Sushma ChakreSushma Chakre
|
news18-kannada Updated:February 11, 2020, 12:26 PM IST
ಪ್ರಾತಿನಿಧಿಕ ಚಿತ್ರ
ಲಕ್ನೋ (ಫೆ. 11): ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಘಟನೆ ಆತಂಕ ಸೃಷ್ಟಿಸಿದೆ. ಇದೀಗ ಉತ್ತರ ಪ್ರದೇಶದ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿದ್ದು, 1 ತಿಂಗಳ ಕಾಲ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಸಂತ್ರಸ್ತೆ ತೆರೆದಿಟ್ಟಿದ್ದಾರೆ.
ಉತ್ತರ ಪ್ರದೇಶದ ಭದೋಹಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಮತ್ತು 6 ಜನರ ವಿರುದ್ಧ ಮಹಿಳೆಯೊಬ್ಬರು
ಅತ್ಯಾಚಾರದ ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯ ಗಂಡ 2007ರಲ್ಲಿ ಸಾವನ್ನಪ್ಪಿದ್ದರು. ಅದಾದ ನಂತರ 2014ರಲ್ಲಿ ಆಕೆ ಶಾಸಕ ರವೀಂದ್ರನಾಥ್ ತ್ರಿಪಾಠಿ ಅವರ ಅಣ್ಣನ ಮಗನನ್ನು ಭೇಟಿಯಾಗಿದ್ದರು.
ಈ ವೇಳೆ ತನ್ನ ಮೇಲೆ ಮೇಲೆ
ಬಿಜೆಪಿ ಶಾಸಕ ಮತ್ತು 6 ಜನ ಸೇರಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಹಲವು ವರ್ಷಗಳ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರಿಂದ ಸುಮ್ಮನಾಗಿದ್ದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಸಮಾಧಾನಕ್ಕೆ ಮಣಿದ ಯಡಿಯೂರಪ್ಪ; ಅರಣ್ಯ ಬದಲು ಕೃಷಿ ಖಾತೆ ದಕ್ಕಿಸಿಕೊಂಡ ಬಿ.ಸಿ. ಪಾಟೀಲ್
ಬಿಜೆಪಿ ಶಾಸಕ ತ್ರಿಪಾಠಿ ಅವರ ಅಣ್ಣನ ಮಗ 2017ರಲ್ಲಿ 1 ತಿಂಗಳ ಕಾಲ ಆಕೆಯನ್ನು ಭದೋಹಿಯ ಖಾಸಗಿ ಹೋಟೆಲ್ನ ರೂಮಿನಲ್ಲಿ ಇರಿಸಿದ್ದ. ಆಗ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿತ್ತು. ಆ 1 ತಿಂಗಳ ಕಾಲ ಪ್ರತಿದಿನವೂ ಶಾಸಕ ಮತ್ತು ಆತನ ಕುಟುಂಬದ 6 ಜನರು ಆಕೆಯ ಮೇಲೆ
ಅತ್ಯಾಚಾರ ನಡೆಸುತ್ತಿದ್ದರು ಎಂದು ದೂರು ನೀಡಿರುವುದಾಗಿ ಪೊಲೀಸ್ ಅಧಿಕಾರಿ ರಾಮ್ ಬದನ್ ಸಿಂಗ್ ಮಾಹಿತಿ ನೀಡಿದ್ದಾರೆ. ಈ ಪ್ರಕರಣವನ್ನು ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ಗೆ ಹಸ್ತಾಂತರಿಸಲಾಗಿದೆ.
First published:
February 11, 2020, 12:26 PM IST