ಉತ್ತರ ಪ್ರದೇಶದಲ್ಲಿನ ಹಸುವಿನ ಮೇಲಿನ ಸೆಸ್​ ಹೊರತಾಗಿ ಜಗತ್ತಿನಲ್ಲಿದೆ ವಿಚಿತ್ರ ತೆರಿಗೆ ಪದ್ಧತಿಗಳು...

ಹಸಗಳ ಮೇಲೆ ಶೇ.2ರಷ್ಟು ಸೆಸ್​ ವಿಧಿಸಿದ್ದು ಹಲವರಿಗೆ ಆಘಾತವನ್ನು ಉಂಟು ಮಾಡಿದ್ದು ಸುಳ್ಳಲ್ಲ. ಇದೇ ಮೊದಲ ಬಾರಿಗೆ ಈ ರೀತಿಯ ಸೆಸ್​ ವಿಧಿಸಿದ್ದು ಅನೇಕರಿಗೆ ಆಶ್ಚರ್ಯವನ್ನು ತಂದಿತು ಕೂಡ. ಈ ರೀತಿ ವಿಭಿನ್ನ ರೀತಿಯ ತೆರಿಗೆಯನ್ನು ಜಾರಿಗೆ ತಂದಿರುವ ಏಕೈಕ ದೇಶ ನಮ್ಮದಲ್ಲ. ಇದಕ್ಕಿಂತಲೂ ವಿಚಿತ್ರಕಾರಿ ಸೆಸ್​ ಜಾರಿಗೆ ತಂದಿರುವ ಅನೇಕ ದೇಶಗಳು ಜಗತ್ತಿನಲ್ಲಿದೆ.

Seema.R | news18
Updated:January 3, 2019, 4:20 PM IST
ಉತ್ತರ ಪ್ರದೇಶದಲ್ಲಿನ ಹಸುವಿನ ಮೇಲಿನ ಸೆಸ್​ ಹೊರತಾಗಿ ಜಗತ್ತಿನಲ್ಲಿದೆ ವಿಚಿತ್ರ ತೆರಿಗೆ ಪದ್ಧತಿಗಳು...
ಸಾಂದರ್ಭಿಕ ಚಿತ್ರ
  • News18
  • Last Updated: January 3, 2019, 4:20 PM IST
  • Share this:
ಶಾಂತನು ಡೇವಿಡ್​

ಹಸುಗಳ ರಕ್ಷಣೆಗಾಗಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಸರ್ಕಾರ ಹಸುವಿನ ಸೆಸ್​ ವಿಧಿಸಿದೆ. ಈ ಮೂಲಕ ಬಂದ ಹಣವನ್ನು ಬೀದಿಯಲ್ಲಿನ ಹಸುಗಳಿಗೆ ಆಶ್ರಯಕ್ಕೆ ಬಳಸಲು  ಸರ್ಕಾರ ಮುಂದಾಗಿದೆ.

ಹಸಗಳ ಮೇಲೆ ಶೇ.2ರಷ್ಟು ಸೆಸ್​ ವಿಧಿಸಿದ್ದು ಹಲವರಿಗೆ ಆಘಾತವನ್ನು ಉಂಟು ಮಾಡಿದ್ದು ಸುಳ್ಳಲ್ಲ. ಇದೇ ಮೊದಲ ಬಾರಿಗೆ ಈ ರೀತಿಯ ಸೆಸ್​ ವಿಧಿಸಿದ್ದು ಅನೇಕರಿಗೆ ಆಶ್ಚರ್ಯವನ್ನು ತಂದಿತು ಕೂಡ. ಈ ರೀತಿ ವಿಭಿನ್ನ ರೀತಿಯ ತೆರಿಗೆಯನ್ನು ಜಾರಿಗೆ ತಂದಿರುವ ಏಕೈಕ ದೇಶ ನಮ್ಮದಲ್ಲ. ಇದಕ್ಕಿಂತಲೂ ವಿಚಿತ್ರಕಾರಿ ಸೆಸ್​ ಜಾರಿಗೆ ತಂದಿರುವ ಅನೇಕ ದೇಶಗಳು ಜಗತ್ತಿನಲ್ಲಿದೆ.

ಹೆಸರಿಗೂ ಇದೆ ಕಾನೂನು

ಪ್ರಪಂಚದ ಸ್ವರ್ಗ ಧರೆಗಳಲ್ಲಿ ಸ್ವೀಡನ್​ ಕೂಡ ಒಂದು. ಅತ್ಯದ್ಭುತ ಪರಿಸರ, ಚಳಿಯ ಮುದ ಅನುಭವ ನೀಡುವ ಸ್ವೀಡನ್​ನಲ್ಲಿ ಮಕ್ಕಳಿಗೆ ಹೆಸರಿಡುವ ಮುನ್ನ ಪೋಷಕರು ನೂರು ಬಾರಿ ಯೋಚಿಸಬೇಕು. ಇಲ್ಲಿ ಪೋಷಕರು ತಮಗೆ ಇಚ್ಛೆ ಬಂದ ರೀತಿಯಲ್ಲಿ ಹೆಸರಿಟ್ಟರೆ ಅದು ಅಪರಾಧವಾಗಲಿದೆ. ಮಕ್ಕಳಿಗೆ ಹೆಸರಿಡಲು ಸಿವಿಲ್ ರಿಜಿಸ್ಟರ್​ನಿಂದ ಅನುಮತಿ ಪಡೆಯಬೇಕು. ಇಲ್ಲಿ ಮಗುವಿಗೆ ನೋವುಂಟಾಗುವ ಯಾವುದೇ ರೀತಿಯ ಹೆಸರುಗಳನ್ನು ಇಡಲು ಅವಕಾಶವಿರುವುದಿಲ್ಲ ಇದಕ್ಕಾಗಿ ಇಲ್ಲಿ ‘ಹೆಸರಿನ ಕಾನೂನು’ ರಚಿಸಲಾಗಿದೆ.

ತಿನಿಸುಗೆ ತೆರಬೇಕು ತೆರಿಗೆ

ನ್ಯೂಯರ್ಕ್​ನಲ್ಲಿ ಬ್ಯಾಗೆಲ್ಸ್​ ( ಬ್ರೆಡ್​ನಿಂದ ತಯಾರಿಸಿದ ದುಂಡಾಕಾರದ ತಿನಿಸು) ಮೇಲೆ ಈಗಾಗಲೇ ಸರ್ಕಾರ ಶೇ 8ರಷ್ಟು ತೆರಿಗೆ ವಿಧಿಸಿದೆ. ಬ್ಯಾಗೆಲ್​ ಸ್ಲೈಸ್​, ಟೋಸ್ಟ್​, ಕ್ರೀಮ್​, ಬೆಣ್ಣೆ ಲೇಪಿತ ಬ್ಯಾಗೆಲ್​ ನೀಡುವ ಕೊಳ್ಳುವ ಮುನ್ನ ತೆರಿಗೆ ತೆರಬೇಕಾದದ್ದು ಅನಿವಾರ್ಯ.ಬಿಸಿ ಗಾಳಿ ಬಲೂನ್​ ಹತ್ತುವ ಮುನ್ನ ಯೋಚಿಸಿ

ಗಾಳಿಯಲ್ಲಿ ಹಾರಾಡುವ ಬಿಸಿ ಗಾಳಿ ಬಲೂನ್​ನಲ್ಲಿ ಪಯಣಿಸುವ ಇಚ್ಛೆ ಯಾರಿಗಿರುವುದಿಲ್ಲ ಹೇಳಿ. ಅಮೆರಿಕದ ಕಾನ್ಸಸ್​ನಲ್ಲಿ ಈ ರೀತಿಯ ಬಿಸಿ ಗಾಳಿ ಬಲೂನ್​ನಲ್ಲಿ ಜಾಲಿ ರೈಡ್​ಗೆ ತೆರಿಗೆ ವಿಧಿಸಲಾಗಿದೆ. ಇನ್ನೊಂದು ವಿಶೇಷ ಎಂದರೆ ಇಲ್ಲಿ ಇದೆ ಬಿಸಿ ಗಾಳಿ ಬಲೂನ್​ನನ್ನು ನೆಲದ ಮೇಲೆ ಕಟ್ಟಿರುತ್ತಾರೆ.  ಅಮ್ಯೂಸ್​ ಮೆಂಟ್​ ಪಾರ್ಕ್​ಗಳಲ್ಲಿ ಕಾಣ ಸಿಗುವ ನೆಲದ ಮೇಲೆ ಕಟ್ಟಿರುವ ಈ ಬಿಸಿಗಾಳಿ ಬಲೂನ್​ಗೆ ಯಾವುದೇ ತೆರಿಗೆ ಇಲ್ಲ. ನೀರು ಹಾರಾಟ ಕೈಗೊಂಡರೆ ಮಾತ್ರ ಇದಕ್ಕೆ ತೆರಿಗೆ ಪಾವತಿಸಬೇಕು.

ಅವಿವಾಹಿತರೆ ಎಚ್ಚರ

ಅಮೆರಿಕದ ಮಿಸ್ಸೋರಿಯಲ್ಲಿ ನೀವು ಇನ್ನು ಅವಿವಾಹಿತರಾಗಿದ್ದರೆ ತೆರೆಗೆ ಕಟ್ಟುವುದು ಅನಿವಾರ್ಯ. ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಈ ದೇಶದಲ್ಲಿ ಹುಡುಗರು ನಿರ್ಧಿಷ್ಟ ವಯಸ್ಸಿನಲ್ಲಿ ಮದುವೆಯಾಗಿಲ್ಲ ಎಂದರೆ ಅವರಿಗೆ ಸರ್ಕಾರ ತೆರಿಗೆ ವಿಧಿಸುತ್ತದೆ. ಈ ಮೂಲಕ ಅವರು ಮದುವೆಯಾಗಿ ನೆಲೆಯೂರಲಿ ಎಂಬುದು ಸರ್ಕಾರದ ಕಾಳಜಿ.

ಇದನ್ನು ಓದಿ: ಮಿಸ್.​ ಆಫ್ರಿಕಾ ಕಿರೀಟ ಮುಡಿಗೆರಿಸಿಕೊಳ್ಳುವ ಮುನ್ನ ಆಕೆಯ ಕೂದಲಿಗೆ ಹೊತ್ತಿಕೊಂಡಿತು ಬೆಂಕಿ

ಕಿಟಿಕಿ ಇಲ್ವಾ ನಿಮ್ಮ ಮನೆಯಲ್ಲಿ

17ನೇ ಶತಮಾನದ ಸುಮಾರಿಗೆ ಇಂಗ್ಲೇಡ್​ನಲ್ಲಿ ಚಳಿಗಾಲದ ಸಮಯದಲ್ಲಿ ಭಯಂಕರ ಚಳಿಯಿಂದ ಬೆಚ್ಚಗಿರಲು ಮನೆಗೆ ಕಿಟಕಿಗಳನ್ನು ಇಡುತ್ತಿರಲಿಲ್ಲವಂತೆ. ಗಾಳಿಯಡದಂತೆ ಜನರಿರುತ್ತಿದ್ದ ಕ್ರಮಕ್ಕೆ ಬಿಸಿ ತಾಗಿಸಲು ಸರ್ಕಾರ ಕಿಟಕಿ ಇಲ್ಲದ ಮನೆಗೆ ತೆರಿಗೆ ಹಾಕಲು ಶುರು ಮಾಡಿದಂತೆ.

ಜೇಬಿಗೆ ಬಿಸಿಯಾಗುವ ಐಸ್​

ನೀವು ಏನಾದರೂ ತಪ್ಪು ಅಥವಾ ಹಾಟ್​ಡ್ರಿಂಕ್ಸ್​ ರುಚಿ ಹೆಚ್ಚಿಸಲು ಐಸ್​ (ಮಂಜುಗಡ್ಡೆ)ಯನ್ನು ಕೇಳುವ ಮುನ್ನ ಎಚ್ಚರ. ಕಾರಣ ಅಮೆರಿಕದ ಆರಿಜೋನದಲ್ಲಿ ಐಸ್​ ಕ್ಯೂಬ್​ಗೆ ನೀವು ಭಾರೀ ಬೆಲೆ ತೆರಬೇಕು

ಎಲ್ಲಿ ಯಾವ ರೀತಿ ವಿಚಿತ್ರ ತೆರಿಗೆ ಇದೆ ಎಂಬ ಚಿತ್ರಣ ಈ ಕೆಳಗಿನಂತೆ ಇದೆ.

 

First published: January 3, 2019, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading