Uttar Pradesh: ಫ್ಲೆಕ್ಸ್​ನಲ್ಲಿ ಸೋನಿಯಾ ಗಾಂಧಿ ಜೊತೆ ಕಾಣಿಸಿಕೊಂಡ ವರುಣ್ ಗಾಂಧಿ: ಸ್ಪಷ್ಟನೆ ಕೇಳಿದ ಕಾಂಗ್ರೆಸ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟರ್‌ನಲ್ಲಿ, "ಸುಸ್ವಾಗತಮ್! ದುಖ್ ಭಾರೇ ದಿನ್ ಬೀತೆ ರೆ ಭಯ್ಯಾ, ಅಬ್ ಸುಖ್ ಅಯೋ ರೇ ... ”(ಅತ್ಯಂತ ಪ್ರೀತಿಯ ಸ್ವಾಗತ! ದುಃಖದ ದಿನಗಳು ಕಳೆದಿವೆ ಸಹೋದರ, ಸಂತೋಷದ ದಿನಗಳು ಇಲ್ಲಿವೆ ...) ಎಂದು ಹಿಂದಿಯಲ್ಲಿ ಬರೆಯಲಾಗಿದೆ.

ವೈರಲ್​ ಆಗಿರುವ ಫೋಟೋ

ವೈರಲ್​ ಆಗಿರುವ ಫೋಟೋ

 • Share this:
  ಉತ್ತರ ಪ್ರದೇಶದ ಪ್ರಯಾಗರಾಜ್‌ನ (Uttar Pradesh, Prayagraj) ಸ್ಥಳೀಯ ಕಾಂಗ್ರೆಸ್ ನಾಯಕ ಇರ್ಷಾದ್ ಉಲ್ಲಾ (Irshad Ullah), ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi )ಮತ್ತು ಬಿಜೆಪಿ ಸಂಸದ ವರುಣ್ ಗಾಂಧಿ(BJP MP Varun Gandhi) ಯವರ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಹಂಚಿಕೊಂಡಿರುವ ಕಾರಣಕ್ಕೆ ನೋಟಿಸ್ ನೀಡಲಾಗಿದೆ.

  ಪಿಲಿಭಿತ್ (Pilibhit) ನಿಂದ ಲೋಕಸಭಾ ಸಂಸದರನ್ನು ಸ್ವಾಗತಿಸುವ ಪೋಸ್ಟರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೋಸ್ಟರ್‌ನಲ್ಲಿ ಪ್ರಯಾಗರಾಜ್ ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಇರ್ಷಾದ್ ಉಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಅಭಯ್ ಅವಸ್ಥಿ ಅವರ ಛಾಯಾಚಿತ್ರಗಳಿವೆ.

  ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ 8 ಜನ ರೈತರು ಸಾವನ್ನಪ್ಪಿದ ಸಂದರ್ಭದಲ್ಲಿ ಕರಾಳ ಕೃಷಿ ಕಾನೂನು ಹಿಂಪಡೆಯಲು ಮತ್ತು ನ್ಯಾಯಕ್ಕಾಗಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ (farmers’ protests) ವರುಣ್ ಗಾಂಧಿ ನಿರಂತರ ಬೆಂಬಲ ನೀಡಿದ್ದರು. ಪ್ರತಿಭಟನೆಗೆ ಬೆಂಬಲ ನೀಡಿದ್ದ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಹೊರಹಾಕಲಾಗಿತ್ತು. ಮುಂದಿನ ದಿನಗಳಲ್ಲಿ ಅವರು ಕಾಂಗ್ರೆಸ್ ಸೇರಬಹುದು ಎಂದು ಹಲವು ವರದಿಗಳು ಹೇಳಿವೆ.

  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟರ್‌ನಲ್ಲಿ, "ಸುಸ್ವಾಗತಮ್! ದುಖ್ ಭಾರೇ ದಿನ್ ಬೀತೆ ರೆ ಭಯ್ಯಾ, ಅಬ್ ಸುಖ್ ಅಯೋ ರೇ ... ”(ಅತ್ಯಂತ ಪ್ರೀತಿಯ ಸ್ವಾಗತ! ದುಃಖದ ದಿನಗಳು ಕಳೆದಿವೆ ಸಹೋದರ, ಸಂತೋಷದ ದಿನಗಳು ಇಲ್ಲಿವೆ ...) ಎಂದು ಹಿಂದಿಯಲ್ಲಿ ಬರೆಯಲಾಗಿದೆ.


  ಪ್ರಯಾಗರಾಜ್ ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ (ಆಡಳಿತ) ಪ್ರದೀಪ್ ನಾರಾಯಣ್ ದ್ವಿವೇದಿ Pradeep Narayan Dwivedi  ಮಂಗಳವಾರ ಇರ್ಷಾದ್ ಉಲ್ಲಾಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.

  ನೋಟಿಸ್‌ನಲ್ಲಿ, ದ್ವಿವೇದಿ ಇರ್ಷಾದ್ ಅವರ ಕಾರ್ಯಗಳು ಪಕ್ಷದ ಕ್ಲೀನ್ ಇಮೇಜ್‌ಗೆ ಧಕ್ಕೆ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಅವರು 24 ಗಂಟೆಗಳ ಒಳಗೆ ಇರ್ಷಾದ್ ಅವರಿಂದ ಉತ್ತರವನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲು ಮತ್ತು ವೈರಲ್ ಮಾಡಿರುವ ಹಿಂದಿರುವ ಉದ್ದೇಶವೇನು, ಹಾಗೂ ಇರ್ಷಾದ್ ಅವರ ಉತ್ತರಕ್ಕೆ ಪಕ್ಷವು ಅತೃಪ್ತವಾದರೆ ಸಂಭವನೀಯ ಕ್ರಮದ ಬೆದರಿಕೆಯನ್ನೂ ಹಾಕಲಾಗಿದೆ ಎಂದು ವರದಿಯಾಗಿದೆ.


   ಪ್ರಯಾಗರಾಜ್  ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಫೀಸ್ ಅನ್ವರ್ ಕೂಡ ಪೋಸ್ಟರ್ ಕುರಿತು ಮಾತನಾಡಿದ್ದು, "ವರುಣ್ ಗಾಂಧಿ ಇನ್ನೂ ಬಿಜೆಪಿ ಸಂಸದರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮಾನಹಾನಿ ಮಾಡಲು ಈ ರೀತಿ ಸಂಚು ರೂಪಿಸಲಾಗಿದೆ.


  Also read: Foreign wildlife: ಬೆಂಗಳೂರಿನಲ್ಲಿ ವಿದೇಶಿ ವನ್ಯಜೀವಿಗಳ ಮಾರಾಟ: ಅಸಹಾಯಕರಾದ ಅರಣ್ಯ ಇಲಾಖೆ

  "24 ಗಂಟೆಗಳಲ್ಲಿ ತೃಪ್ತಿದಾಯಕ ಉತ್ತರವನ್ನು ನೀಡದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಇರ್ಷಾದ್ ತನ್ನ ತನ್ನ ನಿಲುವಿನ ಬಗ್ಗೆ ಸರಿಯಾಗಿ ಉತ್ತರ ನೀಡದಿದ್ದರೆ ಪಕ್ಷದ ಸದಸ್ಯತ್ವದಿಂದ ವಜಾಗೊಳಿಸಲಾಗುವುದು "ಎಂದು ಅನ್ವರ್ ಹೇಳಿದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: