UP Polls: ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ್​​ಗೆ ಅಮಿತ್​ ಶಾ ಸಾಥ್​​

ಗೋರಾಖ್​ಪುರದಿಂದ ಯೋಗಿ ಆದಿತ್ಯನಾಥ್​ ವಿರುದ್ಧ ಭೀಮ್​ ಆರ್ಮಿಯ ಚಂದ್ರಶೇಖರ್ ಆಜಾದ್​ ಕಣಕ್ಕೆ ಇಳಿಯಲಿದ್ದು, ಬಿಜೆಪಿಯ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷದಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬ ಕುತೂಹಲ ಇನ್ನು ಹಾಗೇ ಇದೆ.

ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ್​​

ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ್​​

  • Share this:
    ಲಕ್ನೋ (ಫೆ. 4):  ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( Yogi Adityanath)​ ಇಂದು ನಾಮಪತ್ರ (Nomination) ಸಲ್ಲಿಸಿದರು. ಗೋರಖ್​ ಪುರ (Gorakhpur) ನಗರ ಕ್ಷೇತ್ರದಿಂದ ಅವರು ಚುನಾವಣಾ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah), ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan)​, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್​ ಸಿಂಗ್​ ಸಾಥ್​ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಯೋಗಿ ಆದಿತ್ಯನಾಥ್​ ಗೋರಾಖ್​​ಪುರದ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ದೇಗುಲದಲ್ಲಿ ಪ್ರಧಾನ ಅರ್ಚಕರಾಗಿರುವ ಅವರು ಹವನ ನಡೆಸಿ ಗಮನಸೆಳೆದರು

    ಮೊದಲ ಬಾರಿ ವಿಧಾನಸಭಾ ಕಣಕ್ಕೆ
    ಪೂರ್ವ ಉತ್ತರ ಪ್ರದೇಶದ ಗೋರಖ್‌ಪುರ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾಗಿದ್ದು, ಇಲ್ಲಿಂದ ಐದು ಬಾರಿ ಸಂಸದರಾಗಿ ಗೆಲುವು ಪಡೆದಿದ್ದಾರೆ.
    ಗೋರಾಖ್​ಪುರದಿಂದ ಯೋಗಿ ಆದಿತ್ಯನಾಥ್​ ವಿರುದ್ಧ ಭೀಮ್​ ಆರ್ಮಿಯ ಚಂದ್ರಶೇಖರ್ ಆಜಾದ್​ ಕಣಕ್ಕೆ ಇಳಿಯಲಿದ್ದು, ಬಿಜೆಪಿಯ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷದಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬ ಕುತೂಹಲ ಇನ್ನು ಹಾಗೇ ಇದೆ.

    ಯೋಗಿ ಸರ್ಕಾರದ ಪರ ಅಮಿತ್​ ಶಾ ಮೆಚ್ಚುಗೆ
    ನಾಮಪತ್ರ ಸಲ್ಲಿಕೆಗೂ ಮುನ್ನ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯೋಗಿ ಸರ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶವನ್ನು ಮಾಫಿಯಾಗಳಿಂದ ಮುಕ್ತಗೊಳಿಸಿದ್ದಾರೆ 25 ವರ್ಷಗಳ ನಂತರ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಜಾರಿಗೆ ತಂದರು ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು.

    ಇದನ್ನು ಓದಿ: ಇನ್ನಷ್ಟು 'ನೀಟ್' ಆಗಿ ಓದ್ಕೊಳ್ಳಿ, ಮುಂದಕ್ಕೆ ಹೋಯ್ತು ಮಾರ್ಚ್ 12ರ ಪರೀಕ್ಷೆ

    ರಾಜ್ಯದ ಜನ ಬಿಜೆಪಿ ಜೊತೆ ಇದ್ದಾರೆ
    ಪಕ್ಷವು 2014, 2017 ಮತ್ತು 2019 ರ ಇತಿಹಾಸವನ್ನು ಪುನರಾವರ್ತಿಸಲಿದೆ. 2013 ರಲ್ಲಿ ನನ್ನನ್ನು ಯುಪಿ ಉಸ್ತುವಾರಿ ಮಾಡಲಾಯಿತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದಿತು, 2017 ರಲ್ಲಿ ನಾವು 300 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದ್ದೇವೆ. ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಉತ್ತಮ ಆಡಳಿತದ ಅಡಿಪಾಯವನ್ನು ಹಾಕಲಾಯಿತು. ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯ ಸಂಸದರಾಗಿದ್ದು, ಇಡೀ ರಾಜ್ಯ ಬಿಜೆಪಿ ಜೊತೆಗೆ ಇದೆ. ನಾವು ರಾಜ್ಯದ 300 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಇದೇ ವೇಳೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಈ ಹಿಂದೆ ಯೋಗಿ ಆದಿತ್ಯನಾಥ್​​  ರಾಮ ಜನ್ಮಭೂಮಿ ಅಯೋಧ್ಯೆಯಿಂದ ಅಥವಾ ಕೃಷ್ಣ ನಗರಿ ಮಥುರಾದಿಂದ ಅವರು ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಕಡೆಗೆ ಅವರು ತಮ್ಮ ಸಂಸದ ಕ್ಷೇತ್ರದ ವಿಧಾನಸಭಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡರು.

    ಇದನ್ನು ಓದಿ: 6 ಮಂದಿಯನ್ನು ಬಲಿ ಪಡೆದ ಕಟ್ಟಡ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

    ಇನ್ನು ಬಿಜೆಪಿ ಪ್ರಬಲ ಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮೈನ್‌ಪುರಿ ವಿಧಾನಸಭಾ ಕ್ಷೇತ್ರದ ಕರ್ಹಾಲ್‌ನಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ

    ಉತ್ತರ ಪ್ರದೇಶವು 403 ವಿಧಾನಸಭಾ ಕ್ಷೇತ್ರಕಕೆ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 10 ಮತ್ತು ಮಾರ್ಚ್ 7 ರವರೆ ವಿವಿಧ ಹಂತದಲಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಗೋರಖ್​ಪುರದಲ್ಲಿ ಆರನೇ ಹಂತ ಮತದಾನ ನಡೆಯಲಿದೆ. ಮಾರ್ಚ್ 3 ರಂದು ಕ್ಷೇತ್ರದಲ್ಲಿ ಮತದಾನ ಆಗಲಿದೆ.
    Published by:Seema R
    First published: