Vaishno Devi Yatra: ಭಕ್ತಾದಿಗಳೇ ಗಮನಿಸಿ, ವೈಷ್ಣೋದೇವಿ ಯಾತ್ರೆ ಮತ್ತೆ ಆರಂಭ

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಆಗಸ್ಟ್ 21 ರ ಬೆಳಗಿನ ಜಾವದವರೆಗೆ ಸ್ಥಗಿತಗೊಳಿಸಲಾಗಿತ್ತು ಎಂದು ಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿಯು ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿತ್ತು.

ವೈಷ್ಣೋದೇವಿ ಯಾತ್ರೆ

ವೈಷ್ಣೋದೇವಿ ಯಾತ್ರೆ

 • Share this:
  ವೈಷ್ಣೋದೇವಿ ಭಕ್ತರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ. ಇಂದಿನಿಂದ (ಆಗಸ್ಟ್ 21) ವೈಷ್ಣೋದೇವಿ ಯಾತ್ರೆ (Vaishno Devi Yatra Resumed) ಮತ್ತೆ ಆರಂಭವಾಗಲಿದೆ. ನಿರಂತರ ಮಳೆ, ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆ ಇಂದು ಬೆಳಗ್ಗೆ ಪುನರಾರಂಭಗೊಳ್ಳಲು ಸಜ್ಜಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಆಗಸ್ಟ್ 21 ರ ಬೆಳಗಿನ ಜಾವದವರೆಗೆ ಸ್ಥಗಿತಗೊಳಿಸಲಾಗಿತ್ತು ಎಂದು ಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿಯು (Mata Vaishno Devi Shrine Board) ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿತ್ತು.

  ಸ್ಥಳದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕೆ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಪರಿಸ್ಥಿತಿಯನ್ನು ಮಂಡಳಿಯು ನಿಗಾ ವಹಿಸುತ್ತಿದೆ.

  ಮೇಘಸ್ಫೋಟದಿಂದ ನಿಂತಿದ್ದ ಪವಿತ್ರ ಯಾತ್ರೆ
  ಜುಲೈ ತಿಂಗಳಿನಲ್ಲಿ ಅಮರನಾಥದ ಪವಿತ್ರ ಗುಹೆ ಪ್ರದೇಶದಲ್ಲಿ ಮೇಘಸ್ಫೋಟ ಉಂಟಾಗಿತ್ತು. ಇದರ ಪರಿಣಾಮವಾಗಿ ಪವಿತ್ರ ವೈಷ್ಣೋದೇವಿ ಗುಹೆಯ ಪಕ್ಕದಲ್ಲಿ ಭಾರೀ ಪ್ರಮಾಣದ ನೀರು ಹೊರಹಾಕಲ್ಪಟ್ಟಿತ್ತು. ನಂತರ ಅಮರನಾಥಕ್ಕೆ ಹೋಗುವ ಮಾರ್ಗವು ಹಾನಿಗೊಳಗಾಗಿತ್ತು. ಈ ಎಲ್ಲದರ ಪರಿಣಾಮವಾಗಿ ವೈಷ್ಣೋದೇವಿ ಯಾತ್ರೆಯು ಸ್ಥಗಿತಗೊಂಡಿತು.

  ಪರಿಹಾರ ಕಾರ್ಯಾಚರಣೆಗೆ ಸನ್ನದ್ಧ
  ಅಮರನಾಥ ದೇಗುಲದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆಯ ನಾಲ್ಕು Mi-17V5 ಮತ್ತು ನಾಲ್ಕು ಚೀಟಲ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.

  ಸೇನೆ ಮತ್ತು ಸ್ಥಳೀಯ ಪೊಲೀಸರೊಂದಿಗೆ ಸಿಆರ್‌ಪಿಎಫ್‌ನ ಬಿಗಿ ಭದ್ರತೆಯ ನಡುವೆ ಜೂನ್ 29 ರಂದು ಜಮ್ಮುವಿನಿಂದ ಯಾತ್ರೆ ಪ್ರಾರಂಭವಾಗಿತ್ತು.

  ಇನ್ನೂ ನಿಂತಿಲ್ಲ ಭಾರೀ ಮಳೆ
  ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಕಾಶ್ಮೀರದಂತಹ ರಾಜ್ಯಗಳಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಗುವ ಮೇಘಸ್ಫೋಟಗಳೊಂದಿಗೆ ಈ ವರ್ಷದ ಮಳೆ ಹಲವಾರು ರಾಜ್ಯಗಳಲ್ಲಿ ವಿನಾಶವನ್ನು ಉಂಟುಮಾಡುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಹಠಾತ್ ಪ್ರವಾಹದಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ ನಂತರ  ಪ್ರಸ್ತುತ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಇದರ ನಡುವೆಯೇ ವೈಷ್ಣೋದೇವಿ ಯಾತ್ರೆ ಪುನಃ ಆರಂಭಗೊಂಡಿದೆ. ಆದರೆ ಸದ್ಯ ಪಿರ್ ಪಂಜಾಲ್ ಪರ್ವತ ಶ್ರೇಣಿಯ ಮೇಲ್ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ರಜೌರಿ ಜಿಲ್ಲೆಯ ಜಮ್ಮುವಿನ ದರ್ಹಾಲಿ ನದಿಯು ಇನ್ನೂ ಉಕ್ಕಿ ಹರಿಯುತ್ತಿದೆ.

  ಉತ್ತರಾಖಂಡದಲ್ಲೂ ಭಾರೀ ಮಳೆ
  ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ನಿನ್ನೆ ಋಷಿಕೇಶದ ಘಾಟ್‌ಗಳು ತುಂಬಿ ಹರಿಯಲಾರಂಭಿಸಿವೆ.  ಗಂಗಾ ನದಿಯ ನೀರಿನ ಮಟ್ಟ ಇನ್ನೂ ಹೆಚ್ಚುತ್ತಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಹರಿದ್ವಾರದ ಗ್ರಾಮಗಳಿಗೂ ಪ್ರವಾಹದ ನೀರು ನುಗ್ಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

  ಇದನ್ನೂ ಓದಿ: Supreme Court: ಬಳ್ಳಾರಿಯ ಬಾಲಕಿಗೆ 53 ಲಕ್ಷ ಪರಿಹಾರ; ಸುಪ್ರೀಂ ಆದೇಶ

  ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಡೆಹ್ರಾಡೂನ್ ಬಳಿಯ ಕೆಲವು ವಿಪತ್ತು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ರಾಜ್ಯವು ಎದುರಿಸುತ್ತಿರುವ ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ಉಂಟಾಗುವ ಒಟ್ಟಾರೆ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಇಲ್ಲಿಯವರೆಗೆ ನಾಲ್ವರು ಮೃತಪಟ್ಟಿದ್ದಾರೆ. 13 ಜನರು ಗಾಯಗೊಂಡಿದ್ದಾರೆ.  12 ಜನರು ನಾಪತ್ತೆಯಾಗಿದ್ದಾರೆ.ಐದು ಗೋಶಾಲೆಗಳು ಹಾನಿಗೊಳಗಾಗಿವೆ ಮತ್ತು 78 ಪ್ರಾಣಿಗಳು ಗಾಯಗೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

  ಹಿಮಾಚಲ ಪ್ರದೇಶದಲ್ಲೂ ತೀವ್ರ ಅನಾಹುತ
  ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಹಿಮಾಚಲ ಪ್ರದೇಶದಾದ್ಯಂತ ಮುಂದಿನ 12 ಗಂಟೆಗಳ ಕಾಲ ಆರೆಂಜ್ ಅಲರ್ಟ್ ನೀಡಿದೆ. ಆಗಸ್ಟ್ 24 ರವರೆಗೆ ಹಳದಿ ಅಲರ್ಟ್ ಜಾರಿಯಲ್ಲಿದೆ. ಈ ಅವಧಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

  ಇದನ್ನೂ ಓದಿ: Tomato Fever: ಎಚ್ಚರ, ಕಟ್ಟೆಚ್ಚರ! ಕರ್ನಾಟಕಕ್ಕೆ ಟೊಮೆಟೊ ಜ್ವರದ ಎಚ್ಚರಿಕೆ ನೀಡಿದ ಪ್ರಮುಖ ಮೆಡಿಕಲ್ ಜರ್ನಲ್

  ಹಿಮಾಚಲ ಪ್ರದೇಶದಲ್ಲಿ ಭಾರೀ ಮುಂಗಾರು ಮಳೆಯಿಂದಾಗಿ ಪ್ರವಾಹ, ಭೂಕುಸಿತ ಮತ್ತು ಮನೆ ಕುಸಿದು ಜನಜೀವನ ಅಸ್ತವ್ಯಸ್ತಗೊಂಡಿದ್ದರಿಂದ 22 ಜನರು ಸಾವನ್ನಪ್ಪಿದ್ದಾರೆ. ಮಂಡಿಯಲ್ಲಿ ಮನಾಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಮತ್ತು ಶೋಘಿಯಲ್ಲಿ ಶಿಮ್ಲಾ-ಚಂಡೀಗತ್ ಹೆದ್ದಾರಿ ಸೇರಿದಂತೆ 743 ರಸ್ತೆಗಳನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ.
  Published by:guruganesh bhat
  First published: