಡ್, ಫಿಲಿಪೈನ್ಸ್ ಮತ್ತಿತರ ದೇಶಗಳಿಂದ ಭಾರತೀಯರನ್ನು ಕರೆತರಲಾಗುವುದು.

Sushma Chakre | news18-kannada
Updated:July 27, 2020, 7:21 AM IST
Vande Bharat Mission: ಆಗಸ್ಟ್​ 1ರಿಂದ 5ನೇ ಹಂತದ ವಂದೇ ಭಾರತ್ ಮಿಷನ್ ಆರಂಭ; 15ಕ್ಕೂ ಹೆಚ್ಚು ದೇಶಗಳಿಗೆ ವಿಮಾನ ವ್ಯವಸ್ಥೆ
ಏರ್ ಇಂಡಿಯಾ
  • Share this:
ನವದೆಹಲಿ (ಜು. 27): ಭಾರತದಲ್ಲಿ ಮೊದಲ ಬಾರಿಗೆ ಲಾಕ್​ಡೌನ್ ಘೋಷಣೆಯಾಗಿ 4 ತಿಂಗಳು ಕಳೆದಿವೆ. 4 ತಿಂಗಳಿನಿಂದಲೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ವಂದೇ ಭಾರತ್ ಮಿಷನ್​ ಅಡಿ ವಿಶೇಷ ವಿಮಾನಗಳನ್ನು ಕಳುಹಿಸಲಾಗುತ್ತಿದೆ. ಇದೀಗ ವಂದೇ ಭಾರತ್ ಮಿಷನ್​ನ 5ನೇ ಹಂತ ಆಗಸ್ಟ್​ 1ರಿಂದ ಆರಂಭವಾಗಲಿದೆ

ಈ ಬಗ್ಗೆ ಏರ್ ಇಂಡಿಯಾ ಘೋಷಣೆ ಮಾಡಿದ್ದು, ಭಾರತದಲ್ಲಿ 3ನೇ ಹಂತದ ಅನ್​ಲಾಕ್​ ಜಾರಿಯಾಗುವ ದಿನವೇ 5ನೇ ಹಂತದ ವಂದೇ ಭಾರತ್ ಮಿಷನ್ ಶುರುವಾಗಲಿದೆ. ಏರ್ ಇಂಡಿಯಾ ಇದಕ್ಕೆ ಇನ್ನೂ ಬುಕಿಂಗ್ ಆರಂಭಿಸಿಲ್ಲ. ಏರ್ ಇಂಡಿಯಾ ಮೂಲಕ ಈಗಾಗಲೇ ವಂದೇ ಭಾರತ್ ಮಿಷನ್ ಅಡಿ 53 ವಿಮಾನಗಳಿಂದ ವಿದೇಶದಲ್ಲಿ ಸಿಲುಕಿದ್ದ 2.5 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ತಾಯ್ನಾಡಿಗೆ ವಾಪಾಸ್ ಕರೆತರಲಾಗಿದೆ.


ಆಗಸ್ಟ್ 1ರಿಂದ ಐದನೇ ಹಂತ ಆರಂಭವಾಗಲಿದ್ದು, ಅಮೆರಿಕಾ, ಕೆನಡಾ, ಕತಾರ್, ಒಮಾನ್, ಯುಎಇ, ಆಸ್ಟ್ರೇಲಿಯಾ, ಜರ್ಮನಿ, ಥೈಲ್ಯಾಂಡ್, ಸಿಂಗಾಪುರ್, ಇಂಗ್ಲೆಂಡ್, ಜರ್ಮನಿ, ಸೌದಿ ಅರೆಬಿಯಾ, ಬಹ್ರೇನ್, ನ್ಯೂಜಿಲೆಂಡ್, ಫಿಲಿಪೈನ್ಸ್ ಮತ್ತಿತರ ಅನೇಕ ರಾಷ್ಟ್ರಗಳಿಗೆ ವಿಮಾನಗಳನ್ನು ಕಳುಹಿಸಿ, ಭಾರತೀಯರನ್ನು ಕರೆತರಲಾಗುವುದು.

ಇದನ್ನೂ ಓದಿ: ಅಪ್ಪನಿಂದ 1 ಕೋಟಿ ರೂ. ವಸೂಲಿ ಮಾಡಲು ತನ್ನನ್ನು ತಾನೇ ಕಿಡ್ನಾಪ್ ಮಾಡಿಸಿಕೊಂಡ ಯುವತಿ!

ಜುಲೈ 22ರವರೆಗೂ ಕೊರೋನಾ ವೈರಸ್ ಕಾರಣದಿಂದ ವಿದೇಶದಲ್ಲಿ ಸಿಲುಕಿದ್ದ ಸುಮಾರು 7.88 ಲಕ್ಷ ಭಾರತೀಯರನ್ನು ವಂದೇ ಭಾರತ್ ಮಿಷನ್​ನಡಿ ಭಾರತಕ್ಕೆ ವಾಪಾಸ್ ಕರೆತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಸುಮಾರು 1,03,976 ಭಾರತೀಯರು ನೇಪಾಳ, ಭೂತಾನ್, ಬಾಂಗ್ಲಾದೇಶದಿಂದ ಭೂ ಗಡಿಗಳ ಮೂಲಕ ಬಂಧಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಕಳೆದ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ವಂದೇ ಭಾರತ್ ಮಿಷನ್‌ನ 5 ನೇ ಹಂತವನ್ನು ಆಗಸ್ಟ್ 1 ರಿಂದ ಪ್ರಾರಂಭಿಸಲಾಗುವುದು ಎಂದು ಏರ್ ಇಂಡಿಯಾ ಟ್ವೀಟ್ ಮೂಲಕ ಖಾತರಿಪಡಿಸಿದೆ. ಭಾರತ ಸರ್ಕಾರ ಸದ್ಯದ ಮಟ್ಟಿಗೆ ಇನ್ನೂ ಒಂದು ತಿಂಗಳು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡದಿರಲು ನಿರ್ಧರಿಸಿದೆ.
Published by: Sushma Chakre
First published: July 27, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading