ವೈದ್ಯಕೀಯ ವಿಮೆ (Health Insurance) ಎಂಬುದು ಆಸ್ಪತ್ರೆಗಳಲ್ಲಿನ (Hospital) ಹೆಚ್ಚುವರಿ ಶುಲ್ಕಗಳನ್ನು ಭರಿಸಲು ಉದ್ಯೋಗಿಗಳಿಗೆ (Employees) ನೆರವಾಗುತ್ತವೆ. ಈ ವಿಮೆಗಳು ಅನೇಕ ನೀತಿ ನಿಯಮಗಳೊಂದಿಗೆ ಬಂದಿದ್ದು ಯಾವುದೇ ವಿಮೆಯನ್ನು ಕ್ಲೈಮ್ (Insurance Claim) ಮಾಡುವ ಮೊದಲು ಇವುಗಳನ್ನು ಅರಿತುಕೊಂಡಿರಬೇಕಾಗುತ್ತದೆ. ಆಸ್ಪತ್ರೆಯಲ್ಲಿ ರೋಗಿ ಎಷ್ಟು ಕಾಲ ಇರುತ್ತಾನೆ ಎಂಬುದನ್ನು ಆಧರಿಸಿ ಒಮ್ಮೊಮ್ಮೆ ಈ ವಿಮೆಗಳು ಪರಿಣಾಮಕಾರಿಯಾಗಿರುತ್ತವೆ.
24 ಗಂಟೆಗಳ ಗಡುವು ವಿಮೆಗಿಲ್ಲ
ಸಂಸ್ಥೆಗಳಲ್ಲಿ ಒದಗಿಸುವ ವೈದ್ಯಕೀಯ ವಿಮೆಗಳು ಒಮ್ಮೊಮ್ಮೆ ಉದ್ಯೋಗಿಯ ಸಂಪೂರ್ಣ ಕುಟುಂಬಕ್ಕೆ ರಕ್ಷಾ ಕವಚವನ್ನು ಒದಗಿಸಿದರೆ, ಇನ್ನು ಕೆಲವೊಮ್ಮೆ ಉದ್ಯೋಗಿಗೆ ಮಾತ್ರವೇ ಸೀಮಿತವಾಗಿರುತ್ತವೆ.
ಇದೀಗ ವಡೋದರ ನ್ಯಾಯಾಲಯ ನೀಡಿರುವ ತೀರ್ಪು ವಿಮೆಯ ಕುರಿತಾದ ಕೆಲವೊಂದು ಸಂದೇಹಗಳನ್ನು ದೂರಮಾಡಲು ಶಕ್ತವಾಗಿದೆ. ಒಬ್ಬ ವ್ಯಕ್ತಿ 24 ಗಂಟೆಗಳಿಗಿಂತ ಕಡಿಮೆ ಕಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರೂ ಆ ವ್ಯಕ್ತಿ ವೈದ್ಯಕೀಯ ವಿಮೆಗೆ ಕ್ಲೈಮ್ ಮಾಡಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: Health Insurance: ಆರೋಗ್ಯ ವಿಮೆ ಮಾಡ್ಸಿದ್ದೀರಾ? ಇಲ್ಲ ಅಂದ್ರೆ ದೊಡ್ಡ ಸಮಸ್ಯೆಯಾಗುತ್ತೆ ರೀ!
ವಿಮಾ ಮೊತ್ತವನ್ನು ನೀಡಲು ನಿರಾಕರಿಸಿದ್ದ ವಿಮಾ ಸಂಸ್ಥೆ
ವಿಮಾ ಕಂಪನಿಯು ವಡೋದರ ನಿವಾಸಿ ರಮೇಶ್ ಚಂದ್ರ ಜೋಶಿಯವರ ಆರೋಗ್ಯ ವಿಮೆಯ ಹಕ್ಕನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಜೋಶಿಯವರು ಆಗಸ್ಟ್ 2017 ರಲ್ಲಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿಯ ವಿರುದ್ಧ ದೂರು ಸಲ್ಲಿಸಿದ್ದರು. ಇದೀಗ ಜೋಶಿ ಅವರಿಗೆ ಪರಿಹಾರ ನೀಡುವಂತೆ ನ್ಯಾಯಾಧೀಶರು ವಿಮಾ ಕಂಪನಿಗೆ ಆದೇಶವಿತ್ತಿದ್ದಾರೆ.
ನ್ಯಾಯಾಲಯ ನೀಡಿದ ತೀರ್ಪೇನು?
ರೋಗಿಯು ಆಸ್ಪತ್ರೆಗೆ ದಾಖಲಾಗದಿದ್ದರೆ, ಆಸ್ಪತ್ರೆಗೆ ದಾಖಲಾಗಿಯೂ ಹೊಸ ವೈದ್ಯಕೀಯ ತಂತ್ರಜ್ಞಾನಗಳಿಂದ ಕಡಿಮೆ ಸಮಯದಲ್ಲಿ ಚಿಕಿತ್ಸೆ ಪಡೆದು ಚಿಕಿತ್ಸೆ ಪಡೆದಿದ್ದ ಸಮಯದಲ್ಲಿ ವಿಮಾ ಕಂಪನಿ ರೋಗಿಯು ಆಸ್ಪತ್ರೆಯಲ್ಲಿ ದಾಖಲಾಗಲಿಲ್ಲ ಎಂಬ ಕಾರಣ ನೀಡಿ ವಿಮೆಯನ್ನು ತಿರಸ್ಕರಿಸುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ವಿಶದೀಕರಿಸಿದೆ.
ಪ್ರಕರಣವೇನು?
ಜೋಶಿಯವರು ರೂ 44,468 ಮೊತ್ತದ ವಿಮಾ ಕ್ಲೈಮ್ ಅನ್ನು ಕಂಪನಿಗೆ ಸಲ್ಲಿಸಿದ್ದರು ಆದರೆ ಜೋಶಿಯವರು ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ಚಿಕಿತ್ಸೆ ಪಡೆದಿಲ್ಲ ಎಂಬ ಕಾರಣ ನೀಡಿ ನಿರಾಕರಿಸಿದೆ. ಇದರಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಜೋಶಿಯವರು, ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಿದ್ದಾರೆ. ಇದರಂತೆ ಇದೀಗ ನ್ಯಾಯಾಲಯ ತೀರ್ಪು ನೀಡಿದ್ದು, ವಿಮಾ ಪರಿಹಾರದೊಂದಿಗೆ ಜೋಶಿಯವರಿಗೆ ಸಂಸ್ಥೆ ಉಂಟುಮಾಡಿದ ಮಾನಸಿಕ ಸಂಕಷ್ಟ ಹಾಗೂ ನ್ಯಾಯಾಲಯ ವೆಚ್ಚ ಸೇರಿ ರೂ 5,000 ವನ್ನು ಪಾವತಿಸುವಂತೆ ತೀರ್ಪಿತ್ತಿದೆ.
ಅತ್ಯುತ್ತಮ ಹೂಡಿಕೆ ಎಂದರೆ ಆರೋಗ್ಯ ವಿಮೆಯಾಗಿದೆ
ಗ್ರಾಹಕ ನ್ಯಾಯಾಲಯದ ಹೊಸ ಆದೇಶದ ಪ್ರಕಾರ, ರೋಗಿಗಳು ಈಗ ಆಸ್ಪತ್ರೆಗೆ ದಾಖಲಾಗದೆ ವೈದ್ಯಕೀಯ ವಿಮೆಯನ್ನು ತ್ವರಿತವಾಗಿ ಪಡೆಯಬಹುದು. ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಮಾಡಬಹುದಾದ ಅತ್ಯುತ್ತಮ ಆರೋಗ್ಯ ಹೂಡಿಕೆ ಎಂದರೆ ಅದು ಆರೋಗ್ಯ ವಿಮೆಯಾಗಿದೆ. ಕೆಲವೊಂದು ಜನಪ್ರಿಯ ವಿಮೆಗಳು ಈ ರೀತಿ ಇವೆ
ನಗದು ರಹಿತ
ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುವ ಸಮಯದಲ್ಲಿ, ಪಾಲಿಸಿದಾರರು ನಗದು ರಹಿತ ಯೋಜನೆಯನ್ನು ಆರಿಸಿಕೊಂಡರೆ ವಿಮಾ ಕಂಪನಿಯು ಆಸ್ಪತ್ರೆಯ ಬಿಲ್‌ಗಳನ್ನು ಪೂರ್ಣವಾಗಿ ಪಾವತಿಸುತ್ತದೆ. ಯಾವುದೇ ಮೊತ್ತವನ್ನು ಪಾಲಿಸಿದಾರರು ಮುಂಚಿತವಾಗಿ ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ: Health Insurance: ಆರೋಗ್ಯ ವಿಮೆಯನ್ನು ಖರೀದಿಸುವ ಮೊದಲು ಈ 5 ವಿಚಾರ ತಪ್ಪದೇ ಗಮನಿಸಿ
ಮರುಪಾವತಿ
ನೆಟ್‌ವರ್ಕ್ ಆಸ್ಪತ್ರೆಗಳು ಈ ಯೋಜನೆಯಲ್ಲಿ ಮರುಪಾವತಿಯನ್ನು ನೀಡುತ್ತವೆ. ಆಸ್ಪತ್ರೆಯ ಬಿಲ್‌ಗಳನ್ನು ಪಾಲಿಸಿದಾರರು ಮುಂಚಿತವಾಗಿ ಪಾವತಿಸಬೇಕಾಗುತ್ತದೆ. ಆರೋಗ್ಯ ವಿಮಾ ಹಕ್ಕು ಸಲ್ಲಿಸುವಾಗ, ಈ ಕೆಳಗಿನ ದಾಖಲೆಗಳನ್ನು ಒಳಗೊಂಡಿರಬೇಕು:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ