• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Marriage: ಬಿಜೆಪಿ ನಾಯಕನ ಮಗಳ ಜೊತೆ ಮುಸ್ಲಿಂ ಯುವಕನ ವಿವಾಹ ಸಿದ್ಧತೆ, ಕಾರ್ಯಕರ್ತರ ಆಕ್ರೋಶದ ಬಳಿಕ ಮದುವೆ ರದ್ದು!

Marriage: ಬಿಜೆಪಿ ನಾಯಕನ ಮಗಳ ಜೊತೆ ಮುಸ್ಲಿಂ ಯುವಕನ ವಿವಾಹ ಸಿದ್ಧತೆ, ಕಾರ್ಯಕರ್ತರ ಆಕ್ರೋಶದ ಬಳಿಕ ಮದುವೆ ರದ್ದು!

ಬಿಜೆಪಿ ಮುಖಂಡನ ಮಗಳು ಮೋನಿಕಾ ಹಾಗೂ ಮುಸ್ಲಿಂ ಯುವಕ ಮೋನಿಸ್ ಅಹ್ಮದ್ ಎಂಬುವವರ ವಿವಾಹ ಮೇ 28ರಂದು ನಿಶ್ಚಯವಾಗಿತ್ತು.

ಬಿಜೆಪಿ ಮುಖಂಡನ ಮಗಳು ಮೋನಿಕಾ ಹಾಗೂ ಮುಸ್ಲಿಂ ಯುವಕ ಮೋನಿಸ್ ಅಹ್ಮದ್ ಎಂಬುವವರ ವಿವಾಹ ಮೇ 28ರಂದು ನಿಶ್ಚಯವಾಗಿತ್ತು.

ಬಿಜೆಪಿ ಮುಖಂಡನ ಮಗಳು ಮೋನಿಕಾ ಹಾಗೂ ಮುಸ್ಲಿಂ ಯುವಕ ಮೋನಿಸ್ ಅಹ್ಮದ್ ಎಂಬುವವರ ವಿವಾಹ ಮೇ 28ರಂದು ನಿಶ್ಚಯವಾಗಿತ್ತು.

  • Share this:

ಉತ್ತರಾಖಂಡ: ಸಾಮಾಜಿಕ ಜಾಲತಾಣದಲ್ಲಿ (Social Media) ಮುಸ್ಲಿಂ (Muslim) ಯುವಕನ ಜೊತೆಗೆ ಬಿಜೆಪಿ ಮುಖಂಡನ (BJP Leader) ಮಗಳ ವಿವಾಹ (Marriage) ನಿಶ್ಚಯವಾಗಿರುವ ಲಗ್ನಪತ್ರಿಕೆ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬಿಜೆಪಿ ಮುಖಂಡ ಹಾಗೂ ನಗರಸಭೆ ಅಧ್ಯಕ್ಷ ಯಶಪಾಲ್ ಬೇನಂ (Yashpal Benam) ಮಗಳ ಮದುವೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ. ಯಶಪಾಲ್ ಪುತ್ರಿ ಮೋನಿಕ ಹಾಗೂ ಉತ್ತರಾಖಂಡದ ಪೌರಿ ಗರ್ವಾಲ್​ನ ರೈಸ್ ಅಹ್ಮದ್ ಅವರ ಮಗ ಮೋನಿಸ್ ಅಹ್ಮದ್ ಎಂಬುವವರ ಜೊತೆಗೆ ಮೇ 28ರಂದು ವಿವಾಹ ನಡೆಯಬೇಕಿತ್ತು. ಆದರೆ ಮದುವೆಗೆ ಮುನ್ನವೇ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಲಗ್ನ ಪತ್ರಿಕೆ ವೈರಲ್ ಆದ ಬೆನ್ನಲ್ಲೇ ಈ ಮದುವೆಗೆ ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಯಶ್​ಪಾಲ್​ ಬೇನಾಂ ವಿವಾಹವನ್ನೇ ರದ್ದುಗೊಳಿಸಿದ್ದಾರೆ.


ಸಾರ್ವಜನಿಕ ಭಾವನೆಗೆ ಗೌರವಿಸಿ ವಿವಾಹ ರದ್ದು


ಈ ಬಗ್ಗೆ ಮಾತನಾಡಿರುವ ಯಶ್​ಪಾಲ್​ , ಸಾರ್ವಜನಿಕ ಪ್ರತಿನಿಧಿಯಾಗಿರುವ ನನಗೆ ನನ್ನ ಮಗಳ ಮದುವೆ ಪೊಲೀಸ್ ಮತ್ತು ಆಡಳಿತದ ರಕ್ಷಣೆಯಲ್ಲಿ ನಡೆಯುವುದು ಇಷ್ಟವಿರಲಿಲ್ಲ, ನಾನು ಸಾರ್ವಜನಿಕ ಭಾವನೆಗಳನ್ನು ಗೌರವಿಸಿ ಈ ವಿವಾಹವನ್ನು ರದ್ದುಗೊಳಿಸಿದ್ದೇವೆ. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆಗೆ ಒಪ್ಪಿಗೆ ನೀಡಲಾಗಿತ್ತು. ಆದರೆ ಕೆಲವು ವಿಷಯಗಳು ಮುನ್ನೆಲೆಗೆ ಬಂದ ನಂತರ ವಿವಾಹವನ್ನು ರದ್ದುಗೊಳಿಸಲಾಯಿತು ಎಂದು ಬೇನಂ ಹೇಳಿದ್ದಾರೆ.


ಇದನ್ನೂ ಓದಿ: Viral News: ಬಿಜೆಪಿ ಮುಖಂಡನ ಪುತ್ರಿಯ ಜೊತೆ ಮುಸ್ಲಿಂ ಯುವಕನ ಮದುವೆ! ವೈರಲ್ ಆಯ್ತು ಆಮಂತ್ರಣ ಪತ್ರಿಕೆ!


ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ವಿವಾಹಕ್ಕೆ ಅನುಮತಿ


" ನನ್ನ ಮಗಳು ಮುಸ್ಲಿಂ ಯುವಕನನ್ನು ಪ್ರೀತಿಸಿ ವಿವಾಹವಾಗಲು ಬಯಸಿದ್ದಳು. ಎರಡೂ ಕುಟುಂಬದವರು ಮಕ್ಕಳ ಸಂತೋಷ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಮದುವೆ ಮಾಡಲು ನಿರ್ಧರಿಸಿದ್ದವು, ಅದಕ್ಕಾಗಿ ಕಾರ್ಡ್‌ಗಳನ್ನು ಸಹ ಮುದ್ರಿಸಿ ಹಂಚಿದ್ದೆವು. ಆದರೆ ಆಹ್ವಾನ ಪತ್ರಿಕೆಯ ನಂತರ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದುವೆಗೆ ಆಕ್ಷೇಪ ವ್ಯಕ್ತಪಡಿಸಿ ಹಲವು ವಿಷಯಗಳು ಮುನ್ನೆಲೆಗೆ ಬಂದವು. ವಿವಾದ ಭುಗಿಲೆದ್ದ ನಂತರ, ಪರಸ್ಪರ ಒಪ್ಪಿಗೆಯೊಂದಿಗೆ, ಎರಡೂ ಕುಟುಂಬಗಳು ಸದ್ಯಕ್ಕೆ ಮದುವೆಯನ್ನು ಮುಂದುವರಿಸಲು ನಿರ್ಧರಿಸಿದ್ದೇವೆ " ಎಂದು ಬಿಜೆಪಿ ನಾಯಕ ಹೇಳಿದ್ದಾರೆ.




ವರ-ವಧು ಕುಟುಂಬಸ್ಥರು ಒಟ್ಟಾಗಿ ಕುಳಿತು ನಿರ್ಧಾರ


ವರ-ವಧು ಕುಟುಂಬಸ್ಥರು ಒಟ್ಟಾಗಿ ಕುಳಿತು ನಿರ್ಧಾರ  ಮದುವೆಗೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವಧು ಮತ್ತು ವರನ ಕುಟುಂಬಸ್ಥರು, ಹಿತೈಷಿಗಳು ಎಲ್ಲರು ಒಟ್ಟಾಗಿ  ಚರ್ಚಿಸಿ ಮದುವೆಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೇನಂ ತಿಳಿಸಿದ್ದಾರೆ.


ಇದನ್ನೂ ಓದಿ: Shocking News: ತಂದೆ ವಿರುದ್ಧವೇ ಠಾಣೆ ಮೆಟ್ಟಿಲೇರಿದ 9 ವರ್ಷದ ಬಾಲಕಿ! ಕಣ್ಣೀರಿಡುತ್ತಾ ಪೊಲೀಸರ ಮುಂದೆ ಹೇಳಿದ್ದೇನು?


ಟ್ರೋಲ್ ಆಗಿದ್ದ ಬಿಜೆಪಿ ನಾಯಕ

top videos


    ಯಾವಾಗಲೂ ಲವ್ ಜಿಹಾದ್ ಕುರಿತು ವಿರೋಧ ವ್ಯಕ್ತಪಡಿಸುವ ಬಿಜೆಪಿ ನಾಯಕರುಗಳ ಪೈಕಿ ಇದೀಗ ಬಿಜೆಪಿ ಮುಖಂಡನೇ ಮುಸ್ಲಿಂ ಯುವಕನೊಂದಿಗೆ ತಮ್ಮ ಮಗಳನ್ನು ಮದುವೆ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಘ ಪರಿವಾರದ ಕಾರ್ಯಕರ್ತರು ಮತ್ತು ಹಿಂದುತ್ವವಾದಿಗಳು ಮಾಜಿ ಶಾಸಕನ ಇಬ್ಬಗೆ ನೀತಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದು, ಕಾರ್ಯಕರ್ತರಿಗೆ ಲವ್ ಜಿಹಾದ್ ಬಗ್ಗೆ ಬೋಧಿಸುವ ನೀವು, ತಮ್ಮ ಫ್ಯಾಮಿಲಿ ವಿಚಾರದಲ್ಲಿ ಮಾಡ್ತಿರೋದೇನು ಎಂದು ಪ್ರಶ್ನಿಸಿದ್ದರು.

    First published: