ಉತ್ತರ ಪ್ರದೇಶದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಬ್ ಇನ್​ಸ್ಪೆಕ್ಟರ್ ಅಮಾನತು

Crime News: ಉತ್ತರ ಪ್ರದೇಶದ 29 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬುರ್ಖೇರಾ ಪೊಲೀಸ್ ಠಾಣೆ ಹೊಂದಿರುವ ಸಬ್ ಇನ್ಸ್ಪೆಕ್ಟರ್ (ಎಸ್ಐ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಫೆ. 11): ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ಕೊಲೆಯಂತಹ ಅಪರಾಧ ಪ್ರಕರಣಗಳು ಆಗಾಗ ಕೇಳಿ ಬರುತ್ತಿರುತ್ತದೆ. ಇದೇ ರೀತಿ, ಉತ್ತರ ಪ್ರದೇಶದ ಫಿಲಿಬಿಟ್ ಬಳಿ 29 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಯತ್ನ ಮಾಡಿರುವುದು. ಆದರೆ, ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸ್ ಅಧಿಕಾರಿಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

  ಉತ್ತರ ಪ್ರದೇಶದ 29 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬುರ್ಖೇರಾ ಪೊಲೀಸ್ ಠಾಣೆ ಹೊಂದಿರುವ ಸಬ್ ಇನ್ಸ್ಪೆಕ್ಟರ್ (ಎಸ್ಐ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಮುಂಮುಂಚಿತವಾಗಿ, ಆರೋಪಿ ಫೋನ್ನಲ್ಲಿ ಅಶ್ಲೀಲ ಕಾಮೆಂಟ್ಗಳನ್ನು ಮಾಡಿ ಕಿರುಕುಳ ನೀಡುತ್ತಿದ್ದರು ಎಂದೂ ಆರೋಪಿಸಲಾಗಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.

  ಈ ಸಂಬಂಧ ಎಸ್ಪಿ ಜೈ ಪ್ರಕಾಶ್ ಯಾದವ್ ಎಸ್ಐ ವಿರುದ್ಧ ಕೇಸ್ ದಾಖಲಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಫೆಬ್ರವರಿ 3 ರಂದು ಮಹಿಳೆ ಎಸ್ಪಿಗೆ ಲಿಖಿತ ದೂರು ನೀಡಿದ್ದು, ಫೆಬ್ರವರಿ 5 ರಂದು ಎಫ್ಐಆರ್ ಹಾಕಲಾಗಿದೆ.

  15 ವರ್ಷಗಳ ಹಿಂದೆ ಆಕೆಯ ಪೋಷಕರು ತೀರಿಕೊಂಡ ನಂತರ, ಅವರು ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಆಕೆಯ ಪೋಷಕರು ಸಂತ್ರಸ್ಥ ಮಹಿಳೆಯ ಮಾನಸಿಕ ಅಸ್ವಸ್ಥ ಸಹೋದರನ ಹೆಸರಿನಲ್ಲಿ ತಮ್ಮ ಜಮೀನನ್ನು ವಿಲ್ ಬರೆದುಕೊಟ್ಟಿದ್ದರು. ಈ ಹಿನ್ನೆಲೆ ಸಹೋದರನ ಅಕ್ಕ ಜಮೀನು ಕಬಳಿಸುವ ಆಸೆಯಿಂದ ಸಹೋದರನನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು.

  ಇದನ್ನೂ ಓದಿ: Viral Photo | ಫಸ್​ ನೈಟ್​ಗೆ ಕಾಯುತ್ತಿರುವ ವಧು, ಕಂಪ್ಯೂಟರ್ ಮುಂದೆ ಬ್ಯುಸಿಯಾದ ವರ; ಟ್ವಿಟ್ಟರ್​ನಲ್ಲಿ ಫೋಟೋ ವೈರಲ್

  ಸುಮಾರು ಒಂದು ತಿಂಗಳ ಹಿಂದೆ, ಸಂತ್ರಸ್ಥೆ ಮಹಿಳೆ ತನ್ನ ಸಹೋದರಿಯ ವಿರುದ್ಧ ಬರ್ಖೇರಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಳು ಮತ್ತು ಆರೋಪಿ ಎಸ್ಐ ರಾಮ್ ಗೋಪಾಲ್ ತನ್ನ ಸೆಲ್ ಫೋನ್ ಸಂಖ್ಯೆಯನ್ನು ಪಡೆದಿದ್ದರು. ಇದರ ನಂತರ, ಎಸ್ಐ ಪ್ರತಿ ರಾತ್ರಿಯೂ ಅವಳಿಗೆ ಅಶ್ಲೀಲ ಫೋನ್ ಕರೆಗಳನ್ನು ಮಾಡಲು ಪ್ರಾರಂಭಿಸಿದ. ಒಂದು ದಿನ, ತನ್ನ ಅಕ್ಕನ ಮನೆಯಿಂದ ತನ್ನ ಸಹೋದರನನ್ನು ಮರಳಿ ಕರೆತರಲು ಎಸ್ಐ ಜತೆಗೆ ಬಿಸಾಲ್ಪುರಕ್ಕೆ ಹೋಗಬೇಕೆಂದು ಸೂಚಿಸಿದನು. ಇದಕ್ಕೆ ಮಹಿಳೆ ಒಪ್ಪಿ ಫೆಬ್ರವರಿ 2 ರಂದು ಬಿಸಾಲ್ಪುರವನ್ನು ತಲುಪಿದರು. ನಂತರ, ಲಿಖಿತ ದೂರು ನೀಡಲು ತನ್ನೊಂದಿಗೆ ಪಟೇಲ್ ನಗರದ ಫ್ಲ್ಯಾಟ್​ಗೆ ಹೋಗಬೇಕೆಂದು ಎಸ್ಐ ಕೇಳಿಕೊಂಡ.

  ಅವರು ಫ್ಲ್ಯಾಟ್​ಗೆ ತಲುಪಿದಾಗ, ಎಸ್ಐ ಒಳಗಿನಿಂದ ಬಾಗಿಲು ಮುಚ್ಚಿ, ತನ್ನನ್ನು ತಬ್ಬಿಕೊಂಡು ಕಿರುಕುಳ ನೀಡಲು ಯತ್ನಿಸಿದ. ಆದರೆ, ತಾನು ಫ್ಲ್ಯಾಟ್​ನಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ತನ್ನ ವಿರುದ್ಧ ಹಾಗೂ ಪತಿ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದೂ ಮಹಿಳೆ ಆರೋಪಿಸಿದ್ದಾರೆ.

  ಐಪಿಸಿಯ ಸೆಕ್ಷನ್ 354 ಎ ಅಡಿಯಲ್ಲಿ ಎಸ್ಐ ರಾಮ್ ಗೋಪಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಾರ್ಖೇರಾ ಎಸ್ಎಚ್ಒ ವೀರೇಶ್ ಕುಮಾರ್ ಹೇಳಿದ್ದಾರೆ.

  ರಾಮ್ ಗೋಪಾಲ್ ವಿರುದ್ಧ ತನಿಖೆ ಅಂತ್ಯವಾಗುವವರೆಗೂ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಎಸ್ಪಿ ಜೈ ಪ್ರಕಾಶ್ ಯಾದವ್ ಹೇಳಿದರು. ಒಂದು ವೇಳೆ ಆತನ ವಿರುದ್ಧ ಹೊರಿಸಲಾಗಿರುವ ಆರೋಪಗಳು ಸುಳ್ಳು ಎಂದು ಕಂಡುಬಂದಲ್ಲಿ, ಆತನ ಅಮಾನತು ಹಿಂಪಡೆಯಲಾಗುತ್ತದೆ, ಇಲ್ಲದಿದ್ದರೆ ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.
  Published by:Sushma Chakre
  First published: