ವಡೋದರ; ಮುಟ್ಟಿನ ಬಗ್ಗೆ ಸಮಾಜದಲ್ಲಿ ಇರುವ ಕೀಳರಿಮೆ ಹೋಗಲಾಡಿಸಲು ಮಹಿಳಾ ಸಂಘಟನೆಗಳು ಮತ್ತು ಕಾರ್ಯಕರ್ತರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಆದಾಗ್ಯೂ, ಈ ಕೀಳರಿಮೆಗೆ ಅಂತ್ಯವಿಲ್ಲ ಎಂದು ತೋರುತ್ತದೆ ಎಂಬುದಕ್ಕೆ ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ವರದಿಯಾದ ಆಘಾತಕಾರಿ ಘಟನೆಯೇ ಸಾಕ್ಷಿ. ಮದುವೆಯ ದಿನದಂದು ತನ್ನ ಮುಟ್ಟಿನ ದಿನವನ್ನು ಗುಟ್ಟಾಗಿಟ್ಟ ಕಾರಣಕ್ಕೆ ಕೈ ಹಿಡಿದ ಪತಿರಾಯ ಹೆಂಡತಿಯಿಂದ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾನೆ.
ಮದುವೆಯ ದಿನದಂದು ಮಹಿಳೆಯ ಮುಟ್ಟಿನ ಬಗ್ಗೆ ತಿಳಿದಾಗ ತಾನು ಮತ್ತು ತನ್ನ ತಾಯಿ ಆಘಾತಕ್ಕೊಳಗಾಗಿದ್ದೇವೆ ಮದುವೆಯಾಗಿ ವಿಚ್ಛೇದನ ಕೇಳಿದ ಗಂಡು ಹೇಳಿದ್ದಾನೆ. ಅಲ್ಲದೇ ಈ ವಿಷಯದ ಬಗ್ಗೆ ನಮ್ಮ ನಂಬಿಕೆ ಉಲ್ಲಂಘಿಸಲಾಗಿದೆ ಎಂದು ಆತ ಹೇಳಿದ್ದಾನೆ.
ಇದನ್ನು ಓದಿ: ಎಮ್ಮೆಗಳಿಗೂ ಇಲ್ಲಿದೆ ಬ್ಯೂಟಿ ಪಾರ್ಲರ್; ಉಚಿತ ಸ್ನಾನ, ಹೇರ್ ಕಟ್, ಆಯಿಲ್ ಮಸಾಜ್!
ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ, ಮದುವೆ ಸಮಾರಂಭ ಪೂರ್ಣಗೊಂಡ ನಂತರ ಪ್ರಾರ್ಥನೆಗಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಕೆಲವೇ ಕ್ಷಣಗಳ ಮೊದಲು ತನ್ನ ಹೆಂಡತಿ ಋತುಸ್ರಾವವಾಗಿರುವುದಾಗಿ ಹೇಳಿದ್ದಾಗಿ ಹೇಳಿಕೊಂಡಿದ್ದಾನೆ. ಈ ವರ್ಷದ ಜನವರಿಯಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ವಧು ಶಿಕ್ಷಕಿಯಾಗಿದ್ದರೆ, ವರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ