• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Love Story: ಆನ್‌ಲೈನ್‌ ಸ್ಕ್ಯಾಮ್‌ನಿಂದ ಗೆಳತಿಯನ್ನು ಬಚಾವ್‌ ಮಾಡಿದ ಗೆಳೆಯ, ಕೊನೆಗೆ ಆಕೆಯನ್ನೇ ಮದ್ವೆಯಾದ!

Love Story: ಆನ್‌ಲೈನ್‌ ಸ್ಕ್ಯಾಮ್‌ನಿಂದ ಗೆಳತಿಯನ್ನು ಬಚಾವ್‌ ಮಾಡಿದ ಗೆಳೆಯ, ಕೊನೆಗೆ ಆಕೆಯನ್ನೇ ಮದ್ವೆಯಾದ!

ಪ್ರೀತಿ (ಸಾಂಕೇತಿಕ ಚಿತ್ರ)

ಪ್ರೀತಿ (ಸಾಂಕೇತಿಕ ಚಿತ್ರ)

ಸೋಷಿಯಲ್ ಮೀಡಿಯಾದಲ್ಲಿ ಭೇಟಿಯಾದ ಸೌರಭ್ ತನ್ನನ್ನು ದೊಡ್ಡ ಬಿಕ್ಕಟ್ಟಿನಿಂದ ಹೊರತರುತ್ತಾನೆ, ತನ್ನ ಜೀವನ ಸಂಗಾತಿಯಾಗುತ್ತಾನೆ ಎಂದು ನೇಹಾ ಕನಸು ಮನಸಿನಲ್ಲೂ ಎಣಿಸಿರಲಿಲ್ಲ.

 • Local18
 • 5-MIN READ
 • Last Updated :
 • Share this:

  ನಾಸಿಕ್:  ಪ್ರೀತಿ, ಪ್ರೇಮ, ಪ್ರಣಯ ಅಂತ ಪ್ರೀತಿಯಲ್ಲಿರುವ ಜೋಡಿಗಳು (Lovers) ಒಂಥರಾ ಬೇರೆಯದೇ ಲೋಕದಲ್ಲಿರ್ತಾರೆ! ಆದ್ರೆ ಪ್ರಾಕ್ಟಿಕಲ್ ಜೀವನದಲ್ಲಿ (Practical Life) ಬರೋ ಸಂಕಷ್ಟಗಳೇ ಈ ಜೋಡಿಗಳ ಸತ್ವಪರೀಕ್ಷೆ ಮಾಡುತ್ತವೆ. ಕಷ್ಟ ಬಂದಾಗ ಮದುವೆಯೇ ಮುರಿದುಬೀಳಬಹುದು, ಲವ್ ಬ್ರೇಕಪ್​ (Love Breakup) ಆಗಬಹುದು. ಇಬ್ಬರೂ ಒಟ್ಟಾಗಿ ಕಷ್ಟ ಎದುರಿಸಿ ಗೆದ್ದರೆ (Success Of Love) ಮಾತ್ರ ಅದು ನಿಜವಾದ ಪ್ರೇಮ ಅನ್ನಬಹುದು! ಅಂತಹುದೇ ಒಂದು ವಿಶಿಷ್ಟ ಕಥೆ ಇಲ್ಲಿದೆ ನೋಡಿ.


  ಸೌರಭ್ ನಿಕುಂಭ್ ಮತ್ತು ನೇಹಾ ಬೆಳೇಕರ್ ಎಂಬ ಈ ಜೋಡಿಯ ಕಥೆಯನ್ನೂ ಈಗ ನಾವು ಹೇಳಹೊರಟಿರೋದು.


  ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ
  ಸೌರಭ್ ಮತ್ತು ನೇಹಾ ಪರಸ್ಪರ ಪರಿಚಯವಾಗಿದ್ದೇ ಸಾಮಾಜಿಕ ಜಾಲತಾಣಗಳ ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ಭೇಟಿಯಾದ ಸೌರಭ್ ತನ್ನನ್ನು ದೊಡ್ಡ ಬಿಕ್ಕಟ್ಟಿನಿಂದ ಹೊರತರುತ್ತಾನೆ, ತನ್ನ ಜೀವನ ಸಂಗಾತಿಯಾಗುತ್ತಾನೆ ಎಂದು ನೇಹಾ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಆದರೆ ಇಂತಹ ಅಚ್ಚರಿಯ ಘಟನೆಯೊಂದು ಇವರಿಬ್ಬರನ್ನು ಒಂದುಮಾಡಿತು.


  ದೊಡ್ಡ ಸಮಸ್ಯೆಯಲ್ಲಿ ಸಿಲುಕಿದ್ದ ನೇಹಾ!
  ನೇಹಾ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಘೋಟಿ ಗ್ರಾಮ ನಿವಾಸಿಯಾಗಿದ್ದು, ಸೌರಭ್ ನಾಸಿಕ್ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಟೆ ಹೊಡೆಯುತ್ತಾ ಇಬ್ಬರೂ ಸ್ನೇಹಿತರಾಗಿದ್ದರು. ಆದರೆ ಆಗ ನೇಹಾ ದೊಡ್ಡ ಸಮಸ್ಯೆಯೊಂದಕ್ಕೆ ಸಿಲುಕಿರುವುದು ಸೌರಭ್ ಗೆ ಗೊತ್ತಿರಲಿಲ್ಲ.


  ಅಪ್ಪನ ಆಸ್ಪತ್ರೆ ಖರ್ಚಿಗೆ ಸಾಲ
  ಅದೇ ಸಮಯಕ್ಕೆ ನೇಹಾ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ನೇಹಾ ಅವರಿಗೆ ಕಾರಣ ನೇಹಾಗೆ ಹಣದ ಅಗತ್ಯವಿತ್ತು. ಸಹಾಯಕ್ಕಾಗಿ ಅನೇಕರನ್ನು ಸಂಪರ್ಕಿಸಿದರೂ ಯಾವುದೇ  ಪ್ರಯೋಜನವಾಗಲಿಲ್ಲ. ಹೀಗಾಗಿ ನೇಹಾ ಆಸ್ಪತ್ರೆಯ ಖರ್ಚಿಗೆಂದು ಲೋನ್ ಆ್ಯಪ್‌ ಒಂದರಿಂದ 20,000 ಸಾಲ ತೆಗೆದುಕೊಂಡಿದ್ದರು. ಆದರೆ ಇದೇ ಸಾಲದ ನೆಪವನ್ನಿಟ್ಟುಕೊಂಡು ನೇಹಾ ಅವರನ್ನು ಲೋನ್ ಆ್ಯಪ್ ಹಿಂಸಿಸತೊಡಗಿತ್ತು.
  ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!


  ಯುವತಿಯ ಬ್ಲಾಕ್ ಮೇಲ್!
  ಕೆಲವೇ ದಿನಗಳಲ್ಲಿ ಲೋನ್ ಆ್ಯಪ್​ಗೆ ಸಂಬಂಧಿಸಿದ ವ್ಯಕ್ತಿ ನೇಹಾ ಅವರನ್ನು ಬ್ಲಾಕ್ ಮೇಲ್ ಮಾಡತೊಡಗಿದ. ಇಪ್ಪತ್ತು ಸಾವಿರ ಸಾಲ ಮರು ಪಾವತಿಸಲು ಭಾರಿ ಬಡ್ಡಿ ನೀಡುವಂತೆ ಒತ್ತಾಯಿಸುತ್ತಿದ್ದ. ಇಲ್ಲದಿದ್ದರೆ ನೇಹಾ ಅವರ ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆಯನ್ನೂ ಹಾಕಲಾಗಿತ್ತು.


  ಇದನ್ನೂ ಓದಿ: ಶಿರಸಿಯಲ್ಲಿ IT ಕಂಪನಿ ಸ್ಥಾಪನೆ! ಮಲೆನಾಡು, ಕರಾವಳಿಯ ಪ್ರತಿಭೆಗಳಿಗೆ ಹೊಸ ಅವಕಾಶ


  ಸೋಷಿಯಲ್ ಮೀಡಿಯಾದಲ್ಲಿ ಭೇಟಿಯಾದ ಸೌರಭ್​ಗೆ ನಿಧಾನವಾಗಿ ನೇಹಾ ತಾನು ಸಮಸ್ಯೆಯಲ್ಲಿ ಸಿಲುಕಿ ಬಿದ್ದಿರುವ ವಿಷಯ ತಿಳಿಯಿತು. ಸೌರಭ್ ನೇಹಾರನ್ನು ಈ ಸಮಸ್ಯೆಯಿಂದ ಹೊರತರುವ ಭರವಸೆ ನೀಡಿದರು, ನೇಹಾರ ಜೊತೆ ಗಟ್ಟಿಯಾಗಿ ನಿಂತರು. ಲೋನ್ ಆ್ಯಪ್​ ನೀಡುತ್ತಿದ್ದ ಸಮಸ್ಯೆಯನ್ನು ನೇಹಾರ ಜೊತೆ ನಿಂತು ನಿವಾರಿಸಿ ಅವರ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು.

  Published by:ಗುರುಗಣೇಶ ಡಬ್ಗುಳಿ
  First published: