Raped Woman Dies During Abortion| ಗರ್ಭಪಾತದ ವೇಳೆ ಅತ್ಯಾಚಾರ ಸಂತ್ರಸ್ತೆ ಸಾವು, ವೈದ್ಯ ಸೇರಿ ನಾಲ್ವರ ಬಂಧನ!

ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶೈಲೇಂದ್ರ ಸಿಂಗ್ ವಿರುದ್ಧ ಬುಧವಾರ ಎಫ್ಐಆರ್ ದಾಖಲಿಸಲಾಗಿದೆ. ಗರ್ಭಪಾತಕ್ಕೆ ಒತ್ತಡ ಹಾಕಿದ್ದ ಆರೋಪಿಯ ತಂದೆ ರಾಮ್ ನಾರಾಯಣ್ ಮತ್ತು ಚಿಕ್ಕಪ್ಪ ಶಿವ ನಾರಾಯಣ್ ಎಂಬವರನ್ನೂ ಸಹ ಬಂಧಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಲಖನೌ (ಅಕ್ಟೋಬರ್​ 01); ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ (Rape Case) ಪ್ರಕರಣಗಳಿಗೆ ಸಂಬಂಧಿಸಿದಂತೆ ಆಗಿಂದಾಗ್ಗೆ ಸುದ್ದಿಯಲ್ಲಿರುವ ಉತ್ತರಪ್ರದೇಶ (Uttara Pradesh) ರಾಜ್ಯ ಇದೀಗ ಮತ್ತೊಮ್ಮೆ ಇದೇ ವಿಚಾರಕ್ಕೆ ಸುದ್ದಿಗೆ ಗ್ರಾಸವಾಗಿದೆ. ಉತ್ತರ ಪ್ರದೇಶದಲ್ಲಿ ಕಳೆದ ಆರು ತಿಂಗಳ ಹಿಂದೆ 20 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು. ಆದರೆ, ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೆ ಅತ್ಯಾಚಾರದ ಆರೋಪಿ, ಆತನ ತಂದೆ, ಚಿಕ್ಕಪ್ಪ ಮತ್ತು ಗರ್ಭಪಾತ ನಡೆಸುತ್ತಿದ್ದ ವೈದ್ಯರನ್ನೂ ಸೇರಿಸಿ ಎಲ್ಲಾ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

  ಅತ್ಯಾಚಾರ ಸಂತ್ರಸ್ತೆಗೆ ಉತ್ತರ ಪ್ರದೇಶದ ಹಮೀರ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ನಡೆಸಲಾಗುತ್ತಿತ್ತು. ಈ ವೇಳೆ ಸಂತ್ರಸ್ತೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ದಲಿತ ಯುವತಿ ಕಳೆದ ಆರು ತಿಂಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅತ್ಯಾಚಾರಕ್ಕೊಳಗಾಗಿದ್ದರು. ಆದರೆ, ಆಕೆ ದೂರು ನೀಡದ ಕಾರಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ರಕ್ತಸ್ರಾವದಿಂದಾಗಿ ನರಳುತ್ತಿದ್ದ ಸಂತ್ರಸ್ತೆಯನ್ನು ಸೆಪ್ಟಂಬರ್‌ 25 ರಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಆಕೆ ಗರ್ಭಿಣಿ ಎಂದು ಕುಟುಂಬ ಸದಸ್ಯರಿಗೆ ತಿಳಿದಿದೆ. ಮರುದಿನ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಇದನ್ನೂ ಓದಿ: Husband Thrashed Wife: ಸಂಬಳ ಕೊಡದಿದ್ದಕ್ಕೆ ಹೆಂಡತಿ ಮೇಲೆ ಅಟ್ಯಾಕ್! ಏನಿದು ಪಾಗಲ್ ಪತಿರಾಯನ ಪುಂಡಾಟ?

  ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶೈಲೇಂದ್ರ ಸಿಂಗ್ ವಿರುದ್ಧ ಬುಧವಾರ ಎಫ್ಐಆರ್ ದಾಖಲಿಸಲಾಗಿದೆ. ಗರ್ಭಪಾತಕ್ಕೆ ಒತ್ತಡ ಹಾಕಿದ್ದ ಆರೋಪಿಯ ತಂದೆ ರಾಮ್ ನಾರಾಯಣ್ ಮತ್ತು ಚಿಕ್ಕಪ್ಪ ಶಿವ ನಾರಾಯಣ್ ಎಂಬವರನ್ನೂ ಸಹ ಬಂಧಿಸಲಾಗಿದೆ. ಅಲ್ಲದೆ, ಗರ್ಭಪಾತ ನಡೆಸಿದ್ದರಿಂದ ಸಂತ್ರಸ್ತೆ ಸಾವನ್ನಪ್ಪಿದ್ದಾರೆ ಹೀಗಾಗಿ ಖಾಸಗಿ ಆಸ್ಪತ್ರೆ ವೈದ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
  Published by:MAshok Kumar
  First published: