HOME » NEWS » National-international » UTTARAKHAND DHAULIGANGA HEAVY RAIN CAUSES MASSIVE FLOOD SNVS

Massive Flood - ಉತ್ತರಾಖಂಡ್​ನಲ್ಲಿ ಹಿಮಸ್ಫೋಟ; ಭಾರೀ ಪ್ರವಾಹ – 150ಕ್ಕೂ ಹೆಚ್ಚು ಮಂದಿ ನಾಪತ್ತೆ

ಉತ್ತರಾಖಂಡ್​ನ ನಂದಾದೇವಿ ಹಿಮಪರ್ವತದ ಒಂದು ಭಾಗ ಕುಸಿದುಹೋಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಚಮೋಲಿ ಜಿಲ್ಲೆಯ ರಿಣಿ ಎಂಬಲ್ಲಿ ಧೌಲಿಗಂಗಾ ನದಿ ಉಕ್ಕೇರಿದೆ. ಉತ್ತರಾಖಂಡ್​ನ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಇದೆ.

news18
Updated:February 7, 2021, 3:32 PM IST
Massive Flood - ಉತ್ತರಾಖಂಡ್​ನಲ್ಲಿ ಹಿಮಸ್ಫೋಟ; ಭಾರೀ ಪ್ರವಾಹ – 150ಕ್ಕೂ ಹೆಚ್ಚು ಮಂದಿ ನಾಪತ್ತೆ
ಉತ್ತರಾಖಂಡ್​ನ ಧೌಲಿಗಂಗಾ ನದಿ ಉಕ್ಕೇರಿರುವುದು
  • News18
  • Last Updated: February 7, 2021, 3:32 PM IST
  • Share this:
ಡೆಹರಾಡೂನ್(ಫೆ. 07): ಉತ್ತರಾಖಂಡ್​ನ ನಂದಾದೇವಿ ಪರ್ವತದ ಒಂದು ಭಾಗ ಕುಸಿದು ಭೀಕರ ಪ್ರವಾಹ ಸೃಷ್ಟಿಯಾಗಿದೆ. ಚಮೋಲಿ ಜಿಲ್ಲೆಯ ಜೋಷಿಮಠ್​ನಲ್ಲಿ ಭಾನುವಾರ ಈ ದುರಂತ ಉದ್ಭವಿಸಿದ್ದು ಧೌಲಿ ಗಂಗಾ ನದಿ ಉಕ್ಕೇರಿದೆ. ನದಿಪಾತ್ರದ ಉದ್ದಕ್ಕೂ ಜನಜೀವನ ಅಪಾಯಕ್ಕೆ ಸಿಲುಕಿದೆ. ಕಿನಿ ಗ್ರಾಮದ ಬಳಿ ನಡೆಯುತ್ತಿದ್ದ ರಿಷಿ ಗಂಗಾ ಪವರ್ ಪ್ರಾಜೆಕ್ಟ್​ಗೆ ಸಂಪೂರ್ಣ ಧಕ್ಕೆಯಾಗಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ 150ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಈವರೆಗೆ ಮೂವರು ಮೃತ ದೇಹಗಳು ಪತ್ತೆಯಾಗಿವೆ. ಇನ್ನೂ ಹೆಚ್ಚಿನ ಸಾವು ನೋವುಗಳ ಅಂಕಿ ಅಂಶ ವರದಿಯಾಗಬೇಕಿದೆ. ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ ಹಾಗೂ ಎನ್​ಡಿಆರ್​ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಚಮೋಲಿ ಜಿಲ್ಲೆಯ ಜೊತೆ ಪೌರಿ, ತೆಹ್ರಿ, ರುದ್ರಪ್ರಯಾಗ್, ಹರಿದ್ವಾರ್, ಡೆಹ್ರಾಡೂನ್ ಮೊದಲಾದ ಜಿಲ್ಲೆಗಳಿಗೂ ಪ್ರವಾಹ ಭೀತಿ ಎದುರಾಗಿದೆ. ರಿಷಿಕೇಶ್ ಬಳಿಕ ದೋಣಿವಿಹಾರವನ್ನ ನಿಲ್ಲಿಸಲಾಗಿದೆ. ಗಂಗಾ ನದಿ ಪಾತ್ರದ ಎಲ್ಲಾ ಪ್ರದೇಶಗಳಲ್ಲೂ ಹೈ ಅಲರ್ಟ್ ಗೋಷಿಸಲಾಗಿದೆ. ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಎಲ್ಲಾ ಕಾರ್ಯಕ್ರಮಗಳನ್ನ ಬದಿಗೊತ್ತಿ ಪ್ರವಾಹ ಪರಿಸ್ಥಿತಿ ವೀಕ್ಷಣೆಯಲ್ಲಿ ತೊಡಗಿದ್ಧಾರೆ.
ಅಲಕನಂದ ನದಿ ಪಾತ್ರದ ಪ್ರದೇಶಗಳಲ್ಲೂ ಹೈ ಅಲರ್ಟ್ ಇಡಲಾಗಿದೆ. ಆದರೆ, ನಿರೀಕ್ಷಿಸದಂತೆ ಅಲಕನಂದ ನದಿ ವ್ಯಾಪ್ತಿಯಲ್ಲಿರುವ ಯಾವ ಪ್ರದೇಶದಲ್ಲೂ ಸದ್ಯ ಪ್ರವಾಹ ಆಗಿಲ್ಲ. ನದಿ ಸಹಜ ಮಟ್ಟಕ್ಕಿಂತ ಒಂದು ಮೀಟರ್ ಎತ್ತರಕ್ಕೆ ನೀರು ಉಕ್ಕೇರಿ ಹರಿಯುತ್ತಿದೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರು ಈ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅವರು ಸತತವಾಗಿ ಪರಿಸ್ಥಿತಿ ಅವಲೋಕಿಸುವ ಕೆಲಸ ಮಾಡುತ್ತಿದ್ದಾರೆ.
Published by: Vijayasarthy SN
First published: February 7, 2021, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories