ರಾಜ್ಯಸಭೆ ಉಪ ಸಭಾಪತಿ ಚುನಾವಣೆ: ಎನ್​ಸಿಪಿಯಿಂದ ವಂದನಾ ಚವಾನ್​ ಅಭ್ಯರ್ಥಿ

news18
Updated:August 7, 2018, 3:28 PM IST
ರಾಜ್ಯಸಭೆ ಉಪ ಸಭಾಪತಿ ಚುನಾವಣೆ: ಎನ್​ಸಿಪಿಯಿಂದ ವಂದನಾ ಚವಾನ್​ ಅಭ್ಯರ್ಥಿ
news18
Updated: August 7, 2018, 3:28 PM IST
ನ್ಯೂಸ್​18 ಕನ್ನಡ

ನವದೆಹಲಿ (ಆ. 7): ರಾಜ್ಯಸಭೆ ಚುನಾವಣೆಯಲ್ಲಿ ಉಪ ಸಭಾಪತಿ ಸ್ಥಾನಕ್ಕೆ ವಿರೋಧಪಕ್ಷದಿಂದ ಸಂಸದೆ ವಂದನಾ ಚವಾನ್​ ಅವರನ್ನು ಜಂಟಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಮಹಾರಾಷ್ಟ್ರದಿಂದ 2ನೇ ಬಾರಿಗೆ ರಾಜ್ಯಸಭಾ ಸಂಸದೆಯಾಗಿರುವ ವಂದನಾ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಎನ್​ಡಿಎಯಿಂದ ಹರಿವಂಶ್​ ಸಿಂಗ್​ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅವರ ವಿರುದ್ಧ ಎನ್​ಸಿಪಿಯಿಂದ ಸಂಸದೆ ವಂದನಾ ಚವಾನ್​ ಅವರನ್ನು ಕಣಕ್ಕೆ ಇಳಿಸಲಾಗುತ್ತಿದೆ.

ಇದನ್ನೂ ಓದಿ:  ರಾಜ್ಯಸಭೆ ಉಪಸಭಾಪತಿ ಚುನಾವಣೆ: ಎನ್​ಡಿಎಗೆ ಕೈ ಕೊಡಲಿವೆಯಾ ಮಿತ್ರಪಕ್ಷಗಳು?

ಪುಣೆಯ ಮಾಜಿ ಮೇಯರ್​ ಕೂಡ ಆಗಿರುವ ವಂದನಾ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಎನ್​ಡಿಎ ಘೋಷಿಸಿರುವ ಅಭ್ಯರ್ಥಿಯ ವಿಷಯದಲ್ಲಿ ಮಿತ್ರ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣೆಯ ದಿನ ಹಾಜರಾಗದೆ ಇರಲು ಯೋಚಿಸಿದ್ದಾರೆ. ಇದರಿಂದಾಗಿ ಶಿವಸೇನೆ ವಂದನಾ ಅವರಿಗೆ ಬೆಂಬಲ ಸೂಚಿಸುವ ಸಾಧ್ಯತೆಯೂ ಇಲ್ಲದಿಲ್ಲ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ