Uttarakhand: ಉತ್ತರಾಖಂಡದಲ್ಲಿ ಭಾರೀ ಮಳೆಗೆ ಕುಸಿದ 3 ಮನೆಗಳು; ಇಬ್ಬರು ಸಾವು, ಹಲವರು ಕಣ್ಮರೆ

ಈ ಘಟನೆ ಭಾನುವಾರ ತಡರಾತ್ರಿ ಧಾರ್ಚುಲ ಜಿಲ್ಲೆಯ ಜುಮ್ಮಾ ಗ್ರಾಮದಲ್ಲಿ ನಡೆದಿದೆ. ಪಿತೋರ್​ಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್​ ಆಶಿಶ್ ಚೌಹಾಣ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉತ್ತರಾಖಂಡದಲ್ಲಿ ಭಾರೀ ಮಳೆ

ಉತ್ತರಾಖಂಡದಲ್ಲಿ ಭಾರೀ ಮಳೆ

 • Share this:
  ಉತ್ತರಾಖಂಡ(ಆ.30): ಉತ್ತರಾಖಂಡದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿದ್ದು, ಜನರು ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭೀತಿ ಅಲ್ಲಿಯ ಜನರನ್ನು ಆವರಿಸಿದೆ. ಭಾರೀ ಮಳೆಗೆ ಮೂರು ಮನೆಗಳು ಕುಸಿದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಕಣ್ಮರೆಯಾಗಿದ್ದಾರೆ. ಈ ಘಟನೆ ಭಾನುವಾರ ತಡರಾತ್ರಿ ಧಾರ್ಚುಲ ಜಿಲ್ಲೆಯ ಜುಮ್ಮಾ ಗ್ರಾಮದಲ್ಲಿ ನಡೆದಿದೆ. ಪಿತೋರ್​ಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್​ ಆಶಿಶ್ ಚೌಹಾಣ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿದ್ದು ಕಣ್ಮರೆಯಾಗಿದ್ದಾರೆ. ಇವರಿಗಾಗಿ ಇನ್ನೂ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದೆ. ಶೀಘ್ರವೇ ಒಂದು ಸಭೆಯನ್ನು ನಡೆಸಿ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ಚರ್ಚೆ ಮಾಡಲಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಸಭೆಯ ಬಳಿಕ ನೀಡಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

  ಇದನ್ನೂ ಓದಿ:SC-ST ಜನಾಂಗದವರ ಮೇಲಿನ ಬಾಕಿ ಇರುವ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಗೊಳಿಸಿ; ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

  ಇತ್ತೀಚೆಗೆ ಉತ್ತರಾಖಂಡದಲ್ಲಿ ಭೂಕುಸಿತ ಸಂಬವಿಸಿ ತಾನಕ್ಪುರ್ ಮತ್ತು ಚಂಪಾವತ್​ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ಅಲ್ಲಿ ಗುಡ್ಡ ಕುಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗುಡ್ಡ ಕುಸಿತದ ರಭಸಕ್ಕೆ ವಾಹನಗಳ ಜೊತೆಗೆ ಜನರು ಕೊಚ್ಚಿ ಹೋಗಿದ್ದರು. ರಸ್ತೆ ಬದಿಯಲ್ಲೇ ಇದ್ದ ಗುಡ್ಡ ಭಾಗಶಃ ಕುಸಿದಿತ್ತು. ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಜನರು ತಮ್ಮ ವಾಹನಗಳೊಂದಿಗೆ ಕೊಚ್ಚಿಕೊಂಡು ಹೋಗಿದ್ದರು.

  ಗುಡ್ಡ ಕುಸಿದಿರುವ ಪರಿಣಾಮ ತಾನಕ್ಪುರ-ಚಂಪಾವತ್ ನ್ಯಾಷನಲ್ ಹೈವೇ ಬಂದ್ ಆಗಿತ್ತು. ಉತ್ತರಾಖಂದ ಚಂಪಾವತ್​ ಬಳಿಕ ಸ್ವಾಲಾ ಬಳಿ ಈ ಗುಡ್ಡ ಕುಸಿತ ಸಂಭವಿಸಿತ್ತು. ವಿಡಿಯೋದಲ್ಲಿ ಗುಡ್ಡದ ಮೇಲಿಂದ ಕಲ್ಲು ಬಂಡೆಗಳು ಉರುಳುತ್ತಿರುವ ಹಾಗೂ ಟನ್​ಗಟ್ಟಲೇ ಮಣ್ಣು ಕುಸಿಯುತ್ತಿರುವ ದೃಶ್ಯ ಸೆರೆಯಾಗಿತ್ತು. ಜೊತೆಗೆ ಗುಡ್ಡದ ಮೇಲಿದ್ದ ಮರ ಗಿಡಗಳು ಸಹ ಮಣ್ಣಿನ ಜೊತೆ ಕುಸಿದಿದ್ದವು. ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿಯಲ್ಲಿ ನಿಂತಿದ್ದ ಕಾರುಗಳು ಹಾಗೂ ಇತರೆ ವಾಹನಗಳು ಮಣ್ಣಿನಡಿ ಸಿಲುಕಿದ್ದವು. ಗುಡ್ಡ ಕುಸಿಯುತ್ತಿದ್ದಂತೆ ಜನರು ಪ್ರಾಣಭಯದಿಂದ ಓಡಿ ಹೋಗಿದ್ದರು. ಇನ್ನೂ ಕೆಲವರು ಭೀಕರ ದೃಶ್ಯವನ್ನು ಮೊಬೈಲ್​ಗಳಲ್ಲಿ ಸೆರೆಹಿಡಿದಿದ್ದರು.

  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

  ಕೆಲವು ವಾರಗಳ ಹಿಂದೆ, ಹಿಮಾಚಲ ಪ್ರದೇಶದ ಕಿನ್ನೌರ್​​ನಲ್ಲಿ ಪ್ರಬಲ ಭೂಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ ಸುಮಾರು 28 ಜನರು ಮೃತಪಟ್ಟಿದ್ದರು. ಹಲವು ಮಂದಿ ಮಣ್ಣಿನಡಿ ಸಿಲುಕಿ ಕಣ್ಮರೆಯಾಗಿದ್ದರು. ಪ್ರಯಾಣಿಕರನ್ನು ತುಂಬಿದ್ದ ಬಸ್, ಅನೇಕ ವಾಹನಗಳು, ಟ್ರಕ್​​ಗಳ ಗುಡ್ಡ ಕುಸಿದಿತ್ತು. ರಕ್ಷಣಾ ಕಾರ್ಯಾಚರಣೆ ನಡೆಸಿ, ಸುಮಾರು 28 ದೇಹಗಳನ್ನು ಹೊರತೆಗೆದಿದ್ದರು, ಇನ್ನೂ ಹಲವು ಕಣ್ಮರೆಯಾಗಿದ್ದಾರೆ. ಎಚ್​ಆರ್​ಟಿಸಿ ಬಸ್​ ಗುರುವಾರ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗುಡ್ಡದ ಮೇಲಿಂದ ಬಿದ್ದ ಕಲ್ಲುಗಳ ರಭಸಕ್ಕೆ ಟ್ರಕ್​ ನದಿ ಬದಿಗೆ ಕೊಚ್ಚಿ ಹೋಗಿತ್ತು. ಟ್ರಕ್ ಚಾಲಕನ ಮೃತದೇಹವೂ ಪತ್ತೆಯಾಗಿತ್ತು. ಇನ್ನೂ 2 ಕಾರುಗಳು ಹಾನಿಯಾಗಿದ್ದವು. ಆದರೆ ಆ ಕಾರುಗಳಲ್ಲಿ ಯಾರೂ ಸಹ ಇರಲಿಲ್ಲ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Latha CG
  First published: