ಉತ್ತರಾಖಂಡ್​ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿಯಿಂದ ನಾಲ್ವರ ಉಚ್ಛಾಟನೆ

ಉತ್ತರಾಖಂಡ್ ಘಟಕದ ಬಿಜೆಪಿಯಲ್ಲಿ ಇತ್ತೀಚೆಗೆ ಸಾಕಷ್ಟು ಬಂಡಾಯ ಹಾಗೂ ಉಚ್ಛಾಟನೆ ಕೆಲಸಗಳು ನಡೆಯುತ್ತಿವೆ. ಕಳೆದ ತಿಂಗಳಷ್ಟೇ 40 ಮಂದಿಯನ್ನು ಪಕ್ಷದಿಂದ ಹೊರಹಾಕಲಾಗಿತ್ತು.

news18
Updated:October 8, 2019, 6:25 PM IST
ಉತ್ತರಾಖಂಡ್​ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿಯಿಂದ ನಾಲ್ವರ ಉಚ್ಛಾಟನೆ
ಬಿಜೆಪಿ
  • News18
  • Last Updated: October 8, 2019, 6:25 PM IST
  • Share this:
ನವದೆಹಲಿ(ಅ. 08): ಕಳೆದ ತಿಂಗಳಷ್ಟೇ 40 ಮಂದಿಯನ್ನು ಪಕ್ಷದಿಂದ ಉಚ್ಛಾಟಿಸಿದ್ದ ಉತ್ತರಾಖಂಡ್ ಘಟಕದ ಬಿಜೆಪಿ ಇಂದು ಇನ್ನೂ ನಾಲ್ವರನ್ನು ಉಚ್ಛಾಟಿಸಿದೆ. ಉತ್ತರಾಖಂಡ್​ನ ಸ್ಥಳೀಯ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ನಾಲ್ವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ. ಮಾಯಾ ಪಂತ್, ಉಮಾ ದಬ್ರಾಲ್, ಗೋವಿಂದ್ ಸಿಂಗ್ ಜಿಮ್ವಲ್ ಮತ್ತು ಹರೀಶ್ ಭಂಡಾರಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಉತ್ತರಾಖಂಡ್ ಘಟಕದ ಬಿಜೆಪಿ ಅಧ್ಯಕ್ಷ ಅಜಯ್ ಭಟ್ ಅವರು ಅಧಿಕೃತ ಹೇಳಿಕೆಯಲ್ಲಿ ಈ ವಿಷಯ ಬಹಿರಂಗಪಡಿಸಿದ್ಧಾರೆ.

ಜಿಲ್ಲಾ ಮಟ್ಟದಿಂದ ಮಾಹಿತಿ ಪಡೆದು ಈ ನಾಲ್ವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ. ಈ ನಾಲ್ವರು ವ್ಯಕ್ತಿಗಳು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಅಧಿಕೃತ ಅಭ್ಯರ್ಥಿಗಳೆದುರು ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಸ್ತಿನ ಕ್ರಮವಾಗಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ.

ಇದನ್ನೂ ಓದಿ: ಅಲ್ಪ ಸಂಖ್ಯಾತರ ವಿರುದ್ಧದ ಸಾಮೂಹಿಕ ಹಲ್ಲೆಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು; ಮೋಹನ್ ಭಾಗವತ್​ ಒತ್ತಾಯ

ಉತ್ತರಾಖಂಡ್ ಬಿಜೆಪಿಯಲ್ಲಿ ಬಂಡಾಯ ಮತ್ತು ಉಚ್ಛಾಟನೆಯ ಬಿಸಿ ಸಾಕಷ್ಟು ಕಾಲದಿಂದಲೂ ಇದೆ. ಕಳೆದ ತಿಂಗಳು 40 ಮಂದಿಯನ್ನು ಹೊರಕಳುಹಿಸಲಾಗಿದ್ದರೆ, ಆಗಸ್ಟ್ ತಿಂಗಳಲ್ಲಿ ಮಾಜಿ ಸಚಿವ ಅನಿಲ್ ಶರ್ಮಾ ಹಾಗೂ ಜುಲೈ ತಿಂಗಳಲ್ಲಿ ಶಾಸಕ ಕುನ್ವರ್ ಪ್ರಣವ್ ಸಿಂಗ್ ಅವರನ್ನು ಉಚ್ಛಾಟಿಸಲಾಗಿತ್ತು ಅನಿಲ್ ಶರ್ಮಾ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಇದ್ದರೆ, ಕುನ್ವರ್ ಅವರು ಗನ್ ಹಿಡಿದು ಡ್ಯಾನ್ಸ್ ಮಾಡಿ ವಿವಾದಕ್ಕೆ ಕಾರಣವಾಗಿದ್ದರಿಂದ ಅವರಿಗೆ ಗೇಟ್ ಪಾಸ್ ನೀಡಲಾಗಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 8, 2019, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading