COVID-19 Vaccination: ದೇಶಾದ್ಯಂತ ಕೊರೋನಾ ಲಸಿಕೆ ಉಚಿತ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​

ದೇಶಾದ್ಯಂತ ಕೊರೋನಾ ಡ್ರೈ ರನ್ ಆರಂಭವಾಗುತ್ತಿರುವ ಸಂದರ್ಭದಲ್ಲಿ ಲಸಿಕೆ ಕುರಿತಾಗಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಸಾರ್ವಜನಿಕರು ಯಾವ ವದಂತಿಗಳಿಗೂ ಕಿವಿಗೊಡಬೇಡಿ. ಈ ಕೊರೋನಾ ಲಸಿಕೆ ಉಚಿತವಾಗಿದ್ದು, ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​

  • Share this:
    ನವದೆಹಲಿ(ಜ.02): ಇಂದಿನಿಂದ ದೇಶಾದ್ಯಂತ ಕೋವಿಡ್ ಡ್ರೈ ರನ್ ಆರಂಭವಾಗಿದೆ. ಈ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಸ್ಪಷ್ಟಪಡಿಸಿದ್ದಾರೆ. ಈ ವ್ಯಾಕ್ಸಿನ್​ಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಉಚಿತ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಕೋವಿಡ್ ವ್ಯಾಕ್ಸಿನ್​ ಬಗ್ಗೆ ಇದ್ದ ಎಲ್ಲಾ ವದಂತಿಗಳಿಗೆ ಸಚಿವರು ತೆರೆ ಎಳೆದಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಕೋವಿಡ್ -19 ವ್ಯಾಕ್ಸಿನ್ ಇಡೀ ದೇಶಾದ್ಯಂತ ಉಚಿತವಾಗಿ ಲಭ್ಯವಿದೆ. ಜನರು ಯಾವುದೇ ಹಣ ನೀಡಬೇಕಿಲ್ಲ ಎಂದು ಹೇಳಿದರು. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ. ನಾವು ಮಾಡುತ್ತಿರುವ ಕೊರೋನಾ ವ್ಯಾಕ್ಸಿನ್ ಪ್ರಯೋಗ ಬಹಳ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.

    ಇಂದಿನಿಂದ ಕೋವಿಡ್ ಡ್ರೈ ರನ್ ಆರಂಭ; ವ್ಯಾಕ್ಸಿನ್​ ಸೆಂಟರ್​​ನಲ್ಲಿ ನಡೆಯುವ ಪ್ರಕ್ರಿಯೆಗಳೇನು?

    ದೇಶಾದ್ಯಂತ ಕೊರೋನಾ ಡ್ರೈ ರನ್ ಆರಂಭವಾಗುತ್ತಿರುವ ಸಂದರ್ಭದಲ್ಲಿ ಲಸಿಕೆ ಕುರಿತಾಗಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಸಾರ್ವಜನಿಕರು ಯಾವ ವದಂತಿಗಳಿಗೂ ಕಿವಿಗೊಡಬೇಡಿ. ಈ ಕೊರೋನಾ ಲಸಿಕೆ ಉಚಿತವಾಗಿದ್ದು, ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

    ಈ ಕೊರೋನಾ ಲಸಿಕೆ ಪ್ರಯೋಗ ಕುರಿತಾಗಿ ವಿವಿಧ ವದಂತಿಗಳು ಹರಿದಾಡುತ್ತಿವೆ. ಆದರೆ ಜನರು ಈ ವದಂತಿಗಳನ್ನು ನಂಬದೆ, ಉಚಿತ ಕೊರೋನಾ ಲಸಿಕೆ ಪಡೆಯುವತ್ತ ಗಮನ ಹರಿಸಿ ಎಂದು ಪುನರುಚ್ಚಿಸಿದರು. ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಡ್ರೈ ರನ್ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಕೋವಿಡ್ ಲಸಿಕೆ ಉಚಿತವಾಗಿ ಸಿಗುತ್ತಾ? ಅಥವಾ ಶುಲ್ಕ ಪಾವತಿಸಬೇಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ಕೊರೋನಾ ಲಸಿಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರವಲ್ಲ, ಇಡೀ ರಾಷ್ಟ್ರಾದ್ಯಂತ ಉಚಿತವಾಗಿ ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ.

    ಇಂದಿನಿಂದ ದೇಶಾದ್ಯಂತ ಅಂದರೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಕೋವಿಡ್ ಡ್ರೈ ರನ್ ಆರಂಭವಾಗಿದೆ.
    Published by:Latha CG
    First published: