UP Elections: SP ಮುಖಂಡ ಅಖಿಲೇಶ್ ಯಾದವ್ ಸ್ಪರ್ಧೆ ಎಲ್ಲಿಂದ? ಇಲ್ಲಿದೆ ಮಾಹಿತಿ

ಅಖಿಲೇಶ್ ಯಾದವ್ ಮೈನ್‌ಪುರಿ ಸದರ್, ಕನೌಜ್‌ನ ಛಿಬ್ರಮೌ, ಅಜಂಗಢದ ಗೋಪಾಲ್‌ಪುರ ಮತ್ತು ಸಂಭಾಲ್‌ನ ಗುನ್ನೌರ್ ಕ್ಷೇತ್ರಗಳಿಂದ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಖಿಲೇಶ್ ಯಾದವ್ ಮಾತ್ರ ಯಾವುದೇ ರೀತಿಯ ಸುಳಿವು ಬಿಟ್ಟುಕೊಟ್ಟಿಲ್ಲ. 

ಅಖಿಲೇಶ್ ಯಾದವ್

ಅಖಿಲೇಶ್ ಯಾದವ್

  • Share this:
ಲಕ್ನೋ, (ಜ. 20): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Samajwadi Party Chief Akhilesh Yadav) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Elections) ಸ್ಪರ್ಧೆ ಮಾಡಲಿದ್ದಾರೆ ಎಂಬ ಸುಳಿವು ಬಿಟ್ಟುಕೊಟ್ಟ ಬೆನ್ನಲ್ಲೇ ಹಲವು ರೀತಿಯ ಕುತೂಹಲ ಹುಟ್ಟುಕೊಂಡಿವೆ. ಕಳೆದ ಬಾರಿ ಸ್ಪರ್ಧೆ ಮಾಡದಿದ್ದ ಅಖಿಲೇಶ್ ಯಾದವ್ ಈ ಬಾರಿ ಏಕೆ ಸ್ಪರ್ಧಿಸುತ್ತಿದ್ದಾರೆ ಎಂಬ ಕುತೂಹಲದಿಂದ ಹಿಡಿದು ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬ ಕುತೂಹಲ ಹುಟ್ಟುಹಾಕಿದೆ. ಇಲ್ಲಿಯವರೆಗೆ ಕ್ಷೇತ್ರಗಳ ಹೆಸರುಗಳು ಕೇಳಬರತೊಡಗಿವೆ.

ಗುಟ್ಟು ಬಿಟ್ಟುಕೊಡದ ಅಖಿಲೇಶ್
ಅಖಿಲೇಶ್ ಯಾದವ್ ಮೈನ್‌ಪುರಿ ಸದರ್, ಕನೌಜ್‌ನ ಛಿಬ್ರಮೌ, ಅಜಂಗಢದ ಗೋಪಾಲ್‌ಪುರ ಮತ್ತು ಸಂಭಾಲ್‌ನ ಗುನ್ನೌರ್ ಕ್ಷೇತ್ರಗಳಿಂದ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಖಿಲೇಶ್ ಯಾದವ್ ಮಾತ್ರ ಯಾವುದೇ ರೀತಿಯ ಸುಳಿವು ಬಿಟ್ಟುಕೊಟ್ಟಿಲ್ಲ. ಸದ್ಯ ಅಜಂಗಢ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅಖಿಲೇಶ್ ಯಾದವ್ ಅವರು ಇದುವರೆಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. 2012ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದಾಗ ಅವರು ವಿಧಾನ ಪರಿಷತ್ತಿನಿಂದ ಶಾಸನಸಭೆಗೆ ಆಯ್ಕೆಯಾಗಿದ್ದರು.

ಯಾದವರ ಪ್ರಭಾವವಿರುವ ಪ್ರದೇಶದಲ್ಲಿ ಸ್ಪರ್ಧೆ?
ಪಶ್ಚಿಮ ಯುಪಿಯಲ್ಲಿರುವ ಸಂಭಾಲ್ ಜಿಲ್ಲೆಯ ಗುನ್ನೌರ್ ಯಾವಾಗಲೂ ಯಾದವ್ ಸಮುದಾಯದ ಪ್ರಬಲ ಹೊಂದಿರುವ ಪ್ರದೇಶವಾಗಿದೆ. ಸಮಾಜವಾದಿ ಪಕ್ಷ ಇಲ್ಲಿಯ ರಾಜಕೀಯದಲ್ಲಿ ಯಾವಾಗಲೂ ಪ್ರಾಬಲ್ಯ ಹೊಂದಿದೆ. ಅಖಿಲೇಶ್ ಯಾದವ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಎರಡು ಬಾರಿ ಇಲ್ಲಿಂದ ಶಾಸಕರಾಗಿದ್ದರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಜೀತ್‌ ಕುಮಾರ್‌ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈಗ ಇಲ್ಲಿಂದ ಅಖಿಲೇಶ್ ಯಾದವ್ ಸ್ಪರ್ಧೆ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನು ಓದಿ: ನಾಳೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲಿರುವ ಪ್ರಿಯಾಂಕಾ ಗಾಂಧಿ

ಗೋಪಾಲ್‌ಪುರ ಸುರಕ್ಷಿತ ಕ್ಷೇತ್ರ
ಅಜಂಗಢ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೋಪಾಲ್‌ಪುರ ವಿಧಾನಸಭಾ ಕ್ಷೇತ್ರ ಅಖಿಲೇಶ್ ಯಾದವ್ ಅವರಿಗೆ ಸುರಕ್ಷಿತ ಕ್ಷೇತ್ರ ಎಂದು ಕೂಡ ಹೇಳಲಾಗುತ್ತಿದೆ. ಏಕೆಂದರೆ ಪ್ರಸ್ತುತ ಸಮಾಜವಾದಿ ಪಕ್ಷ ಇಲ್ಲಿ ಭದ್ರವಾದ ಕೋಟೆಯನ್ನು ಹೊಂದಿದೆ. ಇದಲ್ಲದೆ, ಅಖಿಲೇಶ್ ಯಾದವ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾದ ಅಲೆ ಇದ್ದರೂ ಅಜಂಗಢದಿಂದ ಗೆದ್ದು ಬಂದಿದ್ದರು. ಹಾಗಾಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ಗೋಪಾಲ್‌ಪುರ ವಿಧಾನಸಭಾ ಕ್ಷೇತ್ರದಲ್ಲೇ ಸ್ಫರ್ಧೆ ಮಾಡಿ ಎಂಬ ಒತ್ತಡ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಉತ್ಪಲ್ ಓಲೈಕೆಗೆ ಬಿಜೆಪಿ ಕಸರತ್ತು; ಪರಿಸ್ಥಿತಿ ಲಾಭ ಪಡೆಯಲು ಮುಂದಾದ ಎಎಪಿ

ಅಪ್ಪನ ಕ್ಷೇತ್ರದಿಂದ ಸ್ಪರ್ಧೆ!
ಮೈನ್‌ಪುರಿ ಸದರ್‌ನಲ್ಲಿಯೂ ಸಮಾಜವಾದಿ ಪ್ರಾಬಲ್ಯ ಇದೆ. ಇಲ್ಲಿ ಸಮಾಜವಾದಿ ಪಕ್ಷದಿಂದ ರಾಜು ಯಾದವ್ ಎರಡು ಬಾರಿ ಗೆದ್ದಿದ್ದಾರೆ. ಇವರಿಗೂ ಹಿಂದೆ ಮಾಣಿಕ್ ಚಂದ್ ಯಾದವ್ 1996ರಲ್ಲಿ ಗೆದ್ದಿದ್ದರು. ಮೈನ್ ಪುರಿ ಮುಲಾಯಂ ಸಿಂಗ್ ಯಾದವ್ ಅವರು ಲೋಕಸಭೆಗೆ ಪ್ರತಿನಿಧಿಸುವ ಕ್ಷೇತ್ರವೂ ಹೌದು. ಹಾಗಾಗಿ ಅಖಿಲೇಶ್ ಯಾದವ್ ಅವರಿಗೆ ಮೈನ್‌ಪುರಿಯ ಸದರ್‌ ಕೂಡ ಒಳ್ಳೆಯ ಕ್ಷೇತ್ರದ ಎಂದು ಹೇಳಲಾಗುತ್ತಿದೆ.
ಕನ್ನೌಜ್ ಜಿಲ್ಲೆಯ ಐದು ಅಸೆಂಬ್ಲಿ ಕ್ಷೇತ್ರಗಳಲ್ಲಿ ಒಂದಾದ ಛಿಬ್ರಮೌದಲ್ಲಿ ಸ್ಪರ್ಧೆ ಮಾಡುವ ಪ್ರಸ್ತಾಪ ಕೂಡ ಕೇಳಿಬರುತ್ತಿದೆ.

ಸದ್ಯ ಇಲ್ಲಿ ಬಿಜೆಪಿಯ ಅರ್ಚನಾ ಪಾಂಡೆ ಶಾಸಕರಾಗಿದ್ದಾರೆ. ಆದಾಗ್ಯೂ ಇದು ಸಮಾಜವಾದಿ ಪಕ್ಷದ ಪ್ರಭಾವವನ್ನು ಹೊಂದಿರುವ ಕ್ಷೇತ್ರ ಎಂದೇ ಹೇಳಲಾಗುತ್ತಿದೆ. ಇದಕ್ಕೂ ಹಿಂದೆ 1996ರಲ್ಲಿ ಛೋಟೆ ಸಿಂಗ್ ಯಾದವ್, 2007 ಮತ್ತು 2012 ಅರವಿಂದ್ ಸಿಂಗ್ ಯಾದವ್ ಅವರು ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದು ಬಂದಿದ್ದರು. ಈಗ ಕ್ಷೇತ್ರವನ್ನು ಮತ್ತೆ ಸಮಾಜವಾದಿ ಪಕ್ಷ ಗೆಲ್ಲಬಹುದು ಎಂಬ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರು ಅಖಿಲೇಶ್ ಯಾದವ್ ಅವರ ಸ್ಫರ್ಧೆಗೆ ಒತ್ತು ನೀಡುತ್ತಿದ್ದಾರೆ. ಕನೌಜ್‌ನಿಂದ ಲೋಕಸಭಾ ಕ್ಷೇತ್ರದಿಂದ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವಿರೋಧವಾಗಿ ಆಯ್ಕೆಯಾಗಿದ್ದನ್ನೂ ಸ್ಮರಿಸಬಹುದು.
Published by:Seema R
First published: