Uttarakhand Flood| ಉತ್ತರಾಖಂಡ ಮಹಾಮಳೆ; 45ಕ್ಕೂ ಹೆಚ್ಚು ಜನ ಸಾವು, ಅಮಿತ್ ಶಾ ಭೇಟಿ ಪರಿಸ್ಥಿತಿ ಅವಲೋಕನ

ಮಳೆಯಿಂದ ಉಂಟಾದ ಹಾನಿಯ ಮೌಲ್ಯಮಾಪನಕ್ಕಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಾಜ್ಯದಲ್ಲಿ ಮಂಗಳವಾರ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡಿ ದ್ದರು. ಅಲ್ಲದೆ, ಪ್ರವಾಹದಲ್ಲಿ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಉತ್ತಾರಾಖಂಡ ಪ್ರವಾಹ.

ಉತ್ತಾರಾಖಂಡ ಪ್ರವಾಹ.

 • Share this:
  ಉತ್ತರಾಖಂಡ್ (ಅಕ್ಟೋಬರ್​ 20); ಬೆಟ್ಟ ಗುಡ್ಡಗಳ ರಾಜ್ಯ ಉತ್ತರಾಖಂಡ್​ನಲ್ಲಿ (Uttarakhand Flood) ಕಳೆದ ಎರಡು ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಪ್ರವಾಹಕ್ಕೆ  (Flood) ಸಿಲುಕಿ ಕನಿಷ್ಟ 46 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆಮ 11 ಜನ ನಾಪತ್ತೆಯಾಗಿದ್ದು, 12ಕ್ಕೂ ಹೆಚ್ಚು ಜನ ತೀವ್ರ ಗಾಯಗಳಿಗೆ ಒಳಗಾಗಿದ್ದಾರೆ. ಪ್ರವಾಹದ ಪರಿಸ್ಥಿತಿಯಿಂ ದಾಗಿ ರಾಜ್ಯಾದ್ಯಂತ ಗೊಂದಲ ಮತ್ತು ಅನಾಹುತ ಸೃಷ್ಟಿಯಾಗಿದ್ದು, ಉತ್ತರಾಖಂಡದ ಪ್ರವಾಹ ಪೀಡಿತ ಪ್ರದೇಶಗಳಿಂದ 300 ಕ್ಕೂ ಹೆಚ್ಚು ಜನರನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ರಕ್ಷಿಸಿ ಬೇರೆಡೆಗೆ ಸ್ಥಳಾಂತರಿಸಿದೆ. ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಉತ್ತರಾಖಂಡಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮತ್ತು ಪರಿಶೀಲನಾ ಸಭೆಗಳನ್ನು ನಡೆಸಲಿದ್ದಾರೆ. ಅಲ್ಲದೆ, ಉತ್ತರಾಖಂಡ ದಲ್ಲಿ ಗುರುವಾರ ವೈಮಾನಿಕ ಸಮೀಕ್ಷೆಯನ್ನೂ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

  ಪ್ರವಾಹಕ್ಕೆ 46 ಸಾವು:

  "ಕುಮಾವಾನ್ ಪ್ರದೇಶದಲ್ಲಿ ಬಲಿಯಾದವರ ಸಂಖ್ಯೆ ಮಾತ್ರ 40 ದಾಟಿದೆ"ಎಂದು ಉತ್ತರಾಖಂಡ ಡಿಐಜಿ ನಿಲೇಶ್ ಆನಂದ್ ಭರ್ನೆ ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ. ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಪ್ರವಾಹದ ಬಗ್ಗೆ ಮಾಹಿತಿ ನೀಡಿದ್ದು, "ಕುಮಾವ್ ಪ್ರದೇಶದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ, ಆದರೆ ಜನರನ್ನು ಸ್ಥಳಾಂತರಿಸಲು ಇನ್ನೂ ಮಾರ್ಗಗಳು ತೆರೆಯಲಾಗಿಲ್ಲ.

  ಮಾರ್ಗಗಳು ತೆರೆಯಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಪೊಲೀಸ್, SDRF, NDRF ತಂಡಗಳು ಈಗಾಗಲೇ ಪರಿಹಾರ ಕಾರ್ಯಾಚರಣೆ ಕೆಲಸದಲ್ಲಿ ತೊಡಗಿವೆ. ಅಲ್ಲದೆ, ಪ್ರವಾಹದಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ಸುರಕ್ಷಿತ ತಾಣಗಳಿಗೆ  ಸ್ಥಳಾಂತರಿಸ ಲಾಗಿದೆ. ಇನ್ನೂ ಅನೇಕರನ್ನು ರಕ್ಷಿಸುವ ಹೊಣೆ ಪೊಲೀಸ್​ ಇಲಾಖೆಯ ಮೇಲಿದೆ" ಎಂದು ತಿಳಿಸಿದ್ದಾರೆ ಎಂಬುದಾಗಿ ANI ವರದಿ ಮಾಡಿದೆ.

  ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮೀಕ್ಷೆ:

  ಮಳೆಯಿಂದ ಉಂಟಾದ ಹಾನಿಯ ಮೌಲ್ಯಮಾಪನಕ್ಕಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಾಜ್ಯದಲ್ಲಿ ಮಂಗಳವಾರ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡಿ ದ್ದರು. ವೈಮಾನಿಕ ಸಮೀಕ್ಷೆ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅವರು ಪ್ರವಾಹದಲ್ಲಿ ಮೃತಪಟ್ಟವರಿಗೆ 4 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು.

  ಇದನ್ನೂ ಓದಿ: Uttarakhand Flood Photos: ರಣಭೀಕರ ಮಳೆಗೆ ತತ್ತರಿಸಿದ ಉತ್ತರಾಖಂಡ: ನೆರೆಯ ರೌದ್ರಾವತಾರ!

  ಅಲ್ಮೋರಾದಲ್ಲಿ ಭಾರೀ ಮಳೆ

  ಉತ್ತರಾಖಂಡ್​ನ ಅಲ್ಮೋರಾ ಭಾಗದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ನಿನ್ನೆ ರಾತ್ರಿಯಿಂದ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ ಎಂದು ANI ವರದಿ ಮಾಡಿದೆ. ಉತ್ತರಾಖಂಡದ ಪಿಐಬಿ ಪ್ರಕಾರ ನಿನ್ನೆ ರಾತ್ರಿ ಭೂಕುಸಿತದಿಂದ ಮನೆಯೊಂದು ನೆಲಕ್ಕುರು ಳಿದ್ದು ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

  ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಾಕ್ಷಿಯಾದ ನಂತರ, ವಾರದ ಉಳಿದ ದಿನಗಳಲ್ಲಿ ರಾಜ್ಯದಲ್ಲಿ ಬಿಸಿಲು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕ್ಟೋಬರ್ 22 ರಿಂದ ಪಶ್ಚಿಮ ಹಿಮಾಲಯದ ಪ್ರದೇಶಗಳ ಮೇಲೆ ಹವಾಮಾನ ಏರುಪೇರಾಗಲಿದೆ ಪರಿಣಾಮ ಜಮ್ಮು- ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್‌ನಲ್ಲಿ ವ್ಯಾಪಕ ವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

  ಇದನ್ನೂ ಓದಿ: Uttarakhand Flood Updates| ಭಾರೀ ಮಳೆ ಪ್ರವಾಹಕ್ಕೆ ಉತ್ತರಾಖಂಡ್ ತತ್ತರ; 23 ಜನರ ಸಾವು, 100ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ, ಹಲವರು ನಾಪತ್ತೆ!

  ಮತ್ತೆ ಆರಂಭವಾಯ್ತು ಚಾರ್ ಧಾಮ್ ತೀರ್ಥಯಾತ್ರೆ;

  ಏತನ್ಮಧ್ಯೆ, ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ ಇಂದಿನಿಂದ ಪುನರಾರಂಭಗೊಳ್ಳಲಿದೆ ಎಂದು ಉತ್ತರಾಖಂಡ್ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿ ನೀಡಿದರು. ಭಾರೀ ಮಳೆಯ ಕಾರಣಕ್ಕೆ ಅಕ್ಟೋಬರ್ 17 ರಿಂದ 19 ರವರೆಗೆ ಮೂರು ದಿನಗಳ ಕಾಲ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
  Published by:MAshok Kumar
  First published: