• Home
  • »
  • News
  • »
  • national-international
  • »
  • Banshidhar Bhagat: ಸಾಧನೆ ಮಾಡಲು ಸರಸ್ವತಿಯನ್ನು ಪಟಾಯಿಸಿ, ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕನ ವಿಚಿತ್ರ ಸಲಹೆ!

Banshidhar Bhagat: ಸಾಧನೆ ಮಾಡಲು ಸರಸ್ವತಿಯನ್ನು ಪಟಾಯಿಸಿ, ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕನ ವಿಚಿತ್ರ ಸಲಹೆ!

ಬಿಜೆಪಿ ಶಾಸಕ ಬನ್ಶೀಧರ್ ಭಗತ್

ಬಿಜೆಪಿ ಶಾಸಕ ಬನ್ಶೀಧರ್ ಭಗತ್

Banshidhar Bhagat:ಬಿಜೆಪಿ ಶಾಸಕ ಬಂಶೀಧರ್ ಭಗತ್ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರವಾಗಿ ವಿಚಿತ್ರ ಸಲಹೆ ನೀಡಿದ್ದಾರೆ. ಹೌದು ನೀವು ಚೆನ್ನಾಗಿ ಓದಬೇಕಾದರೆ ಸರಸ್ವತಿಯನ್ನು ಪಟಾಯಿಸಿ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ, ಬಂಶೀಧರ್ ಭಗತ್ ಶಿವ ಮತ್ತು ವಿಷ್ಣುವನ್ನು ಅಸಹಾಯಕರು, ಬಡವರೆಂದು ಬಣ್ಣಿಸಿದ್ದಾರೆ. ಒಬ್ಬರು ಪರ್ವತದಲ್ಲಿದ್ದರೆ, ಮತ್ತೊಬ್ಬರು ಸಮುದ್ರದ ಆಳದಲ್ಲಿ ಅಡಗಿದ್ದಾರೆ ಎಂದು ಹೇಳಿದರು.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಡೆಹ್ರಾಡೂನ್(ಅ.12): ಉತ್ತರಾಖಂಡದಲ್ಲಿ (Uttarakhand), ಭಾರತೀಯ ಜನತಾ ಪಕ್ಷದ ಶಾಸಕ ಬಂಶೀಧರ್ ಭಗತ್ (Banshidhar Bhagat) ಅವರ ವಿವಾದಾತ್ಮಕ ಹೇಳಿಕೆ ಮುನ್ನೆಲೆಗೆ ಬಂದಿದ್ದು, ಅದರಲ್ಲಿ ಅವರು ದೇವ, ದೇವತೆಗಳ ಬಗ್ಗೆ ವಿಚಿತ್ರವಾದ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದು ಕಲಾಧುಂಗಿಯ ಬಿಜೆಪಿ ಶಾಸಕ ಬಂಶೀಧರ್ ಭಗತ್ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರವಾಗಿ ವಿಚಿತ್ರ ಸಲಹೆ ನೀಡಿದ್ದಾರೆ. ಅಲ್ಲದೇ ನೀವು ಚೆನ್ನಾಗಿ ಓದಬೇಕಾದರೆ ಸರಸ್ವತಿಯನ್ನು (Saraswati) ಬುಟ್ಟಿಗೆ ಹಾಕಿಕೊಳ್ಳಿ ಎಂದು ಹೇಳಿದರು. ಇಷ್ಟೇ ಅಲ್ಲ, ಬಂಶೀಧರ್ ಭಗತ್ ಅವರು ಶಿವ ಮತ್ತು ವಿಷ್ಣುವನ್ನು ಅಸಹಾಯಕರು, ಬಡವರೆಂದು ಬಣ್ಣಿಸಿದ್ದಾರೆ. ಒಬ್ಬರು ಪರ್ವತದಲ್ಲಿದ್ದರೆ, ಮತ್ತೊಬ್ಬರು ಸಮುದ್ರದ ಆಳದಲ್ಲಿ ಅಡಗಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ:  Tippu Express: ಅವರೆಲ್ಲ ಮೌನವಾಗಿರೋದು ಯಾಕೆ? ರೈಲಿನ ಹೆಸರು ಮರುನಾಮಕರಣಕ್ಕೆ ಟಿಪ್ಪು ವಂಶಸ್ಥರ ಪ್ರತಿಕ್ರಿಯೆ


ಹಲ್ದ್ವಾನಿಯಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಕ್ಯಾಬಿನೆಟ್ ಸಚಿವ ಬಂಶೀಧರ್ ಭಗತ್ ವಿದ್ಯಾರ್ಥಿಗಳನ್ನುದ್ದೇಶಿಸಿ, 'ದೇವರು ನಿಮ್ಮ ಪರವಾಗಿದ್ದಾನೆ. ಜ್ಞಾನ ಬೇಕಾದರೆ ಸರಸ್ವತಿಯನ್ನು, ಶಕ್ತಿ ಬೇಕಾದರೆ ದುರ್ಗೆಯನ್ನು ಪಟಾಯಿಸಿ, ಹಣ ಬೇಕಾದರೆ ಲಕ್ಷ್ಮಿಯನ್ನು ಬುಟ್ಟಿಗೆ ಹಾಕಿಕೊಳ್ಳಿ ಎಂದಿದ್ದಾರೆ.


ಶಿವ ಮತ್ತು ವಿಷ್ಣುವಿನ ಬಗ್ಗೆಯೂ ವಿವಾದಾತ್ಮಕ ಹೇಳಿಕೆ


ಅಲ್ಲದೇ ಶಿವ ಮತ್ತು ವಿಷ್ಣುವಿನ ಮೇಲೂ ತಮ್ಮ ನಾಲಿಗೆ ಹರಿಯ ಬಿಟ್ಟಿದ್ದಾರೆ. ಶಿವನೋ ಹಿಮಾಲಯದಲ್ಲಿ ತಣ್ಣಗೆ ಕುಳಿತಿದ್ದಾನೆ. ಆತನ ತಲೆಯ ಮೇಲೆ ಹಾವಿದೆ ಮತ್ತು ತಲೆಯಿಂದ ನೀರು ಹರಿದುಹೋಗುತ್ತಿದೆ. ಮತ್ತೆ ವಿಷ್ಣುವು ಸಮುದ್ರದ ಅಡಿಯಲ್ಲಿ ಅಡಗಿ ಕುಳಿತಿದ್ದಾನೆ. ಈ ಇಬ್ಬರು ಪರಸ್ಪರ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.


ಬಂಶೀಧರ್ ಭಗತ್ ಯಾರು?


ಕಲಾಧುಂಗಿಯ ಶಾಸಕ ತಮ್ಮ ಹೇಳಿಕೆಗಳಿಂದಾಗಿ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ ಎಂಬುವುದು ಉಲ್ಲೇಖನೀಯ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಬಂಶೀಧರ್ ಭಗತ್ ಅವರು ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸ್ಫೂರ್ತಿ ಪಡೆದು ರಾಜಕೀಯಕ್ಕೆ ಕಾಲಿಟ್ಟಿದ್ದರು. ಭಗತ್ 1975 ರಲ್ಲಿ ಜನಸಂಘ ಪಕ್ಷವನ್ನು ಸೇರಿದರು. ಅವರು ಮೊದಲು ಕಿಸಾನ್ ಸಂಘರ್ಷ ಸಮಿತಿಯ ನೇತೃತ್ವವನ್ನು ವಹಿಸಿಕೊಂಡರು.


ಇದನ್ನೂ ಓದಿ:   Karnataka Assembly Elections: ಯುವ ನಾಯಕನ ಜೊತೆ ಸ್ಪರ್ಧಿಸ್ತಾರಾ ಹಳೆ ನಾಯಕ? ಕುತೂಹಲದ ಕಣವಾದ ಶಿವಾಜಿನಗರ


ರಾಮಜನ್ಮಭೂಮಿ ಚಳವಳಿಯಲ್ಲೂ ಭಾಗಿ


ರಾಮಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ಅವರು ಸುಮಾರು 23 ದಿನಗಳ ಕಾಲ ಅಲ್ಮೋರಾ ಜೈಲಿನಲ್ಲಿ ಇದ್ದರು. 1989 ರಲ್ಲಿ ಭಗತ್ ಅವರಿಗೆ ನೈನಿತಾಲ್-ಉಧಮ್ ಸಿಂಗ್ ನಗರ ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಯಿತು. 1991 ರಲ್ಲಿ, ಅವರು ಮೊದಲ ಬಾರಿಗೆ ನೈನಿತಾಲ್‌ನಿಂದ ಶಾಸಕರಾಗಿ ಆಯ್ಕೆಯಾದರು ಮತ್ತು ಉತ್ತರ ಪ್ರದೇಶ ವಿಧಾನಸಭೆಯ ಹೊಸ್ತಿಲನ್ನು ದಾಟಿದರು. 1993ರಲ್ಲಿ ಎರಡನೇ ಬಾರಿಗೆ ಹಾಗೂ 1996ರಲ್ಲಿ ಮೂರನೇ ಬಾರಿಗೆ ನೈನಿತಾಲ್‌ನಿಂದ ಶಾಸಕರಾಗಿ ಆಯ್ಕೆಯಾದರು. ಅವರು ಅವಿಭಜಿತ ಯುಪಿಯಲ್ಲೂ ಸಚಿವರಾಗಿದ್ದರು.

Published by:Precilla Olivia Dias
First published: