Uttarakhand: ಉತ್ತರಾಖಂಡ ಸಿಎಂ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್​​ ರಾವತ್​ ರಾಜೀನಾಮೆ

ವಿಧಾನಸಭಾ ಚುನಾವಣೆಗೆ ಇನ್ನೇನು ವರ್ಷ ಬಾಕಿ ಉಳಿದಿರುವ ಸಮಯದಲ್ಲಿನ ಈ ದಿಢೀರ್​ ರಾಜಕೀಯ ಬೆಳವಣಿಗೆಗಳು ನಡೆದಿವೆ.

ತ್ರಿವೇಂದ್ರ ಸಿಂಗ್​​ ರಾವತ್​

ತ್ರಿವೇಂದ್ರ ಸಿಂಗ್​​ ರಾವತ್​

 • Share this:
  ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನಲೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸಂಜೆ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು. ವಿಧಾನಸಭಾ ಚುನಾವಣೆಗೆ ಇನ್ನೇನು ವರ್ಷ ಬಾಕಿ ಉಳಿದಿರುವ ಸಮಯದಲ್ಲಿನ ಈ ದಿಢೀರ್​ ರಾಜಕೀಯ ಬೆಳವಣಿಗೆಗಳು ನಡೆದಿವೆ. ತ್ರಿವೇಂದ್ರ ಸಿಂಗ್​ ರಾವತ್​ ಕಾರ್ಯಶೈಲಿ ಬಗ್ಗೆ ಹಲವಾರು ಸಚಿವರು ಮತ್ತು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರದಲ್ಲಿನ ಈ ಬೆಳವಣಿಗೆ ಹಿನ್ನಲೆ ಬಿಜೆಪಿ ಹೈ ಕಮಾಂಡ್​ ಅವರನ್ನು ದೆಹಲಿಗೆ ಕರೆಸಿಕೊಂಡು ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಸಿತ್ತು. ಸೋಮವಾರ ದೆಹಲಿಯಲ್ಲಿ ಕೇಂದ್ರ ಬಿಜೆಪಿ ನಾಯಕರ ಭೇಟಿ ಬಳಿಕ ರಾವತ್​ ರಾಜೀನಾಮೆಯ ರಾಜಕೀಯ ಬದಲಾವಣೆ ವಿಷಯಗಳು ರಾಜ್ಯದಲ್ಲಿ ಗರಿಗೆದರಿದವು

  2017ರಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಿರೋಧ ನಾಯಕರಾಗಿ ರಾವತ್​ ಆಯ್ಕೆಯಾಗಿದ್ದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಗದ್ದುಗೆ ಏರಲು ಹವಣಿಸುತ್ತಿದೆ. ಈ ಹಿನ್ನಲೆ ರಾವತ್​ ವರ್ಚಸ್ಸು ಕಾರ್ಯನಿರ್ವಹಿಸುವ ಬಗ್ಗೆ ಬಿಜೆಪಿ ನಾಯಕರ ಅಪಸ್ವರ ಎತ್ತಿದ್ದರು. ಚುನಾವಣೆ ಹಿನ್ನಲೆ ಉತ್ತರಾಖಂಡಕ್ಕೆ ಅಬ್ಸರ್ವರ್​ ಆಗಿ ಬಂದಿದ್ದ ಈ ಬಗ್ಗೆ ಕೇಂದ್ರದ ಇಬ್ಬರು ನಾಯಕರು, ಬಿಜೆಪಿ ಉಪಾಧ್ಯಕ್ಷ ರಮಣ್​ ಸಿಂಗ್​ ಮತ್ತು ಪ್ರಧಾನ ಕಾರ್ಯದರ್ಶಿ ದುಶ್ಯಂತ್​ ಸಿಂಗ್​ ಗೌತಮ್​ ಈ ಕುರಿತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವರದಿ ಸಲ್ಲಿಸಿದ್ದರು.

  ಇದನ್ನು ಓದಿ: ಕೋವಿಡ್​ ಪ್ರಕರಣದಲ್ಲಿ ಏರಿಕೆ; ಮುಂಬೈನಲ್ಲಿ ಜಾರಿಯಾಗಲಿದೆಯಾ ಮತ್ತೊಂದು ಲಾಕ್​ಡೌನ್​?

  ಈ ವೇಳೆ ಕೆಲ ಸಚಿವರು ರಾವತ್​ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸದಿದ್ದರೆ, ರಾಜೀನಾಮೆ ನೀಡುವ ಬಗ್ಗೆ ಎಚ್ಚರಿಕೆ ನೀಡಿದ್ದರು.

  ಇದೇ ಮಾರ್ಚ್​ 18ರಂದು ಉತ್ತರಾಖಂಡ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳು ಆಗಲಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ಇಲ್ಲಿ ಚುನಾವಣೆ ಎದುರಾಗಲಿರುವ ಹಿನ್ನಲೆ ಬಿಜೆಪಿ ಈಗಾಗಲೇ ಸಿದ್ಧತೆ ನಡೆಸಿದೆ.
  Published by:Seema R
  First published: