HOME » NEWS » National-international » VACCINE DISTRIBUTION COVID 19 SURGE ON AGENDA AS PM MODI CHAIRS MEET WITH STATES TOMORROW DBDEL RMD

ನಾಳೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ; ಕೋವಿಡ್ ಪರಿಸ್ಥಿತಿ ಮತ್ತು ಲಸಿಕೆ ವಿತರಣೆ ಬಗ್ಗೆ ಚರ್ಚೆ

ಇತ್ತೀಚಿಗೆ ನಡೆದ ನೀತಿ ಆಯೋಗ್ ಸಭೆಯ ಬಳಿಕ ಮೂರನೇ ಹಂತದ ಕೊರೊನಾ ಲಸಿಕೆ ತಯಾರಿಕೆ ಪ್ರಕ್ರಿಯೆಗೆ ಪರವಾನಗಿ ನೀಡಲು ತುರ್ತು ಅಧಿಕಾರದ ಸ್ವರೂಪ ಮತ್ತು ಕೊರೊನಾ ಲಸಿಕೆಗಳ ಬಳಕೆಯ ವಿಧಾನಗಳನ್ನು ಕೇಂದ್ರ ಸರ್ಕಾರ ಅನ್ವೇಷಿಸುತ್ತಿದೆ ಎಂದು ಹೇಳಲಾಗಿತ್ತು.

news18-kannada
Updated:November 23, 2020, 1:09 PM IST
ನಾಳೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ; ಕೋವಿಡ್ ಪರಿಸ್ಥಿತಿ ಮತ್ತು ಲಸಿಕೆ ವಿತರಣೆ ಬಗ್ಗೆ ಚರ್ಚೆ
ನರೇಂದ್ರ ಮೋದಿ
  • Share this:
ನವದೆಹಲಿ (ನವೆಂಬರ್ 23): ವಿವಿಧ ರಾಜ್ಯಗಳಲ್ಲಿರುವ ಕೊರೊನಾ ಪರಿಸ್ಥಿತಿ, ಕೊರೊನಾ ಲಸಿಕೆಯ ತಯಾರಿಕೆ ಹಾಗೂ ವಿತರಣೆ ಬಗ್ಗೆ ಚರ್ಚಿಸಲು ಪ್ರಧಾನ ನರೇಂದ್ರ ಮೋದಿ ನಾಳೆ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು ಮೊದಲಿಗೆ ವಿವಿಧ ರಾಜ್ಯಗಳಲ್ಲಿರುವ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣದ ಬಗ್ಗೆ ಪರಮಾರ್ಶೆ ನಡೆಸಲಾಗುತ್ತದೆ.

ಬಳಿಕ‌ ಈಗ ದೇಶದಲ್ಲಿ ತಯಾರಾಗುತ್ತಿರುವ ಲಸಿಕೆ ತಾವ ಹಂತದಲ್ಲಿದೆ? ಯಾವಾಗ ಅದು ಜನರ ಉಪಯೋಗಕ್ಕೆ ಸಿಗಬಹುದು? ಎರಡನೇ ಅಥವಾ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಹೇಗೆ ನಡೆಯುತ್ತಿವೆ? ಲಸಿಕೆ ಲಭ್ಯವಾದ ಬಳಿಕ ಅದರ ವಿತರಣೆ ಹೇಗಿರಬೇಕೆಂದು ಸಮಾಲೋಚನೆ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಳೆ ಎರಡು ರೀತಿಯ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ‌. ಅವುಗಳನ್ನು ಮುಖ್ಯಮಂತ್ರಿಗಳ ಜೊತೆ ಹಾಗೂ ರಾಜ್ಯಗಳ ಪ್ರತಿನಿಧಿಯ ಜೊತೆ ಎಂದು ವರ್ಗೀಕರಿಸಲಾಗಿರುತ್ತದೆ. ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ರಾಜ್ಯಗಳ ವಿಷಯದಲ್ಲಿ ಮಾತ್ರ ಮುಖ್ಯಮಂತ್ರಿಗಳೊಂದಿಗೇ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇತ್ತೀಚಿಗೆ ನಡೆದ ನೀತಿ ಆಯೋಗ್ ಸಭೆಯ ಬಳಿಕ ಮೂರನೇ ಹಂತದ ಕೊರೊನಾ ಲಸಿಕೆ ತಯಾರಿಕೆ ಪ್ರಕ್ರಿಯೆಗೆ ಪರವಾನಗಿ ನೀಡಲು ತುರ್ತು ಅಧಿಕಾರದ ಸ್ವರೂಪ ಮತ್ತು ಕೊರೊನಾ ಲಸಿಕೆಗಳ ಬಳಕೆಯ ವಿಧಾನಗಳನ್ನು ಕೇಂದ್ರ ಸರ್ಕಾರ ಅನ್ವೇಷಿಸುತ್ತಿದೆ ಎಂದು ಹೇಳಲಾಗಿತ್ತು.

ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿನೋದ್ ಪಾಲ್, ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಭಾಗವಹಿಸಿದ ಸಭೆಯಲ್ಲಿ ಬೆಲೆ ಸೇರಿದಂತೆ ಲಸಿಕೆಗಳಿಗೆ ಮುಂಗಡ ಖರೀದಿ ಬದ್ಧತೆಯ ವಿಷಯವನ್ನೂ ಚರ್ಚಿಸಲಾಗಿತ್ತು.

ಪ್ರಧಾನ ಮಂತ್ರಿಗಳ ಕಾರ್ಯಾಲಯ ರಚಿಸಿರುವ ಲಸಿಕೆ ಕಾರ್ಯಪಡೆಯು ತುರ್ತು ಬಳಕೆಯ ದೃಢೀಕರಣಕ್ಕಾಗಿ ನಿಯಮಗಳನ್ನು ರೂಪಿಸಲಾಗುವುದು ಎಂದು ಹೇಳಿತ್ತು‌. ಆದರೆ ಲಸಿಕೆ ತಯಾರಿಕೆ ಬಗ್ಗೆ ರಚಿಸಲಾಗಿರುವ ನ್ಯಾಷನಲ್ ಎಕ್ಸ್‌ಪರ್ಟ್ ಗ್ರೂಪ್  COVID-19 (NEGVAC) ಮಾರುಕಟ್ಟೆಗೆ ಬರುವ ಮುನ್ನ ನಿಯಮಗಳನ್ನು ರೂಪಿಸಲು ಸಲಹೆ ನೀಡಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ನಾಳಿನ ಸಭೆಯು ಮಹತ್ವ ಪಡೆದುಕೊಂಡಿದೆ.
Published by: Rajesh Duggumane
First published: November 23, 2020, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories