ಕಣ್ಮರೆಯಾಗಿದ್ದ 6 ವರ್ಷದ ಬಾಲಕಿ ಪಕ್ಕದ್ಮನೆ ಟ್ರಂಕ್​ನಲ್ಲಿ ಶವವಾಗಿ ಪತ್ತೆ

ಆರು ವರ್ಷದ ಬಾಲಕಿ ಗುರುವಾರ ಸಂಜೆಯಿಂದ ಕಣ್ಮರೆಯಾಗಿದ್ದಳು ಎಂದು ಪೋಷಕರು ಶುಕ್ರವಾರ ದೂರು ನೀಡಿದ್ದರು.

ಬಾಲಕಿ ಶವ ಅಡಗಿಸಿಟ್ಟ ಕೋಣೆ

ಬಾಲಕಿ ಶವ ಅಡಗಿಸಿಟ್ಟ ಕೋಣೆ

 • Share this:
  ಕಳೆದೆರಡು ದಿನಗಳ ಕಣ್ಮರೆಯಾಗಿದ್ದ ಆರು ವರ್ಷದ ಬಾಲಕಿ (6 year Girl) ಪಕ್ಕದ ಮನೆಯ ಟ್ರಂಕ್​ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಹಾಪುರ್​ (Uttara Pradesh Hampur) ಪಟ್ಟದಲ್ಲಿ ನಡೆದಿದೆ. ಇಂದು ನೆರೆ ಮನೆಯಿಂದ ಕೊಳೆತ ವಾಸನೆ ಬರುತ್ತಿದ್ದ ಹಿನ್ನಲೆ ಪರೀಕ್ಷೆ ನಡೆಸಿದಾಗ ಈ ವಿಷಯ ಬಯಲಿಗೆ ಬಂದಿದ್ದಾರೆ. ಆರು ವರ್ಷದ ಬಾಲಕಿ ಗುರುವಾರ ಸಂಜೆಯಿಂದ ಕಣ್ಮರೆಯಾಗಿದ್ದಳು ಎಂದು ಪೋಷಕರು ಶುಕ್ರವಾರ ದೂರು ನೀಡಿದ್ದರು. ಇನ್ನು ಬಾಲಕಿ ಶವವನ್ನು ಮರೋಣತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಾಪೂರ ಎಸ್ಪಿ ಸರ್ವೇಶ್​ ಕುಮಾರ್​ ಮಿಶ್ರಾ ತಿಳಿಸಿದ್ದಾರೆ.

  ಅಪ್ಪನ ಬಳಿ ಐದು ರೂ ಪಡೆದು ಹೋಗಿದ್ದ ಬಾಲಕಿ
  ಗುರುವಾರ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಸಂಜೆ 5 30ರ ಸಮಯದಲ್ಲಿ ಅಪ್ಪನ ಬಳಿ ತಿಂಡಿ ಕೊಳ್ಳಲು 5 ರೂ ಕೇಳಿದ್ದಳಂತೆ. ಅದರಂತೆ ಅಪ್ಪ 5 ರೂ ಕೊಟ್ಟಿ ಕಳುಹಿಸಿದ್ದಾರೆ. ಇದಾದ ಬಳಿಕ ಬಾಲಕಿ ಮನೆಗೆ ಮರಳಿಲ್ಲ. ರಾತ್ರಿ ಎಷ್ಟು ಹೊತ್ತಾದರೂ ಬಾಲಕಿ ಮನೆಗೆ ಹಿಂದಿರುಗದ ಹಿನ್ನಲೆ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಿದ್ದಾರೆ. ಆದರೆ, ಬಾಲಕಿ ಸುಳಿವು ಮಾತ್ರ ಸಿಕ್ಕಿಲ್ಲ. ಬಳಿಕ ಶುಕ್ರವಾರ ಬೆಳಗ್ಗೆಯೇ ಪೊಲೀಸರಿಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ.

  ದುರ್ವಾಸನೆ ಯಿಂದ ಸಿಕ್ಕಿತು ಸುಳಿವು
  ಬಾಲಕಿ ನಾಪತ್ತೆಯಾದ ಸಂಕಟದಲ್ಲಿ ಪೋಷಕರು ಇರುವಾಗಲೇ ಅವರ ನೆರೆ ಮನೆಯಿಂದ ಇಂದು ಕೆಟ್ಟ ದುರ್ವಾಸನೆ ಬರಲು ಆರಂಭಿಸಿದೆ. ಅಕ್ಕ ಪಕ್ಕದ ಮನೆಯವರೆಲ್ಲಾ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದರಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶವದ ಕೊಳೆತ ವಾಸನೆ ಹಿನ್ನಲೆ ಅನುಮಾನ ಗೊಂಡ ಬಾಲಕಿ ಪೋಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

  ಟ್ರಂಕ್​ನಲ್ಲಿ ಬಾಲಕಿ ದೇಹ ಅಡಗಿಸಿಟ್ಟಿದ್ದ ಮನೆ ಮಾಲೀಕ
  ಬಾಲಕಿ ವಾಸವಾಗಿದ್ದ ಮನೆ ಮಾಲೀಕನ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನಲೆ ಆಗಮಿಸಿದ ಪೊಲೀಸರು ಈ ವೇಳೆ ಮನೆಯೆಲ್ಲಾ ತಡಕಾಡಿದ್ದಾರೆ. ಆದರೆ, ಶವ ಎಲ್ಲಿರುವುದು ಎಂಬುದು ಪತ್ತೆಯಾಗಿಲ್ಲ. ಕಡೆಗೆ ಮನೆಯಲ್ಲಿದ್ದ ಕಬ್ಬಿಣ್ಣದ ಟ್ರಂಕ್​ನಿಂದ ವಾಸನೆ ಬರುತ್ತಿದ್ದು ತಿಳಿದಿದೆ. ಈ ವೇಳೆ ಟ್ರಂಕ್​ ತೆರೆದಾಗ ಬಾಲಕಿ ದೇಹ ಪತ್ತೆಯಾಗಿದೆ.

  ಇದನ್ನು ಓದಿ: ಟನ್​ ಈರುಳ್ಳಿ ಮಾರಾಟ ಮಾಡಿದ ರೈತನಿಗೆ ಸಿಕ್ಕಿದ್ದು 13 ರೂ; ರೈತರ ಕಣ್ಣೀರು ಕೇಳೋರಿಲ್ಲ

  ಮಾಲೀಕನ ಥಳಿಸಲು ಮುಗಿ ಬಿದ್ದ ಜನರ ಗುಂಪು
  ಇನ್ನು ಬಾಲಕಿ ದೇಹ ಟ್ರಂಕ್​ನಲ್ಲಿ ಇದ್ದುದ್ದು ತಿಳಿಯುತ್ತಿದ್ದಂತೆ ನೆರೆ ಮನೆಯ ಜನರು ಮಾಲೀಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪುಟ್ಟ ಬಾಲಕಿಯನ್ನು ಕೊಂದು ಟ್ರಂಕ್​ನಲ್ಲಿಟ್ಟಿದ್ದ ಮಾಲೀಕ ಪೋಷಕರು ಮಗಳಿಗಾಗಿ ಹುಡಕಾಡುವಾಗ ಸುಮ್ಮನೆ ಇದ್ದ. ಪುಟ್ಟ ಬಾಲಕಿಯನ್ನು ಈ ರೀತಿ ಅಮಾನವೀಯವಾಗಿ ಸಾಯಿಸಿದ ಈತನನ್ನು ಬಿಡಬಾರದು ಎಂದು ಜನರು ಮುಗಿಬಿದ್ದು ಥಳಿಸಲು ಮುಂದಾದರು. ಈ ವೇಳೆ ಪೊಲೀಸರು ಮಾಲೀಕನ ರಕ್ಷಣೆ ಮಾಡಿ ಬಂಧಿಸಿದ್ದಾರೆ.

  ಇದನ್ನು ಓದಿ: ವಿವಾದಾತ್ಮಕ ಹೇಳಿಕೆ: ಕ್ಷಮೆಯಾಚಿಸುವಂತೆ ಕಂಗನಾ ರಣಾವತ್ ಸುತ್ತುವರೆದ ರೈತರು

  ಅತ್ಯಾಚಾರದ ಶಂಕೆ
  ತಂದೆಯಿಂದ 5 ರೂ ಪಡೆದು ಹೋದ ಬಾಲಕಿ ನಾಪತ್ತೆಯಾಗಿದ್ದು, ಮಗಳು ಕಾಣಿಸದಿದ್ದಾಗ ಅಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಬಾಲಕಿಯನ್ನು ಮಾಲೀಕ ಬೈಕ್​ನಲ್ಲಿ ಕರೆದುಕೊಂಡು ಹೋಗಿ, ಬಳಿಕ ಮನೆಗೆ ಕರೆದು ಹೋಗಿರುವ ದೃಶ್ಯ ಸ್ಪಷ್ಟವಾಗಿದೆ. ಇನ್ನು ಬಾಲಕಿ ಮೇಲೆ ಈತ ಅತ್ಯಾಚಾರ ನಡೆಸಿ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸರು ಈ ಬಗ್ಗೆ ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟವಾಗಲಿದೆ ಎಂದಿದ್ದಾರೆ.
  Published by:Seema R
  First published: