HOME » NEWS » National-international » UTTAR PRADESH SUB INSPECTOR DANCES WITH BAR GIRLS SHOWERS MONEY IN UNIFORM GETS SUSPENDED LG

ಬಾರ್​ ಗರ್ಲ್ಸ್​​ ಜೊತೆ ಡ್ಯಾನ್ಸ್​ ಮಾಡಿ, ಹಣ ಸುರಿದ ಪೊಲೀಸ್ ಅಧಿಕಾರಿಯ ಅಮಾನತು

ಸುರೇಂದ್ರ ಪಾಲ್​ ಅಮಾನತುಗೊಂಡ ಸಬ್​ ಇನ್ಸ್​ಪೆಕ್ಟರ್. ಈತ ಹುಸೇನ್​ ಗಂಜ್​​ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

news18-kannada
Updated:March 3, 2020, 11:46 AM IST
ಬಾರ್​ ಗರ್ಲ್ಸ್​​ ಜೊತೆ ಡ್ಯಾನ್ಸ್​ ಮಾಡಿ, ಹಣ ಸುರಿದ ಪೊಲೀಸ್ ಅಧಿಕಾರಿಯ ಅಮಾನತು
ಪ್ರಾತಿನಿಧಿಕ ಚಿತ್ರ
  • Share this:
ಉತ್ತರ ಪ್ರದೇಶ(ಮಾ.03): 'ಬೇಲಿಯೇ ಎದ್ದು ಹೊಲ ಮೇಯ್ದಂತೆ' ಎಂಬ ಮಾತಿಗೆ ಉತ್ತರ ಪ್ರದೇಶದ ಪೊಲೀಸ್​ ಅಧಿಕಾರಿಯ ವರ್ತನೆ ಸಾಕ್ಷಿಯಾಗಿದೆ. ಕಾನೂನು-ಶಿಸ್ತು ಕಾಯಬೇಕಾದವರೇ ಕಾನೂನು ಉಲ್ಲಂಘಿಸಿದರೆ ಹೇಗೆ? ಇಲ್ಲೂ ಸಹ ಹಾಗೆಯೇ ಆಗಿದೆ. ಕರ್ತವ್ಯದಲ್ಲಿದ್ದ ಸಬ್​ ಇನ್ಸ್​​ಪೆಕ್ಟರ್​ ಯೂನಿಫಾರಂನಲ್ಲೇ ಬಾರ್​​ ಗರ್ಲ್ಸ್​​ ಜೊತೆ ಡ್ಯಾನ್ಸ್​ ಮಾಡಿ ಈಗ ಅಮಾನತುಗೊಂಡಿದ್ದಾರೆ.

ಹೌದು, ಬಾರ್​ ಗರ್ಲ್ಸ್​ ಜೊತೆ ಡ್ಯಾನ್ಸ್ ಮಾಡಿ, ಅವರ ಮೇಲೆ ನೋಟುಗಳನ್ನು ಎಸೆದು ಅಸಭ್ಯವಾಗಿ ವರ್ತಿಸಿದ ಪೊಲೀಸ್​ ಅಧಿಕಾರಿಯನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಕೊರೊನಾ ಭೀತಿ: ಟೆಕ್ಕಿ ಸಂಪರ್ಕಿಸಿದ್ದ 80 ವ್ಯಕ್ತಿಗಳ ಆರೋಗ್ಯ ತಪಾಸಣೆ

ಸುರೇಂದ್ರ ಪಾಲ್​ ಅಮಾನತುಗೊಂಡ ಸಬ್​ ಇನ್ಸ್​ಪೆಕ್ಟರ್. ಈತ ಹುಸೇನ್​ ಗಂಜ್​​ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸ್​ ಸಮವಸ್ತ್ರದಲ್ಲೇ ಬಾರ್​ ಗರ್ಲ್ಸ್​​ ಜೊತೆ ನೃತ್ಯ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆ ಹುಡುಗಿಯರ ಮೇಲೆ ಹಣದ ಮಳೆ ಸುರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ

ಶನಿವಾರ ರಾತ್ರಿ ಫತೇಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್​ ಅಧಿಕಾರಿ ತೋರಿರುವ ದುರ್ವರ್ತನೆಯನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ವಿಡಿಯೋ ಸೆರೆ ಹಿಡಿದ ಪೊಲೀಸ್​ ಕಾನ್ಸ್​ಟೇಬಲ್​​ಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರದ ವಕ್ತಾರ ತಿಳಿಸಿದ್ದಾರೆ.

ಮಗಳ ಪಾಲಿಗೆ ಅಪ್ಪನೇ ಮೃತ್ಯು; 3 ವಾರಗಳ ನಂತರ ಬಯಲಾಯ್ತು ತೆಲಂಗಾಣ ಯುವತಿ ಕೊಲೆ ರಹಸ್ಯ
First published: March 3, 2020, 11:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories