• Home
  • »
  • News
  • »
  • national-international
  • »
  • Vande Bharat Express Accident: 2ನೇ ಬಾರಿ ವಂದೇ ಭಾರತ್ ರೈಲು ಅಪಘಾತ! ಮತ್ತೆ ಏನಾಗಿದೆ ನೋಡಿ

Vande Bharat Express Accident: 2ನೇ ಬಾರಿ ವಂದೇ ಭಾರತ್ ರೈಲು ಅಪಘಾತ! ಮತ್ತೆ ಏನಾಗಿದೆ ನೋಡಿ

ವಂದೇ ಭಾರತ್ ರೈಲು

ವಂದೇ ಭಾರತ್ ರೈಲು

ಎಮ್ಮೆಗಳಿಗೆ ಡಿಕ್ಕಿ ಹೊಡೆದ ಒಂದು ದಿನದ ನಂತರ ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ಶುಕ್ರವಾರ ಗುಜರಾತ್‌ನ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ ಮತ್ತೆ ಅಪಘಾತಕ್ಕೀಡಾಗಿದೆ. 

  • Share this:

ಇತ್ತೀಚೆಗಷ್ಟೇ ಚರ್ಚೆಗೆ ಕಾರಣವಾಗಿದ್ದ ವಂದೇ ಭಾರತ್ (Vande Bharat Express) ಎಕ್ಸಪ್ರೆಸ್ ಈಗ ಮತ್ತೆ ಅಂತಹದೆ ಇನ್ನೊಂದು ಘಟನೆಗೆ (Incident) ಸುದ್ದಿಯಾಗುತ್ತಿದೆ. ಎಮ್ಮೆಗಳಿಗೆ ಡಿಕ್ಕಿ ಹೊಡೆದು ರಿಪೇರಿಗೊಂಡು ತನ್ನ ಕಾರ್ಯಮಾಡುತ್ತಿದ್ದ ರೈಲಿಗೆ ಮತ್ತೆ ಸಮಸ್ಯೆಯಾಗಿದೆ. ಎಮ್ಮೆಗಳಿಗೆ ಡಿಕ್ಕಿ ಹೊಡೆದ ಒಂದು ದಿನದ ನಂತರ ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ಶುಕ್ರವಾರ ಗುಜರಾತ್‌ನ (Gujarat) ಕಂಜಾರಿ ಮತ್ತು ಆನಂದ್ ನಿಲ್ದಾಣಗಳ (Station) ನಡುವೆ ಮತ್ತೆ ಅಪಘಾತಕ್ಕೀಡಾಗಿದೆ. 


ಹಿಂದೆ ನಡೆದ ಘಟನೆ


ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ  ಡಿಕ್ಕಿ ಹೊಡೆದು ರೈಲಿನ ಮುಂಭಾಗಕ್ಕೆ ಹಾನಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಗುಜರಾತ್‌ನ ರೈಲ್ವೆ ರಕ್ಷಣಾ ಪಡೆ (RPF) ಪ್ರಕರಣ ದಾಖಲಿಸಿತ್ತ. ಎಮ್ಮೆಗಳಿಗೆ ಡಿಕ್ಕಿ ಹೊಡೆದ ನಂತರ ಹಾನಿಗೊಳಗಾದ ಸೆಮಿ-ಹೈ ಸ್ಪೀಡ್ ರೈಲಿನ ಡ್ರೈವರ್ ಕೋಚ್‌ನ ಮುಂಭಾಗದ ಕೋನ್ ಕವರ್ ಅನ್ನು ಮುಂಬೈನಲ್ಲಿ ಹೊಸದರೊಂದಿಗೆ ಬದಲಾಯಿಸಲಾಗಿತ್ತು.


ಪಶ್ಚಿಮ ರೈಲ್ವೆ ಹೇಳಿಕೆಯಲ್ಲಿ ಈ ಕುರಿತು ತಿಳಿಸಲಾಗಿತ್ತು. ಹೊಸದಾಗಿ ಪ್ರಾರಂಭಿಸಲಾದ ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಗುರುವಾರ ಬೆಳಿಗ್ಗೆ 11.15 ರ ಸುಮಾರಿಗೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು.


ಮತ್ತೆ ಮರುಕಳಿಸಿದ ಘಟನೆ


ಎಮ್ಮೆಗಳಿಗೆ ಡಿಕ್ಕಿ ಹೊಡೆದ ಒಂದು ದಿನದ ನಂತರ , ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ಶುಕ್ರವಾರ ಗುಜರಾತ್‌ನ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ ಹಸುವಿಗೆ ಡಿಕ್ಕಿ ಹೊಡೆದು ರೈಲಿನ ಮೂಗಿನ ಫಲಕಕ್ಕೆ ಸಣ್ಣ ಹಾನಿಯಾಗಿದೆ. ಈಗ ನಡೆದ ಘಟನೆಯಲ್ಲಿ ರೈಲ್ವೇ ಅಧಿಕಾರಿಯೊಬ್ಬರು ರೈಲಿನ ಮೂಗಿನ ಕೋನ್ ಪ್ಯಾನೆಲ್‌ನಲ್ಲಿ ಸಣ್ಣ ಡೆಂಟ್ ಹೊರತುಪಡಿಸಿ, ಹೆಚ್ಚಿನ ಹಾನಿಯಾಗಿಲ್ಲ ಎಂದು ಹೇಳಿದರು.


10 ನಿಮಿಷ ವಿಳಂಬ


ಶುಕ್ರವಾರದ ಘಟನೆ ಮುಂಬೈನಿಂದ ಸುಮಾರು 432 ಕಿಮೀ ದೂರದಲ್ಲಿರುವ ಆನಂದ್ ಬಳಿ ನಡೆದಿದೆ. ಮುಂಬೈ ರೈಲು ತನ್ನ ದಾರಿಯಲ್ಲಿ ಬಂದ ಹಸುವಿಗೆ ಡಿಕ್ಕಿ ಹೊಡೆದಿದೆ. ಮಧ್ಯಾಹ್ನ 3.45ರ ಸುಮಾರಿಗೆ ಈ ಘಟನೆ ನಡೆದಿದೆ. ಹೆಚ್ಚಿನ ಹಾನಿಯಾಗಿಲ್ಲ ಮತ್ತು ರೈಲು ಸುಮಾರು 10 ನಿಮಿಷಗಳ ಕಾಲ ಅಲ್ಲೇ ನಿಲ್ಲಬೇಕಾಯಿತು ಎಂದು ತಿಳಿದುಬಂದಿದೆ.


ಗುರುವಾರ ಎಕ್ಸ್‌ಪ್ರೆಸ್ ರೈಲಿನ ಇಂಜಿನ್‌ನ ಮೂಗಿನ ಮೇಲಿನ ಫಲಕಗಳು ಹಾನಿಗೊಳಗಾಗಿದ್ದವು. ಎಂಟು ನಿಮಿಷಗಳ ನಿಲುಗಡೆಯ ನಂತರ ರೈಲು ಗಾಂಧಿನಗರಕ್ಕೆ ತನ್ನ ಪ್ರಯಾಣವನ್ನು ಪುನರಾರಂಭಿಸಿತ್ತು ಮತ್ತು ನಿಗದಿತ ಪ್ರಕಾರ ಅಲ್ಲಿಗೆ ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.


ಇದನ್ನೂ ಓದಿ: ವಂದೇ ಭಾರತ್ ಎಕ್ಸ್​ಪ್ರೆಸ್​ಗೆ ಡಿಕ್ಕಿ ಹೊಡೆದ ಎಮ್ಮೆಗಳ ಮಾಲೀಕರ ವಿರುದ್ಧ FIR


ಡಿಕ್ಕಿ ಹೊಡೆದ ಹಸುಗಳು ಬದುಕುಳಿದಿವೆಯೇ ಇಲ್ಲವೆ ಎಂಬುದು ವರದಿಯಾಗಿಲ್ಲ. ಆದರೆ ಪದೇ ಪದೇ ಈ ರೀತಿ ಘಟನೆಯಾಗುತ್ತಿರುವುದು ಬೇಸರ ತಂತಿದೆ. ಶುಕ್ರವಾರ ಆನಂದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಹಳಿಗಳ ಮೇಲೆ ಜಾನುವಾರುಗಳಿಗೆ ಡಿಕ್ಕಿಯಾಗುವ ಪ್ರಸಂಗ ಹಲವಾರು ಬಾರಿ ಬರುತ್ತವೆ ಎಂದು ಹೇಳಿದರು.


ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! ಅಲ್ಲಿ ಮುಂದಾಗಿದ್ದೇ ಬೇರೆ!


160 ಕಿ.ಮೀ ವೇಗವನ್ನು ತಲುಪುವ ಈ ರೈಲನ್ನು ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಎಂದೂ ಸಹ ಅವರು ಹೇಳಿದರು. ಎರಡೇ ದಿನಗಳಲ್ಲಿ ಇಂತಹ ಘಟನೆ ಮತ್ತೆ ಮತ್ತೆ ಮರುಕಳಿಸಿದ್ದು ಪ್ರಯಾಣಿಕರಲ್ಲೂ ಆತಂಕ ಮೂಡುವಂತೆ ಮಾಡಿದೆ. ಮತ್ತೊಮ್ಮೆ ರೈಲಿನ ಮುಂಬಾಗವನ್ನು ಸರಿ ಪಡಿಸಿ ರೈಲು ಮುಂದೆ ಸಾಗಿದೆ.

First published: