ಅಸಡ್ಡೆ ಬೇಡ, ಒಗ್ಗಟ್ಟಾಗಿ ಹೋರಾಡೋಣ; ಲಸಿಕೆ ಸ್ಟೋರೇಜ್ ವ್ಯವಸ್ಥೆಗೆ ರಾಜ್ಯಗಳು ಮುಂದಾಗ ಬೇಕು ಪ್ರಧಾನಿ ಮೋದಿ

ದೇಶದ ಎಲ್ಲರಿಗೂ ಕೊರೊನಾ ಲಸಿಕೆ ಸಿಗಲಿದೆ. ಆದರೆ ಲಸಿಕೆ ಬೆಲೆ ಬಗ್ಗೆ ನಿರ್ಧಾರ ಮಾಡಿಲ್ಲ. ಲಸಿಕೆ ಸ್ಟೋರೇಜ್ ವ್ಯವಸ್ಥೆಯನ್ನು ರಾಜ್ಯಗಳು ಮಾಡಿಕೊಳ್ಳಬೇಕು

ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ

ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ

 • Share this:
  ನವದೆಹಲಿ (ನ.24): ಹಬ್ಬಗಳ ಸಾಲು ಮುಗಿಯುತ್ತಿದ್ದಂತೆ ದೇಶದ ಅನೇಕ ಭಾಗಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಕೋವಿಡ್​ ಎರಡು, ಮೂರನೇ ಅಲೆಗೆ ದೆಹಲಿ, ಹರಿಯಾಣ, ಪಂಜಾಬ್​, ಮಹಾರಾಷ್ಟ್ರ ಸೇರಿದಂತೆ ಏಂಟು ರಾಜ್ಯಗಳು ತತ್ತಿರಿಸಿವೆ. ಈ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದ ಸೋಂಕು ಒಮ್ಮೆಲ್ಲೆ ಹೆಚ್ಚಾದ ಹಿನ್ನಲೆ ಕೇಂದ್ರ ಸರ್ಕಾರ ಕೂಡ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಮಹಾರಾಷ್ಟ್ರ, ಕೇರಳ, ದೆಹಲಿ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ ಸಿಎಂ ಮತ್ತು ಮತ್ತು ಚತ್ತೀಸ್​ಗಢದ ಲೆಫ್ಟಿನೆಂಟ್​ ಗವರ್ನರ್​ ಜೊತೆ ವರ್ಚುಯಲ್​ ಸಭೆ ನಡೆಸುವ ಮೂಲಕ ಪರಿಸ್ಥಿತಿ ಅವಲೋಕಿಸಿದರು. ಇದೇ ವೇಳೆ ಕೋವಿಡ್​ ಲಸಿಕೆ ವಿತರಣೆ ಕುರಿತು ಚರ್ಚೆ ನಡೆಸಿದರು. ದೇಶಾದ್ಯಾಂತ ಕೊರೋನಾ ಸೋಂಕು 50 ಸಾವಿರದಷ್ಟು ಕಡಿಮೆಯಾಗಿದೆ. ದೆಹಲಿ ಸೇರಿದಂತೆ ಕೆಲವು ರಾಜ್ಯಗಳ ಪರಿಸ್ಥಿತಿ ಆತಂಕ ಮೂಡಿಸಿದೆ. ಈ ಎಂಟು ರಾಜ್ಯಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ವಿಶೇಷ ತಂಡ ರಚಿಸಿದೆ. ಸೋಂಕು ನಿಯಂತ್ರಣಕ್ಕೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದ್ದು, ಇದರಿಂದ ಪರಿಸ್ಥಿತಿ ಚೇತರಿಕೆ ಕಾಣಬಹುದು  ಎಂದು ತಿಳಿಸಿದರು.  ಲಸಿಕೆ ಯಾವಾಗ ಬರುತ್ತೆಂದು ನಿರ್ಧಾರವಾಗಿಲ್ಲ. ಯಾವಾಗ ಬೇಕಾದರೂ ಲಸಿಕೆ ಬರಬಹುದು. ದೇಶದಲ್ಲಿ ಸಾವಿನ ಪ್ರಮಾಣವು ಕಡಿಮೆಯಾಗಿದೆ. ಲಸಿಕೆ ವಿಚಾರದಲ್ಲಿ ಕೆಲವರಿಂದ ರಾಜಕಾರಣ ನಡೆಯುತ್ತಿದೆ. ಈ ರೀತಿ ರಾಜಕಾರಣ ಮಾಡುವುದನ್ನು ತಡೆಯಲು ಆಗಲ್ಲ. ಕೋವಿಡ್ ಲಸಿಕೆ ಬಗ್ಗೆ ವಿಜ್ಞಾನಿ ನಿರ್ಧರಿಸುತ್ತಾರೆ. ಭಾರತದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗಬಹುದು. ನಮ್ಮ ವಿಜ್ಞಾನಿಗಳು ಲಸಿಕೆ ಸಂಬಂಧ ಕೆಲಸ ಮಾಡುತ್ತಿದ್ದಾರೆ. ಲಸಿಕೆ ದರ, ಪ್ರಮಾಣದ ಬಗ್ಗೆಯೂ ನಿರ್ಧಾರವಾಗಿಲ್ಲ. ದೇಶದ ಎಲ್ಲರಿಗೂ ಕೊರೊನಾ ಲಸಿಕೆ ಸಿಗಲಿದೆ. ಆದರೆ ಲಸಿಕೆ ಬೆಲೆ ಬಗ್ಗೆ ನಿರ್ಧಾರ ಮಾಡಿಲ್ಲ. ವ್ಯಾಕ್ಸಿನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಹಲವು ದೇಶಗಳ ಜೊತೆ ಸಂಪರ್ಕದಲ್ಲಿದ್ದೇವೆ. ಲಸಿಕೆ ಸ್ಟೋರೇಜ್ ವ್ಯವಸ್ಥೆಯನ್ನು ರಾಜ್ಯಗಳು ಮಾಡಿಕೊಳ್ಳಬೇಕು ಎಂದು ತಿಳಿಸಿದರು.


  ದೇಶದಲ್ಲಿ ಕೊರೋನಾ ಸೋಂಕಿನಿಂದ ಜನರು ಚೇತರಿಸಿಕೊಂಡಿರುವುದನ್ನು ಗಮನಿಸಿದ ಕೆಲವರು ವೈರಸ್​ ದುರ್ಬಲವಾಗಿದೆ. ಸೋಂಕಿಗೆ ತುತ್ತಾದರೂ ಚೇತರಿಸಿಕೊಳ್ಳಬಹುದು ಎಂಬ ಅಸಡ್ಡೆ ಮನೋಭಾವನೆ ಹೊಂದಿದ್ದಾರೆ. ಆದರೆ,. ನಾವು ಜನರನ್ನು ಎಚ್ಚರದಿಂದ ಇರುವಂತೆ ನೋಡೊಕೊಳ್ಳಬೇಕು. ಅಲ್ಲದೇ ಸೋಂಕು ಹರಡುವುದನ್ನು ತಡೆಯುವ ಪ್ರಯತ್ನ ನಡೆಸಬೇಕು. ದೇಶದಲ್ಲಿ ಶೇ5ಕ್ಕಿಂತ ಕಡಿಮೆ ದರದಲ್ಲಿ ಕೊರೋನಾ ಪಾಸಿಟಿವ್​ ರೇಟ್​ ತರಬೇಕಿದೆ ಎಂದರು.
  Published by:Seema R
  First published: