• Home
  • »
  • News
  • »
  • national-international
  • »
  • Tractor Accident: ಕೆರೆಗೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ; 26 ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವು

Tractor Accident: ಕೆರೆಗೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ; 26 ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾರಿಗೆ ಸಂಚಾರಕ್ಕಾಗಿ ಟ್ರ್ಯಾಕ್ಟರ್-ಟ್ರಾಲಿಯನ್ನು ಬಳಸದಂತೆ ಜನರಿಗೆ ಮನವಿ ಮಾಡಲಾಗಿದೆ.

  • Share this:

ಲಕ್ನೋ: ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ  (Tractor Trolley Accident) ಕೆರೆಗೆ ಬಿದ್ದು ಕನಿಷ್ಠ 26 ಯಾತ್ರಾರ್ಥಿಗಳು ಮೃತಪಟ್ಟ ದುರ್ಘಟನೆ ಶನಿವಾರ ಉತ್ತರ ಪ್ರದೇಶದ (Uttar Pradesh) ಕಾನ್ಪುರ ಜಿಲ್ಲೆಯಲ್ಲಿ (Kanpur) ಸಂಭವಿಸಿದೆ. ಮೃತಪಟ್ಟ ದುರ್ದೈವಿಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳೇ ಸೇರಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಈ ಭೀಕರ ದುರ್ಘಟನೆಯಲ್ಲಿ 20 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 50 ಜನರಿದ್ದ ಟ್ರ್ಯಾಕ್ಟರ್ ಉನ್ನಾವೊದ ಚಂದ್ರಿಕಾ ದೇವಿ ದೇವಸ್ಥಾನದಿಂದ ವಾಪಸಾಗುತ್ತಿದ್ದಾಗ ಕಾನ್ಪುರದ ಘಟಂಪುರ ಪ್ರದೇಶದಲ್ಲಿ ಈ ದುರಂತ (Tractor Accident) ಸಂಭವಿಸಿದೆ.


ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಭಯಾನಕ ದೃಶ್ಯಗಳಲ್ಲಿ, ಬರಿಗೈಯಲ್ಲಿ ಜನರು ಕೊಳದಿಂದ ದೇಹಗಳನ್ನು ಹೊರತೆಗೆಯುತ್ತಿರುವುದು ಕಂಡುಬಂದಿದೆ.ಪ್ರಧಾನಿ ನರೇಂದ್ರ ಮೋದಿಯಿಂದ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತದ ಕುರಿತು ದುಃಖ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ ₹ 50,000 ಆರ್ಥಿಕ ನೆರವು ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.


ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೆರವು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪ್ರಾಣಹಾನಿಗೆ ಸಂತಾಪ ಸೂಚಿಸಿದ್ದಾರೆ. ಪರಿಹಾರ ಕ್ರಮಗಳ ಮೇಲ್ವಿಚಾರಣೆಗಾಗಿ ಹಿರಿಯ ಸಚಿವರಾದ ರಾಕೇಶ್ ಸಚನ್ ಮತ್ತು ಅಜಿತ್ ಪಾಲ್ ಅವರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.


ಟ್ರ್ಯಾಕ್ಟರ್ ಬಳಸಬೇಡಿ
ಜೊತೆಗೆ ಸಾರಿಗೆ ಸಂಚಾರಕ್ಕಾಗಿ ಟ್ರ್ಯಾಕ್ಟರ್-ಟ್ರಾಲಿಯನ್ನು ಬಳಸದಂತೆ ಜನರಿಗೆ ಮನವಿ ಮಾಡಿದ್ದಾರೆ. ಕೃಷಿ ಕೆಲಸಗಳಿಗೆ ಮತ್ತು ಸರಕುಗಳನ್ನು ವರ್ಗಾಯಿಸಲು ಟ್ರ್ಯಾಕ್ಟರ್-ಟ್ರಾಲಿ ಬಳಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅವರು ರಕ್ಷಣಾ ಕಾರ್ಯಾಚರಣೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಸರ್ಕಾರದ ವಕ್ತಾರರು ಲಕ್ನೋದಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Viral Video: ಏರ್‌ಪೋರ್ಟ್‌ಗೆ ಬಂದ ಶ್ರೀರಾಮ, ಕಾಲಿಗೆರಗಿ ನಮಸ್ಕರಿಸಿದ ಮಹಿಳೆ! ಭಕ್ತಿಪೂರ್ವಕ ದೃಶ್ಯ ನೀವೂ ನೋಡಿ


ಫುಟ್​ಬಾಲ್ ಮ್ಯಾಚಲ್ಲಿ ದುರಂತ
ಪೂರ್ವ ಜಾವಾ ಪ್ರಾಂತ್ಯದಲ್ಲಿ ರಾತ್ರಿಯಿಡೀ ನಡೆದ ಫುಟ್‌ಬಾಲ್ ಪಂದ್ಯವೊಂದರಲ್ಲಿ ಪ್ರೇಕ್ಷಕರಿಂದಾಗಿ ನೂಕುನುಗ್ಗಲು ಉಂಟಾಗಿ 127 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 180 ಜನರು ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು (Indonesia Police) ಭಾನುವಾರ ತಿಳಿಸಿದ್ದಾರೆ. ಇಂಡೋನೇಷ್ಯಾದ ಟಾಪ್ ಲೀಗ್ BRI ಲಿಗಾ 1 ಪಂದ್ಯದಲ್ಲಿ ಪರ್ಸೆಬಯಾ ತಂಡ 3-2 ರಿಂದ ಗೆದ್ದ ನಂತರ ಈ ದುರ್ಘಟನೆ ಸಂಭವಿಸಿದೆ. ಹೀಗಾಗಿ ಇಂಡೋನೇಷ್ಯಾದಲ್ಲಿ ಒಂದು ವಾರಗಳ ಕಾಲ ಆಟಗಳನ್ನು ಸ್ಥಗಿತಗೊಳಿಸಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಇಂಡೋನೇಷ್ಯಾದ ಫುಟ್ಬಾಲ್ ಅಸೋಸಿಯೇಷನ್ ​​(PSSI) ತಿಳಿಸಿದೆ.


ಇದನ್ನೂ ಓದಿ: 5G Network: 5ಜಿ ಎಂದರೆ 5 ಪ್ರಮುಖ ಗುರಿ! ಇದು ದೇಶದ ಅಭಿವೃದ್ಧಿ ಪಥ ಎಂದ ಮುಕೇಶ್ ಅಂಬಾನಿ


ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ನಂತರ, ಸೋತ ತಂಡದ ಬೆಂಬಲಿಗರು ಪಿಚ್‌ಗೆ ನುಗ್ಗಿ ಗಲಾಟೆ ಮಾಡಿದ್ದೇ ಈ ದುರ್ಘಟನೆಗೆ ಕಾರಣ. ಅಭಿಮಾನಿಗಳು ಪಿಚ್​ಗೆ ಇಳಿಯುತ್ತಿದ್ದಂತೆ ಪೊಲೀಸರು ಅಶ್ರುವಾಯು ಹಾರಿಸಿ ನಿಯಂತ್ರಿಸಲು ಯತ್ನಿಸಿದರು. ಆದರೂ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದ 127 ಜನರು ಮೃತಪಟ್ಟಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: