Viral Video: ಉತ್ತರಪ್ರದೇಶದಲ್ಲಿ ನಿಲ್ಲದ ಗೋ ರಕ್ಷಕರ ಗೂಂಡಾ ವರ್ತನೆ; ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್!

ವಿಡಿಯೋದಲ್ಲಿ ಶಕೀರ್‌ ಎಂದು ಗುರುತಿಸಲಾಗಿರುವ ವ್ಯಕ್ತಿಯನ್ನು ಮನೋಜ್‌ ಠಾಕೂರ್‌ ಥಳಿಸುತ್ತಿದ್ದರೇ, ಇತರ ಕೆಲವು ಮಂದಿ ಕೃತ್ಯಕ್ಕೆ ಬೆಂಬಲ ನೀಡುತ್ತಿರುವ ದೃಶ್ಯಗಳನ್ನು ನೋಡಿ, ಘಟನೆಯ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಮುಸ್ಲಿಂ ಯುವಕನನ್ನು ಥಳಿಸುತ್ತಿರುವ ಗೋ ರಕ್ಷಕರು.

ಮುಸ್ಲಿಂ ಯುವಕನನ್ನು ಥಳಿಸುತ್ತಿರುವ ಗೋ ರಕ್ಷಕರು.

 • Share this:
  ಮೊರಾದಾಬಾದ್​ (ಮೇ 24); ಕೊರೋನಾ ಸೋಂಕಿಗೆ ಇಡೀ ದೇಶ ತಲ್ಲಣಿಸಿ ಹೋಗಿದೆ. ಸೋಂಕನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ರಾಜ್ಯದಲ್ಲೂ ಸಾಮಾನ್ಯವಾಗಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಪರಿಣಾಮ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಬೀದಿಗೆ ಬೀಳುವಂತಾಗಿದೆ. ಉತ್ತರಪ್ರದೇಶದ ಪರಿಸ್ಥಿತಿಯೂ ಇದಕ್ಕೆ ವ್ಯತಿರೀಕ್ತವಾಗಿಲ್ಲ. ಆದರೂ, ಸಿಎಂ ಯೋಗಿ ಆದಿತ್ಯನಾಥ್​ ರಾಜ್ಯದಲ್ಲಿ ಗೋ ರಕ್ಷಕರ ಗೂಂಡಾ ವರ್ತನೆ ಮಾತ್ರ ನಿಂತಿಲ್ಲ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಗೋ ರಕ್ಷಕರು ಮುಸ್ಲಿಂ ಯುವಕನ ಮೇಲೆ ಮನಸೋ ಇಚ್ಛೆ ದಾಳಿ ಮಾಡಿರುವ ಘಟನೆ ನಡೆದಿದೆ. ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ತಾಂಡವವಾಡುತ್ತಿರುವ ಈ ಹೊತ್ತಿನಲ್ಲೂ ಗೋರಕ್ಷಕರ ಅಮಾನವೀಯ ಹಲ್ಲೆಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗುತ್ತಿದ್ದು, ಈ ವಿಡಿಯೋ ಇದೀಗ ದೇಶದಾದ್ಯಂತ ವೈರಲ್ ಆಗುತ್ತಿದೆ.

  ಮೇ 23 (ಭಾನುವಾರ) ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಭಾರತೀಯ ಗೋ ರಕ್ಷಣಾ ವಾಹಿನಿ ಎಂಬ ಹಿಂದೂಪರ ಸಂಘಟನೆಗೆ ಸೇರಿದ ಮನೋಜ್‌ ಠಾಕೂರ್‌ ಎಂಬ ವ್ಯಕ್ತಿಯು ಶಕೀರ್‌ ಎಂಬ ಮುಸ್ಲೀಂ ಯುವಕನ ಮೇಲೆ ಹಾಡಹಗಲೇ ಹಲ್ಲೆ ನಡೆಸಿದ್ದಾನೆ. ಬಲವಾದ ಕೋಲಿನಿಂದ ಸತತವಾಗಿ ಶಕೀರ್‌ರನ್ನು ತೀವ್ರವಾಗಿ ಥಳಿಸಿದ್ದಾನೆ.  ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದೆ. ವಿಡಿಯೋದಲ್ಲಿ ಶಕೀರ್‌ ಎಂದು ಗುರುತಿಸಲಾಗಿರುವ ವ್ಯಕ್ತಿಯನ್ನು ಮನೋಜ್‌ ಠಾಕೂರ್‌ ಥಳಿಸುತ್ತಿದ್ದರೇ, ಇತರ ಕೆಲವು ಮಂದಿ ಕೃತ್ಯಕ್ಕೆ ಬೆಂಬಲ ನೀಡುತ್ತಿರುವ ದೃಶ್ಯಗಳನ್ನು ನೋಡಿ, ಘಟನೆಯ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

  ಇದನ್ನೂ ಓದಿ: Karnataka Covid Death: ರಾಜ್ಯದಲ್ಲಿ ಇಂದು 25,311 ಕೊರೋನಾ ಕೇಸ್ ಪತ್ತೆ, ಬರೋಬ್ಬರಿ 529 ಜನ ಸಾವು!

  ವೈರಲ್‌ ಆಗಿರುವ ವಿಡಿಯೋದಲ್ಲಿ ಮನೋಜ್‌ ಠಾಕೂರ್‌ ಎಂದು ಗುರುತಿಸಲಾದ ವ್ಯಕ್ತಿ ಶಕೀರ್‌ ಎಂಬ ವ್ಯಕ್ತಿಯನ್ನು ನಿನ್ನ ವಾಹನದಲ್ಲಿ ಏನಿದೆ..? ದಾಖಲೆ ಪತ್ರಗಳು, ಬಿಲ್‌ ಎಲ್ಲಿ.? ಎಂದು ಕೇಳುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಶಕೀರ್‌ ನನ್ನನ್ನು ಥಳಿಸುವ ಬದಲು ನೀವು ಯಾಕೆ ದಾಖಲೆಗಳನ್ನು ಪರಿಶೀಲಿಸಬಾರದು ಎಂದು ಕೇಳಿದ್ದಾನೆ.

  ವಿಡಿಯೊ ವೈರಲ್ ಆಗಿ ಘಟನೆ ಗಮನಕ್ಕೆ ಬಂದ ಬಳಿಕ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಗೋ ರಕ್ಷಕರಿಂದ ಥಳಿತಕ್ಕೆ ಸಂಬಂಧಿಸಿದಂತೆ ಇದುವರೆಗೆ ಎರಡು ಎಫ್‌ಐಆರ್‌ ಗಳು ದಾಖಲಾಗಿವೆ. ಒಂದು ಶಕೀರ್‌ರನ್ನು ಥಳಿಸಿದ ಸಂಬಂಧ ಮನೋಜ್‌ ಠಾಕೂರ್‌ ಮೇಲಾದರೆ ಇನ್ನೊಂದು ಮಾಸ್ಕ್‌ ಹಾಕಿಲ್ಲವೆಂಬ ಕಾರಣಕ್ಕೆ ಶಕೀರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಕತ್ಗಾರ್ ಠಾಣಾ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

  ಇದನ್ನೂ ಓದಿ: Sputnik-V: ದೆಹಲಿಯಲ್ಲೇ ಆರಂಭವಾಯ್ತು ಸ್ಪುಟ್ನಿಕ್ ಲಸಿಕೆ ಉತ್ಪಾದನೆ; ವರ್ಷಕ್ಕೆ 100 ಮಿಲಿಯನ್ ಡೋಸ್ ಉತ್ಪಾದನೆ ಗುರಿ

  ಮನೋಜ್‌ ಠಾಕೂರ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಇತರ ಐವರನ್ನು ಸಹ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಉಳಿದ ಐವರು ಆರೋಪಿಗಳೆಂದರೆ ಪ್ರದೀಪ್‌, ಬಾಬು, ಗುಲ್ಶನ್‌ ಅಲಿಯಾಸ್‌ ಗುಲ್ಲಿ, ಸುಮಿತ್‌, ವಿಜಯ್‌. ಇನ್ನು ಹೆಸರಿಸಲಾಗದ ನಾಲ್ಕರಿಂದ ಐವರನ್ನು ಎಫ್‌ಐಆರ್‌ ನಲ್ಲಿ ಸೇರಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್‌ 147(ದಂಗೆ), 148(ಮಾರಕಾಸ್ತ್ರಗಳ ಬಳಕೆ), 148(ಅಕ್ರಮ ಗುಂಪು), 389(ಸುಲಿಗೆ), 506(ಅಪರಾಧಿಕ ಕೃತ್ಯಕ್ಕೆ ಪ್ರಚೋದನೆ) ಗಂಭೀರ ಪ್ರಕರಣಗಳಡಿಯಲ್ಲಿ ಪ್ರಕರಣ ದಾಖಲಿಸಿರುವುದರಿಂದ ಘಟನೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು.

  ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಮತ್ತು ದೂರುದಾರ ಜುನೈದ್‌ ಹೇಳುವಂತೆ "ಮೊರಾದಾಬಾದ್‌ಗೆ ಬರುವ ದಾರಿಯಲ್ಲಿ ಅನೇಕರು ಗುಂಪಿನಲ್ಲಿ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ನೋಡಿದೆ. ಅಲ್ಲಿರುವವರನ್ನು ಈ ಸಂಬಂಧ ವಿಚಾರಿಸಿದಾಗ ವಿಷಯ ತಿಳಿಯಿತು. ಥಳಿತಕ್ಕೆ ಒಳಗಾದ ಶಕೀರ್‌ 50 ಕೆ.ಜಿ. ಯಷ್ಟು ಎಮ್ಮೆಯ ಮಾಂಸವನ್ನು ಕಾನೂನು ಬದ್ಧವಾಗಿ ಸಾಗಿಸುತ್ತಿದ್ದಾಗ ಕೆಲವು ವ್ಯಕ್ತಿಗಳು ಅವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ನಾನು ಅಲ್ಲಿಗೆ ಬಂದಾಗ ಶಕೀರ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆಸ್ಪತ್ರೆಗೆ ಕಳುಹಿಸಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದೇನೆ" ಎಂದಿದ್ದಾರೆ.
  Published by:MAshok Kumar
  First published: