Viral Video: ವಡೋದರಾ ಪ್ರವಾಹ; ಪ್ರಾಣದ ಹಂಗು ತೊರೆದು ಹಸುಗೂಸನ್ನು ರಕ್ಷಿಸಿದ ಪೊಲೀಸ್​ ಅಧಿಕಾರಿ

Vadodara Rains: ಮಾನವೀಯತೆ ಮೆರೆದಿರುವ ಪೊಲೀಸ್​ ಅಧಿಕಾರಿ, ಪ್ಲಾಸ್ಟಿಕ್ ಟಬ್​ನೊಳಗೆ ಬಟ್ಟೆಯನ್ನಿಟ್ಟು ಅದರ ಮಧ್ಯೆ ಮಗುವನ್ನು ಸುತ್ತಿ ಮಳೆ ನೀರು ತಾಗದಂತೆ ಎಚ್ಚರವಹಿಸಿ ರಕ್ಷಿಸಿದ್ದಾರೆ.

Sushma Chakre | news18
Updated:August 3, 2019, 10:50 AM IST
Viral Video: ವಡೋದರಾ ಪ್ರವಾಹ; ಪ್ರಾಣದ ಹಂಗು ತೊರೆದು ಹಸುಗೂಸನ್ನು ರಕ್ಷಿಸಿದ ಪೊಲೀಸ್​ ಅಧಿಕಾರಿ
ಹಸುಗೂಸನ್ನು ರಕ್ಷಿಸಿದ ಗುಜರಾತ್ ಪೊಲೀಸ್
  • News18
  • Last Updated: August 3, 2019, 10:50 AM IST
  • Share this:
ನವದೆಹಲಿ (ಆ. 3): ಗುಜರಾತ್​ನ  ವಡೋದರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಸಂಪೂರ್ಣ ಪ್ರದೇಶ ಜಲಾವೃತವಾಗಿದೆ. ಪ್ರವಾಹದಿಂದ ಮನೆಗಳಲ್ಲಿ ಸಿಕ್ಕಿಹಾಕಿಕೊಂಡ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ಹಸುಗೂಸಿರುವ  ಟಬ್​ ಅನ್ನು ತಲೆಯ ಮೇಲೆ ಹೊತ್ತುಕೊಂಡು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. 

ಮಹಿಳೆಯೊಬ್ಬರು ಮಗುವಿನೊಂದಿಗೆ ನೀರು ತುಂಬಿದ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ ಆ ಮಹಿಳೆಯ ಹಸುಗೂಸನ್ನು ಪ್ಲಾಸ್ಟಿಕ್ ಟಬ್​ನಲ್ಲಿಟ್ಟುಕೊಂಡು, ಆ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಕುತ್ತಿಗೆ ಮೀರಿ ನಿಂತಿದ್ದ ನೀರಿನಲ್ಲೇ ಮಗುವನ್ನು ಸಾಗಿಸಿ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್ ಗೋವಿಂದ್ ಚಾವ್ಡಾ​ ಮಾನವೀಯತೆ ಮೆರೆದಿದ್ದಾರೆ. ಬಳಿಕ, ಆ ಮಹಿಳೆಯನ್ನೂ ನೀರಿನಿಂದ ರಕ್ಷಿಸಿದ್ದಾರೆ.



ಹೆಚ್ಚುವರಿ ಸೇನೆ ನಿಯೋಜನೆ ನಂತರ ಕಾಶ್ಮೀರದಲ್ಲಿ ಆತಂಕದ ವಾತಾವರಣ; ಹೈಅಲರ್ಟ್​ನಲ್ಲಿ ವಾಯುಪಡೆ
Loading...

ವಡೋದರದ ದೇವಿಪುರ ಬಡಾವಣೆಯ ವಿಶ್ವಾಮಿತ್ರಿ ರೈಲ್ವೆ ನಿಲ್ದಾಣದ ಬಳಿ ಪೊಲೀಸ್​ ಅಧಿಕಾರಿ ಮಗುವನ್ನು ರಕ್ಷಿಸಿದ ಘಟನೆ ನಡೆದಿದೆ. ಗೋವಿಂದ್ ಚಾವ್ಡಾ ಅವರ ಕುತ್ತಿಗೆಯವರೆಗೆ ನೀರು ನಿಂತಿತ್ತು. ಆದರೂ ಹೆದರದೆ ಮುಂದೆ ಹೋದ ಅವರು ಮಗುವನ್ನು ಸುರಕ್ಷಿತವಾಗಿ ದಡಕ್ಕೆ ಸಾಗಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. 'ಮಗು ಹಾಗೂ ತಾಯಿ ಪ್ರವಾಹದ ನೀರಿನಿಂದ ತುಂಬಿದ್ದ ಮನೆಯೊಂದರಲ್ಲಿ ಸಿಲುಕಿದ್ದಾರೆ ಎಂಬ ವಿಷಯ ತಿಳಿಯಿತು. ಮಗು ತುಂಬಾ ಚಿಕ್ಕದ್ದಾಗಿದ್ದರಿಂದ ಹೆಗಲ ಮೇಲೆ ಹೊತ್ತು ಹೋಗುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಆ ತಾಯಿಯಿಂದ ಪ್ಲಾಸ್ಟಿಕ್ ಟಬ್ ಪಡೆದುಕೊಂಡು ಅದರಲ್ಲಿ ಮಗುವನ್ನಿಟ್ಟುಕೊಂಡು ಸಾಗಿಸಿದೆ' ಎಂದು ಗೋವಿಂದ್ ಚಾವ್ಡಾ ಹೇಳಿದ್ದಾರೆ.

 Viral Video: ವಡೋದರಾ ಪ್ರವಾಹದಲ್ಲಿ ತೇಲಿಬಂದ ಮೊಸಳೆ ಮಾಡಿದ್ದೇನು? ಇಲ್ಲಿದೆ ಶಾಕಿಂಗ್ ವಿಡಿಯೋ

ಒಂದೂವರೆ ಕಿ.ಮೀ. ಪ್ರವಾಹದ ನೀರಿನಲ್ಲೇ ನಡೆದುಕೊಂಡು ಹೋದ ಗೋವಿಂದ್ ಚಾವ್ಡಾ 5 ಅಡಿ ನಿಂತಿದ್ದ ನೀರಿನಲ್ಲಿ ಮಗುವನ್ನು ಸಾಗಿಸಿದ್ದಾರೆ. ತಾವೂ ಮುಳುಗಿಹೋದರೆ ಕಷ್ಟವೆಂದು ಯಾರೊಬ್ಬರೂ ಆ ಮಹಿಳೆ ಮತ್ತು ಮಗುವಿನ ರಕ್ಷಣೆಗೆ ಹೋಗಿರಲಿಲ್ಲ. ಆದರೆ, ಮಾನವೀಯತೆ ಮೆರೆದಿರುವ ಪೊಲೀಸ್​ ಅಧಿಕಾರಿ, ಪ್ಲಾಸ್ಟಿಕ್ ಟಬ್​ನೊಳಗೆ ಬಟ್ಟೆಯನ್ನಿಟ್ಟು ಅದರ ಮಧ್ಯೆ ಮಗುವನ್ನು ಸುತ್ತಿ ಮಳೆ ನೀರು ತಾಗದಂತೆ ಎಚ್ಚರವಹಿಸಿ ರಕ್ಷಿಸಿದ್ದಾರೆ.

First published:August 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...