ಹರಿದ್ವಾರದಲ್ಲಿ ಇಂದು ಅಟಲ್ ಬಿಹಾರಿ ವಾಜಪೇಯಿ ಅಸ್ಥಿ ವಿಸರ್ಜನೆ

news18
Updated:August 19, 2018, 9:31 AM IST
ಹರಿದ್ವಾರದಲ್ಲಿ ಇಂದು ಅಟಲ್ ಬಿಹಾರಿ ವಾಜಪೇಯಿ ಅಸ್ಥಿ ವಿಸರ್ಜನೆ
news18
Updated: August 19, 2018, 9:31 AM IST
ನ್ಯೂಸ್ 18 ಕನ್ನಡ

ನವದೆಹಲಿ (ಆ.19): ವಯೋಸಹಜ ಕಾಯಿಲೆಯಿಂದ ಆ.16ರಂದು ಅಸ್ತಂಗತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸಜರ್ನೆ ಕ್ರಿಯೆ ಇಂದು ಹರಿದ್ವಾರದ ಗೋಮತಿ ನದಿಯಲ್ಲಿ ನಡೆಯಲಿದೆ. ಇದೇ ರೀತಿಯಾಗಿ ದೇಶದ ನೂರು ನದಿಗಳಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ಜರುಗಲಿದೆ ಎಂದು ಬಿಜೆಪಿ ತಿಳಿಸಿದೆ.

ಹರಿದ್ವಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜನಾಥ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಉತ್ತರಾಖಂಡದ ತ್ರಿವೇಂದ್ರ ಸಿಂಗ್ ರಾವತ್ ಹಾಗೂ ಇತರೆ ನಾಯಕರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕ ಭುಪೇಂದ್ರ ಯಾದವ್ ತಿಳಿಸಿದರು.

ಇಂದು ಬೆಳಗ್ಗೆ ನಾಯಕರೆಲ್ಲ ಡೆಹ್ರಡೂನ್​ನ ಜಾಲಿ ಗ್ರಾಂಟ್ ವಿಮಾನನಿಲ್ದಾಣದಿಂದ ಹರಿದ್ವಾರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನದ ನಂತರ ವಿಧಿವಿಧಾನ ಕ್ರಿಯೆಗಳು ಜರುಗಲಿವೆ ಎಂದು ಬಿಜೆಪಿ ವಕ್ತಾರ ಭುಪೇಂದ್ರ ಯಾದವ್ ಹೇಳಿದರು.

ಸ್ವತಂತ್ರ ಭಾರತ ನಂತರದ ಅತೀ ಪ್ರಭಾವಶಾಲಿ ನಾಯಕರಾಗಿದ್ದ ವಾಜಪೇಯಿ ಅವರು ಗುರುವಾರ ನಿಧನರಾದರು. ದೇಶದ ರಾಜಧಾನಿ ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ಅವರ ಅಂತ್ಯ ಸಂಸ್ಕಾರ ನೆರವೇರಿತ್ತು.
 ಆಗಸ್ಟ್ 20ರಂದು ಬಿಜೆಪಿ ಪಕ್ಷದ ವತಿಯಿಂದ ಪ್ರಾರ್ಥನಾ ಸಭೆಗಳು ನಡೆಯಲಿವೆ. ಇದೇ ಕಾರ್ಯಕ್ರಮ ಲಕ್ನೋದಲ್ಲಿ ಆಗಸ್ಟ್ 23ರಂದು ಜರುಗಲಿದೆ. ಕೇಂದ್ರ ಗೃಹ ಸಚಿವ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ವಾಜಪೇಯಿ ಅವರ ಸಂಬಂಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಯಾದವ್ ತಿಳಿಸಿದರು.

ವಾಜಪೇಯಿ ಅವರ ಅಸ್ಥಿ ವಿಸರ್ಜನೆ ಕಾರ್ಯ ದೇಶದ ಹಲವು ಪವಿತ್ರ ನದಿಗಳಲ್ಲಿ ನಡೆಯಲಿದೆ. ಅಸ್ಥಿ ಕಳಶವನ್ನು ದೇಶದ ಎಲ್ಲ ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕಳುಹಿಸಲಾಗಿದೆ. ಪ್ರಾರ್ಥನಾ ಸಭೆಗಳು ಆಯಾ ರಾಜ್ಯದ ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಪಂಚಾಯತಿ ಮಟ್ಟದಲ್ಲೂ ನಡೆಯಲಿದೆ ಎಂದು ಮಾಹಿತಿ ನೀಡಿದರು.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...