ಮಿಷನ್​ 2019ಕ್ಕೆ ಯೋಗಿ ಆದಿತ್ಯನಾಥ್​ಗೆ 'ಶಕ್ತಿ' ತುಂಬಿದ RSS: ಕೆಲ ಸಚಿವರಿಗೆ ಶೀಘ್ರದಲ್ಲೇ ಗೇಟ್​ಪಾಸ್​!


Updated:June 27, 2018, 3:19 PM IST
ಮಿಷನ್​ 2019ಕ್ಕೆ ಯೋಗಿ ಆದಿತ್ಯನಾಥ್​ಗೆ 'ಶಕ್ತಿ' ತುಂಬಿದ RSS: ಕೆಲ ಸಚಿವರಿಗೆ ಶೀಘ್ರದಲ್ಲೇ ಗೇಟ್​ಪಾಸ್​!

Updated: June 27, 2018, 3:19 PM IST
ನ್ಯೂಸ್ 18 ಕನ್ನಡ

ಉತ್ತರ ಪ್ರದೇಶ(ಜೂ.27): ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್​ ಸರ್ಕಾರದ ಈ ಮೊದಲಿನ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಲಕ್ನೋದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಈ ನಡುವೆ ಮಂಗಳವಾರದಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೆಹಲಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ಸಭೆ ಹಾಗು ಸಂಘದ ಸಮನ್ವಯ ಸಭೆ ಬಳಿಕ ಉತ್ತರ ಪ್ರದೇಶದ ಕೆಲ ಸಚಿವರಿಗೆ ಗೇಟ್​ ಪಾಸ್​ ಸಿಗುವುದು ಖಚಿತವೆನ್ನಲಾಗಿದೆ. ಇಷ್ಟೇ ಅಲ್ಲದೆ ಉತ್ತರ ಪ್ರದೇಶದ ಮಿಷನ್​ 2019ರ ನೇತೃತ್ವ ವಹಿಸಲು RSS ಆದಿತ್ಯನಾಥ್​ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎನ್ನಲಾಗಿದೆ.

ಈ ಸಭೆಯಲ್ಲಿ ಸಂಘದ ಪರವಾಗಿ ಕೆಲ ಸಚಿವರ ಕಾರ್ಯ ವೈಖರಿ ಹಾಗೂ ನಡವಳಿಕೆ ಕುರಿತಾಗಿ ಸವಾಲೆತ್ತಿದ್ದಾರೆನ್ನಲಾಗಿದೆ. ಖುದ್ದು ಸಿಎಂ ಯೋಗಿ ಕೂಡಾ ಕೆಲ ಮಂತ್ರಿಗಳ ಕಾರ್ಯ ವೈಖರಿ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದೂ ತಿಳಿದು ಬಂದಿದೆ. ಇನ್ನು ಸಂಪುಟ ಪುರಚನೆಗೆ ಈಗಾಗಲೇ ಆರ್​ಎಸ್​ಎಸ್​ ತನ್ನ ಬೆಂಬಲ ನೀಡುವುದರೊಂದಿಗೆ, ಯೋಗಿ ಆದಿತ್ಯಮನಾಥ್​ರಿಗೂ ಸರ್ಕಾರದ ಕೆಲಸಗಳಲ್ಲಿ ವೇಗ ಕಂಡು ಬರಬೇಕೆಂದೂ ಸೂಚಿಸಿದ್ದಾರೆನ್ನಲಾಗಿದೆ.

ಇದರೊಂದಿಗೆ ಬಿಜೆಪಿ ವಿರುದ್ಧ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ, ಬಿಎಸ್​ಪಿ ಹಾಗೂ ಬೇರೆ ಪಕ್ಷಗಳ ಮೈತ್ರಿ ಸಾಧ್ಯತೆಗಳ ಕುರಿತಾಗಿಯೂ ಆಳವಾಗಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಅಲ್ಲದೇ ಸರ್ಕಾರ ಹಾಗೂ ಸಂಘದ ನಡುವಿನ ಸಮನ್ವಯ ಕುರಿತಾಗಿಯೂ ಮಾತುಕತೆ ನಡೆದಿದೆ. ಲಭ್ಯವಾದ ಮಾಹಿತಿ ಅನ್ವಯ ಮುಖ್ಯಮಂತ್ರಿ ಯೋಗಿಗೆ 2019ರ ಲೋಕಸಭಾ ಚುನಾವಣೆಯ ತಯಾರಿ ನಡೆಸುವುದರೊಂದಿಗೆ, ಇದಕ್ಕೆ ಸಂಬಮಧಿಸಿದಂತೆ ನಿರ್ಣಯ ಕೈಗೊಳ್ಳಲೂ ಆದೇಶಿಸಲಾಗಿದೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...