ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನಿಷೇಧ; ಉತ್ತರಾಖಂಡ ಹೈಕೋರ್ಟ್​ ತೀರ್ಪು ಪ್ರಕಟ

news18
Updated:August 21, 2018, 10:18 PM IST
ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನಿಷೇಧ; ಉತ್ತರಾಖಂಡ ಹೈಕೋರ್ಟ್​ ತೀರ್ಪು ಪ್ರಕಟ
news18
Updated: August 21, 2018, 10:18 PM IST
ನ್ಯೂಸ್​ 18 ಕನ್ನಡ

ನೈನಿಂತಾಲ್​ (ಆ. 21): ಪ್ರಮುಖ ಹಬ್ಬಗಳಂದು ಸಾರ್ವಜನಿಕವಾಗಿ ಕುರಿ, ಮೇಕೆ, ಹಸು ಮುಂತಾದ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಷೇಧಿಸಿ ಇಂದು ಉತ್ತರಾಖಂಡ ಹೈಕೋರ್ಟ್​ ತೀರ್ಪು ಪ್ರಕಟಿಸಿದೆ.

ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲರಿಗೂ ಈ ನಿರ್ಣಯ ಅನ್ವಯಿಸಲಿದೆ. ಹಬ್ಬಗಳ ಹೆಸರಿನಲ್ಲಿ ಯಾವುದೇ ಪ್ರಾಣಿಗಳನ್ನು ಸಾರ್ವಜನಿಕವಾಗಿ ಬಲಿಕೊಡುವಂತಿಲ್ಲ. ಮನೆಯೊಳಗೆ ಅಥವಾ ಮುಚ್ಚಿದ ಭಾಗಗಳಲ್ಲಿ ಮಾತ್ರ ಪ್ರಾಣಿಗಳನ್ನು ಕಡಿಯಲು ಅವಕಾಶವಿದೆ. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ನಾಳೆ ಬಕ್ರೀದ್​​​ ಹಬ್ಬವಾದ್ದರಿಂದ ಎಲ್ಲೆಡೆ ಕುರಿಗಳನ್ನು ಕಡಿಯಲಾಗುತ್ತದೆ. ಆದರೆ, ಉತ್ತರಾಖಂಡ ಹೈಕೋರ್ಟ್​ ಪ್ರಾಣಿ ಬಲಿಗೆ ನಿಷೇಧ ಹೇರಿದೆ. ಅದೇರೀತಿ, ಹಿಂದೂಗಳ ಹಬ್ಬ- ಉತ್ಸವಗಳಲ್ಲಿ ಬೀದಿಗಳಲ್ಲಿ ದೇವರಿಗೆ ಕೋಳಿ, ಕುರಿಗಳನ್ನು ಬಲಿ ಕೊಡುವುದನ್ನು ಕೂಡ ನಿರ್ಬಂಧಿಸಲು ಹೈಕೋರ್ಟ್​ ಆದೇಶ ನೀಡಿದೆ.

ಈದ್​ ಉಲ್​ ಜುಹಾ ಹಬ್ಬದಂದು ದೇಶದೆಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಕುರಿಗಳನ್ನು ಬಲಿ ಕೊಡುವ ಸಂಪ್ರದಾಯ ಇರುವುದರಿಂದ ನ್ಯಾಯಮೂರ್ತಿ ರಾಜೀವ್​ ಶರ್ಮ ಮತ್ತು ನ್ಯಾಯಮೂರ್ತಿ ಮನೋಜ್​ ತಿವಾರಿ ಅವರ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡಿ ರಕ್ತ ಹರಿಸುವುದು ಸಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
First published:August 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ