ಅಹಮದಾಬಾದ್: ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್ಪ್ರೆಸ್ಗೆ (Vande Bharat Express) ಡಿಕ್ಕಿ ಹೊಡೆದು ರೈಲಿನ ಮುಂಭಾಗಕ್ಕೆ ಹಾನಿಯಾದ ಎಮ್ಮೆಗಳ ಮಾಲೀಕರ ವಿರುದ್ಧ (FIR Against Buffalo Owner)ಗುಜರಾತ್ನ ರೈಲ್ವೆ ರಕ್ಷಣಾ ಪಡೆ (RPF) ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಎಮ್ಮೆಗಳಿಗೆ ಡಿಕ್ಕಿ ಹೊಡೆದ ನಂತರ ಹಾನಿಗೊಳಗಾದ ಸೆಮಿ-ಹೈ ಸ್ಪೀಡ್ ರೈಲಿನ ಡ್ರೈವರ್ ಕೋಚ್ನ ಮುಂಭಾಗದ ಕೋನ್ ಕವರ್ ಅನ್ನು ಮುಂಬೈನಲ್ಲಿ ಹೊಸದರೊಂದಿಗೆ ಬದಲಾಯಿಸಲಾಗಿದೆ ಎಂದು ಪಶ್ಚಿಮ ರೈಲ್ವೆ (Western Railway) ಹೇಳಿಕೆಯಲ್ಲಿ ತಿಳಿಸಿದೆ. ಹೊಸದಾಗಿ ಪ್ರಾರಂಭಿಸಲಾದ ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಗುರುವಾರ ಬೆಳಿಗ್ಗೆ 11.15 ರ ಸುಮಾರಿಗೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ರೈಲ್ವೆ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಧಾವಿಸಿ ಹಳಿಯನ್ನು ತೆರವುಗೊಳಿಸಿದ ನಂತರ ರೈಲು ಮುಂದೆ ಸಾಗಿತ್ತು. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ದೇಶದ ಮೊದಲ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಸ್ತುತ ಮೂರು ಮಾರ್ಗಗಳಲ್ಲಿ ಚಲಿಸುತ್ತಿದೆ ಎಂಬುವುದು ಉಲ್ಲೇಖನೀಯ.
#VandeBharat Train Damaged After Hitting Buffalo Herd In Gujarat . pic.twitter.com/PuxcyOxmbG
— Suresh Kumar (@journsuresh) October 6, 2022
ಅಪಘಾತ ನಡೆದದ್ದು ಹೇಗೆ?
ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ದೆಹಲಿಯಿಂದ ವಾರಣಾಸಿ, ದೆಹಲಿಯಿಂದ ಕತ್ರಾ ಮತ್ತು ಸೆಪ್ಟೆಂಬರ್ 30 ರಂದು ಗುಜರಾತ್ನ ಗಾಂಧಿ ನಗರದಿಂದ ಮುಂಬೈಗೆ ಪ್ರಾರಂಭವಾಗಿದೆ. ಎಮ್ಮೆಗೆ ಡಿಕ್ಕಿ ಹೊಡೆದ ನಂತರ ರೈಲಿನ ಮುಂಭಾಗ ಸ್ವಲ್ಪ ಹಾನಿಯಾಗಿದೆ. ಆದರೆ, ರೈಲಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂಬುದು ಸಮಾಧಾನದ ಸಂಗತಿ. ಮುಂಬೈ ಸೆಂಟ್ರಲ್ನಿಂದ ಗುಜರಾತ್ನ ಗಾಂಧಿನಗರ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಬೆಳಗ್ಗೆ 11.15ರ ಸುಮಾರಿಗೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ ಎಂದು ಪಶ್ಚಿಮ ರೈಲ್ವೆಯ ಹಿರಿಯ ಪ್ರೊ ಜೆಕೆ ಜಯಂತಿ ತಿಳಿಸಿದ್ದಾರೆ. ಬಟ್ವಾ ನಿಲ್ದಾಣದಿಂದ ಮಣಿನಗರ ನಿಲ್ದಾಣದ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಂಜಿನ್ನ ಮುಂಭಾಗಕ್ಕೆ ಹಾನಿಯಾಗಿದೆ.
ಇದನ್ನೂ ಓದಿ: Chola King: ಜೋರಾಯ್ತು ಚೋಳರ ಧರ್ಮದ ಕುರಿತ ಚರ್ಚೆ! ಕಮಲ್ ಹಾಸನ್ಗೆ ಬಿಜೆಪಿ ಸವಾಲು
ಅಹಮದಾಬಾದ್ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲಿನ ಮಾರ್ಗದಲ್ಲಿ ಬಂದ ಎಮ್ಮೆಗಳ ಅಪರಿಚಿತ ಮಾಲೀಕರ ವಿರುದ್ಧ ಆರ್ಪಿಎಫ್ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿದೆ ಎಂದು ಡಬ್ಲ್ಯುಆರ್ನ ಹಿರಿಯ ವಕ್ತಾರ (ಅಹಮದಾಬಾದ್ ವಿಭಾಗ) ಜಿತೇಂದ್ರ ಕುಮಾರ್ ಜಯಂತ್ ಹೇಳಿದ್ದಾರೆ.
ಇದನ್ನೂ ಓದಿ: Betel Leaf Farming: ವೀಳ್ಯದೆಲೆಯಿಂದ ಕೈತುಂಬಾ ಲಾಭ! ಇದು ವಿಜಯಪುರ ರೈತರ ಸಕ್ಸಸ್ ಸ್ಟೋರಿ
ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಸ್ತುತ ಭಾರತದ ಅತ್ಯಂತ ವೇಗದ ರೈಲು ಎಂಬುವುದು ಉಲ್ಲೇಖನೀಯ. ವಂದೇ ಭಾರತ್ನ ವೇಗದ ಮಿತಿ ಗಂಟೆಗೆ 180 ಕಿಮೀ ಇದೆ. ಮುಂಬರುವ ಸಮಯದಲ್ಲಿ, ಅದರ ವೇಗ ಗಂಟೆಗೆ 200 ಕಿಲೋಮೀಟರ್ಗಳಿಗೆ ಹೆಚ್ಚಾಗುತ್ತದೆ. ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯದ ಬಗ್ಗೆ ರೈಲ್ವೆ ವಿಶೇಷ ಕಾಳಜಿ ವಹಿಸಿದೆ. ಇದು ಒರಗುವ ಆಸನ ವ್ಯವಸ್ಥೆಯನ್ನು ಹೊಂದಿದೆ, ಈ ಸ್ವಯಂಚಾಲಿತ ಅಗ್ನಿ ಸಂವೇದಕವು ವಂದೇ ಭಾರತ್ ರೈಲಿನಲ್ಲಿದೆ. ರೈಲಿನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯದ ಜೊತೆಗೆ ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ