HOME » NEWS » National-international » VACCINE TOURISM HOW VISIT VACCINATE AND VACATION TREND IS HELPING COUNTRIES WELCOME TOURISTS BACK STG LG

Vaccine Tourism: ಪ್ರವಾಸಿಗರನ್ನು ಆಕರ್ಷಿಸೋಕೆ ವ್ಯಾಕ್ಸಿನ್ ಟೂರಿಸಂ; ಇನ್ನು ಟ್ರಿಪ್ ಹೊರಡೋದೇ !

ಮಾಲ್ಡೀವ್ಸ್ ಬೀಚ್‍ನಲ್ಲಿಯೇ ಲಸಿಕೆ ನೀಡುವ ಪ್ಯಾಕೇಜ್ ನೀಡಿದೆ. ಲಸಿಕಾ ಪ್ರವಾಸೋದ್ಯಮ ಬಹಳಷ್ಟು ಏಜೆನ್ಸಿಗಳಿಗೆ ಲಾಭದಾಯಕ ವ್ಯಾಪಾರವಾಗಿ ಪರಿಣಮಿಸಿದೆ.

news18-kannada
Updated:June 22, 2021, 3:25 PM IST
Vaccine Tourism: ಪ್ರವಾಸಿಗರನ್ನು ಆಕರ್ಷಿಸೋಕೆ ವ್ಯಾಕ್ಸಿನ್ ಟೂರಿಸಂ; ಇನ್ನು ಟ್ರಿಪ್ ಹೊರಡೋದೇ !
ಪ್ರಾತಿನಿಧಿಕ ಚಿತ್ರ
  • Share this:

ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮರುಶಕ್ತಿ ನೀಡುವ ಏಕೈಕ ಮಾರ್ಗವೆಂದರೆ, ದೇಶದಾದ್ಯಂತ ವೇಗ ಗತಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯುವುದು ಮತ್ತು ‘ಲಸಿಕೆ ಪ್ರವಾಸೋದ್ಯಮ’. ಇದು ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಕೋವಿಡ್ -19ನ ಹೊಸ ಒತ್ತಡನ್ನು ವಿಶ್ವ ನಿಭಾಯಿಸುತ್ತಿದ್ದಂತೆ, ಬೇರೆ ಬೇರೆ ಕ್ಷೇತ್ರದ ವ್ಯವಹಾರಗಳು ಗಮನಾರ್ಹ ಯಶಸ್ಸನ್ನು ಪಡೆಯುತ್ತಿವೆ. ವಿವಿಧ ದೇಶಗಳಲ್ಲಿ ಪ್ರಯಾಣ ಮತ್ತು ಕೋವಿಡ್ ನಿಯಮಗಳು, ಆತಿಥ್ಯ, ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಸಂಪೂರ್ಣವಾಗಿ ಅಲ್ಲದಿದ್ದರೂ, ಭಾಗಶಃ ನಿಶ್ಚಲವಾಗಿವೆ. ಜಗತ್ತಿನಾದ್ಯಂತ ಸರ್ಕಾರಗಳು ಆದ್ಯತೆಯ ಕ್ಷೇತ್ರಗಳಿಗೆ ಒತ್ತು ನೀಡಿ, ಆರ್ಥಿಕತೆಯನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿವೆ. ಆದರೆ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮರುಶಕ್ತಿ ನೀಡುವ ಏಕೈಕ ಮಾರ್ಗವೆಂದರೆ, ದೇಶದಾದ್ಯಂತ ವೇಗ ಗತಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯುವುದು ಮತ್ತು ‘ಲಸಿಕೆ ಪ್ರವಾಸೋದ್ಯಮ’. ಇದು ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.



ಈ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕಲು, ವಿಶ್ವದಾದ್ಯಂತ ದೇಶಗಳು, ದೇಶವ್ಯಾಪಿ ಲಸಿಕಾ ಯೋಜನೆಗಳನ್ನು ಹಮ್ಮಿಕೊಂಡಿವೆ. ಜೊತೆಗೆ ಇತ್ತೀಚೆಗೆ ವಿಶ್ವದೆಲ್ಲೆಡೆ ‘ಲಸಿಕೆ ಪ್ರವಾಸೋದ್ಯಮ’ ಎಂಬ ಹೊಸ ಟ್ರೆಂಡ್ ಕೂಡ ಆರಂಭವಾಗಿದೆ. ಕೆಲವು ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಪೂರೈಸುತ್ತಿದ್ದರೆ, ಇನ್ನು ಕೆಲವು ದೇಶಗಳಲ್ಲಿ ಹಂತ ಹಂತವಾಗಿ ಲಸಿಕಾ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತಿದೆ.


ಥೈಲ್ಯಾಂಡ್, ಭಾರತ, ವಿಯೆಟ್ನಾಂ ಮತ್ತು ತೈವಾನ್‍ನಂತಹ ದೇಶಗಳು ಲಸಿಕೆಯ ಕೊರತೆಯನ್ನು ಎದುರಿಸುತ್ತಿದ್ದು, ಶ್ರೀಮಂತ ಮತ್ತು ಪ್ರಭಾವಿ ಮಂದಿ, ಲಸಿಕೆ ಹಾಗೂ ಉತ್ತಮ ಆರೋಗ್ಯ ಸೌಲಭ್ಯಗಳಿಗಾಗಿ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಆರಂಭದಲ್ಲಿಯೇ, ಶ್ರೀಮಂತ ಮತ್ತು ಪ್ರಭಾವಿ ಮಂದಿ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಸ್ಥಳ ಬದಲಾಯಿಸುವ ಟ್ರೆಂಡ್ ಹುಟ್ಟಿಕೊಂಡಿತ್ತು.


ಇದನ್ನೂ ಓದಿ:Morning Digest: ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ತಜ್ಞರ ಸಲಹೆ, ರಾಜ್ಯದಲ್ಲಿ ತಗ್ಗಿದ ಮಳೆಯ ಪ್ರಮಾಣ: ಇಂದಿನ ಪ್ರಮುಖ ಸುದ್ದಿಗಳಿವು

ಜಾಗತಿಕ ನಾಗರಿಕರಿಗೆ ಅನುಗುಣ ಪ್ಯಾಕೇಜ್‍ಗಳು


ಭಾರತ ಮತ್ತು ವಿದೇಶಿ ಟ್ರಾವೆಲ್ ಕಂಪೆನಿಗಳು, ಪ್ರವಾಸ ಮತ್ತು ವ್ಯಾಕ್ಸಿನೇಶನ್ ಹೊಂದಿರುವ ಲಾಭದಾಯಕ ಒಪ್ಪಂದಗಳನ್ನು ನೀಡುತ್ತಿವೆ. ಕೆಲವು ದೇಶಗಳು ಪ್ರವಾಸಿಗರಿಗೆ ಅನುಗುಣವಾದ ಪ್ಯಾಕೇಜ್‍ಗಳನ್ನು ನೀಡುತ್ತಿವೆ. ಉದಾಹರಣೆಗೆ, ತಮ್ಮ ಸದಸ್ಯರಿಗೆ 25,000 ಪೌಂಡ್‍ಗಿಂತ ಹೆಚ್ಚು ಶುಲ್ಕ ವಿಧಿಸುವ ಲಂಡನ್ ಮೂಲದ ಪ್ರವಾಸ ಮತ್ತು ಜೀವನಶೈಲಿ ಕಂಪೆನಿಗಳು, ಪ್ಯಾಕೆಜ್ ಘೋಷಿಸಿದ ಬಳಿಕ 2000ಕ್ಕೂ ಹೆಚ್ಚು ಅರ್ಜಿಗಳನ್ನು ಪಡೆದಿವೆ.

ಅದೇ ರೀತಿ, ನ್ಯೂಯಾರ್ಕ್ ಮೂಲದ, ಅನಿಯಮಿತ ಆರೋಗ್ಯ ಸೇವೆಗಳಿಗೆ ವಾರ್ಷಿಕ ಅತ್ಯಧಿಕ ಶುಲ್ಕ ವಿಧಿಸುವ ಕಂಪೆನಿಯೊಂದನ್ನು ಪ್ರಯಾಣಿಸಲು ಬಯಸುವ ಹಲವಾರು ರೋಗಿಗಳು ಸಂಪರ್ಕಿಸಿರುವುದು ವರದಿಯಾಗಿದೆ. ಜರ್ಮನ್ ಟ್ರಾವೆಲ್ ಏಜೆನ್ಸಿಗಳು ಕೂಡ, ಸ್ಥಳೀಯ ಜನಸಂಖ್ಯೆ ಸಮರ್ಪಕವಾಗಿ ಲಸಿಕೆ ಪಡೆದಿರುವ ಜಾಗಗಳಲ್ಲಿ ಲಸಿಕಾ ಪ್ರವಾಸೋದ್ಯಮದ ಜಾಹೀರಾತುಗಳನ್ನು ನೀಡುತ್ತಿದೆ.


ಜರ್ಮನಿ ಮತ್ತು ರಷ್ಯಾಗೆ ಪ್ರಯಾಣಿಸಲು, ನಾರ್ವೆಯ ಏಜೆನ್ಸಿಗಳು ಕೂಡ ಅಂತಹದ್ದೇ ಸೇವೆಗಳನ್ನು ನೀಡುತ್ತಿವೆ. ರಷ್ಯಾದಲ್ಲಿ ಸ್ಪುಟ್ನಿಕ್ ಕೊಡಿಸುವುದನ್ನು ಕೂಡ ಅದು ಒಳಗೊಂಡಿದೆ. ಮಾಲ್ಡೀವ್ಸ್ ಬೀಚ್‍ನಲ್ಲಿಯೇ ಲಸಿಕೆ ನೀಡುವ ಪ್ಯಾಕೇಜ್ ನೀಡಿದೆ. ಲಸಿಕಾ ಪ್ರವಾಸೋದ್ಯಮ ಬಹಳಷ್ಟು ಏಜೆನ್ಸಿಗಳಿಗೆ ಲಾಭದಾಯಕ ವ್ಯಾಪಾರವಾಗಿ ಪರಿಣಮಿಸಿದೆ.


ಇದನ್ನೂ ಓದಿ:Delta Plus Variant in India: ಮೂರು ರಾಜ್ಯಗಳಲ್ಲಿ ಭಯಾನಕ ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್ ಪತ್ತೆ

ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿರುವುದರಿಂದ, ಯುಕೆಯಂತಹ ದೇಶಗಳು ಟ್ರಾಫಿಕ್ ಲೈಟ್ ಆಧರಿತ ಅನಿವಾರ್ಯವಲ್ಲದ ಪ್ರಯಾಣಗಳಿಗೆ ಅವಕಾಶ ನೀಡುತ್ತಿವೆ. ರೆಡ್‍ಲಿಸ್ಟ್‌ನಲ್ಲಿರುವ ದೇಶಗಳಿಂದ ಬರುವ ಪ್ರಯಾಣಿಕರು, ಪ್ರಯಾಣಿಕರ ಮತ್ತು ಅವರ ಸುತ್ತಲಿನ ಜನರ ಸುರಕ್ಷತೆಗಾಗಿ, ಸರಕಾರ ಪರಿಚಯಿಸಿರುವ ‘ಕ್ವಾರಂಟೈನ್ ಪ್ಯಾಕೇಜನ್ನು’ ಖರೀದಿಸಬೇಕು. ಅಲ್ಲಿನ ಸರಕಾರ, 4600 ಕೋಣೆಗಳಿರುವ 16 ಹೊಟೇಲ್‍ಗಳನ್ನು ಕ್ವಾರೈಂಟನ್ ಪ್ಯಾಕೇಜ್ ಪ್ರಯಾಣಿಕರಿಗೆ ಮೀಸಲಿಟ್ಟಿದೆ. ಇನ್ನೂ ಕೆಲವು ದೇಶಗಳು ಇಂತದ್ದೇ ಪ್ಯಾಕೇಜನ್ನು ನೀಡುತ್ತಿವೆ.



Youtube Video

ಹಲವಾರು ಕ್ಲಿನಿಕಲ್ ಪ್ರಯೋಗಗಳ ಪ್ರಕಾರ, ಲಸಿಕೆಗಳು ರೋಗದ ವಿರುದ್ಧ ಅಧಿಕ ಮಟ್ಟದ ಪ್ರತಿರಕ್ಷೆಯನ್ನು ನೀಡುತ್ತವೆ. ಅನೇಕ ದೇಶಗಳು, ಲಸಿಕಾ ಪ್ರಮಾಣಪತ್ರವನ್ನು ನೀಡಿದ ಸ್ವೀಕರಿಸಿದ ನಂತರವೇ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಪ್ರವೇಶಿಸಲು ಅನುಮತಿ ನೀಡುತ್ತಿವೆ. ಲಸಿಕಾ ಪ್ರಮಾಣಪತ್ರವು ವಿದೇಶ ಪ್ರಯಾಣದಲ್ಲಿ ಪಾಸ್‍ಪೋರ್ಟ್‍ನಷ್ಟೇ ಮುಖ್ಯವಾಗಿದೆ. ಜೀವ ಉಳಿಸುವುದು ಎಷ್ಟು ಅಗತ್ಯವೋ, ಜೀವನೋಪಾಯವನ್ನು ಉಳಿಸುವುದು ಕೂಡ ಅಷ್ಟೇ ಅಗತ್ಯ. ನಾವು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಅಲ್ಲಿಯವರೆಗೆ ರೋಗದ ತಡೆಗಟ್ಟುವಿಕೆ ಮತ್ತು ಎಚ್ಚರಿಕೆಯ ಪ್ರಯಾಣ ನಮ್ಮ ಏಕೈಕ ಆಯ್ಕೆಯಾಗಿದೆ.

Published by: Latha CG
First published: June 22, 2021, 11:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories