Groom Run Away: ನೀರು ಕುಡಿದು ಬರ್ತೀನಿ ಎಂದು ಹೋದ ವರ ಬರಲೇ ಇಲ್ಲ! ಡೌರಿ ಕೊಡದ್ದಕ್ಕೆ ಮಂಟಪ ಬಿಟ್ಟು ಓಡಿದ

ಬಹಳಷ್ಟು ವರದಕ್ಷಿಣೆ ಪ್ರಕರಣ ಆಗಾಗ ಸುದ್ದಿಯಾಗುತ್ತಲೇ ಇದೆ. ಆದರೆ ಇಲ್ಲೊಂದು ಕಡೆ ಸಚಿವರ ಮುಂದೆಯೇ ವರದಕ್ಷಿಣೆ ಕೊಡದ್ದಕ್ಕೆ ಯುವಕ ಮಂಟಪದಿಂದ ಓಡಿ ಹೋಗಿದ್ದಾನೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾನ್ಪುರ(ಜೂನ್ 12): ಸಮಾಜ ಎಷ್ಟೇ ಮುಂದುವರಿದರೂ ವರದಕ್ಷಿಣೆ (Dowry) ಪಡೆಯುವ ಪದ್ಧತಿ ಮಾತ್ರ ಇಂದಿಗೂ ಹಾಗೆಯೇ ಇದೆ. ವರದಕ್ಷಿಣೆ ಎಂದರೆ ಕೇರಳದ (Kerala) ವಿಸ್ಮಯ ಎಂಬ ಹೆಣ್ಣುಮಗಳ ಮುಗ್ಧ ಮುಖ ಕಣ್ಮುಂದೆ ಬರುತ್ತದೆ. ವರದಕ್ಷಿಣೆ ಭೂತ ಹತ್ತಿಕೊಂಡು ಬಿಟ್ಟರೆ ಜೀವನವೇ ಹಾಳು. ಮದುವೆಯಾಗುವುದರ (Marriage) ಜೊತೆಗೆ ಹೆಂಡತಿ ಸಿಕ್ಕುವಾಗ ತಮ್ಮ ಬದುಕನ್ನೂ ಆಕೆಯ ಮನೆಯ ಹಣದಿಂದಲೇ ಗಟ್ಟಿಗೊಳಿಸಲು ಪ್ಲಾನ್ ಮಾಡುವ ಬಹಳಷ್ಟು ಮಂದಿ ಇಂದಿಗೂ ಇದ್ದಾರೆ. ಕಾರು, ಬೈಕ್, ಬಂಗಲೆ ಲಕ್ಷುರಿಗಾಗಿ ನಾಚಿಗೆ ಇಲ್ಲದೆ ಡಿಮ್ಯಾಂಡ್ ಮಾಡುವ ಮಂದಿ ಇದ್ದಾರೆ. ಹಾಗಾಗಿ ವರದಕ್ಷಿಣೆ ಪ್ರಕರಣಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇಂಥಹ ಘಟನೆಗಳು ಪದೇ ಪದೇ ನಡೆಯುತ್ತಲೇ ಇರುತ್ತದೆ. ಕಿಲೋಗಟ್ಟಲೆ ಚಿನ್ನ, ಜಮೀನು, ನಗದು ಪಡೆದುಕೊಂಡು ಮದುವೆಯಾಗುವವರಿದ್ದಾರೆ. ವರಕ್ಷಿಣೆಗಾಗಿಯೇ ಮದುವೆಯಾಗುವರೂ ಇದ್ದಾರೆ. ಅಂಥಹ ಒಬ್ಬಾತನ ಸುದ್ದಿ ಸದ್ಯ ವೈರಲ್ ಆಗಿದೆ.

ಬಹಳಷ್ಟು ವರದಕ್ಷಿಣೆ ಪ್ರಕರಣ ಆಗಾಗ ಸುದ್ದಿಯಾಗುತ್ತಲೇ ಇದೆ. ಆದರೆ ಇಲ್ಲೊಂದು ಕಡೆ ಸಚಿವರ ಮುಂದೆಯೇ ವರದಕ್ಷಿಣೆ ಕೊಡದ್ದಕ್ಕೆ ಯುವಕ ಮಂಟಪದಿಂದ ಓಡಿ ಹೋಗಿದ್ದಾನೆ.

ಮದುವೆ ಮಂಟಪದಿಂದಲೇ ಓಡಿ ಹೋದ

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ವರನೊಬ್ಬ ವರದಕ್ಷಿಣೆ ಸಿಗದ ಕಾರಣ ಮದುವೆ ಸ್ಥಳದಿಂದ ಓಡಿ ಹೋಗಿರುವ ವಿಲಕ್ಷಣ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ ಸಚಿವ ಧರಂ ಪಾಲ್ ಸಿಂಗ್ ಅವರ ಸಮ್ಮುಖದಲ್ಲಿ ಜಿಲ್ಲೆಯ ಶರೀಫಾಪುರ್ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

144 ಜೋಡಿಗಳ ಸಾಮೂಹಿಕ ವಿವಾಹ

ಶನಿವಾರ ನಡೆದ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 144 ಜೋಡಿಗಳಲ್ಲಿ ವರ ಕೂಡ ವಿವಾಹವಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ವರನು ಒಂದು ಲೋಟ ನೀರು ಪಡೆಯುವ ನೆಪದಲ್ಲಿ 'ಮಂಡಪ'ದಿಂದ ಒಂದು ನಿಮಿಷ ಬಿಟ್ಟು ಮದುವೆ ಸ್ಥಳದಿಂದ ನಾಪತ್ತೆಯಾಗಿದ್ದನು.

ವರನಿಗಾಗಿ ನಡೆಯಿತು ತೀವ್ರ ಶೋಧ

ವಾಪಸ್ ಬಾರದೆ ಇದ್ದಾಗ ತೀವ್ರ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ವರದಕ್ಷಿಣೆಯಲ್ಲಿ ಮೋಟಾರ್ ಸೈಕಲ್ ಬೇಕೆಂದು ವರ ಬೇಡಿಕೆ ಇಟ್ಟಿದ್ದಾಗಿ ಬಾಲಕಿಯ ತಾಯಿ ಬಳಿಕ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವಳು (ವಧು) ಹಣಕಾಸಿನ ಅಡಚಣೆಯನ್ನು ಉಲ್ಲೇಖಿಸಿ ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದಾಗ, ಅವನು (ವರ) ನಿರ್ಗಮನವನ್ನು ಯೋಜಿಸಿ ಓಡಿಹೋದನು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೈಕ್ ಕೊಡಿಸುವಷ್ಟು ಅನುಕೂಲ ಇಲ್ಲ ಎಂದಿದ್ದ ವಧು

ವರ ಬೈಕ್ ಡಿಮ್ಯಾಂಡ್ ಮಾಡಿದಾಗ ಬೈಕ್ ಕೊಡಿಸುವಷ್ಟು ಅನುಕೂಲ ಇಲ್ಲ ಎಂದು ವಧು ಸ್ವತಃ ವರನಿಗೆ ಹೇಳಿದ್ದಳು. ಆದರೆ ವರದಕ್ಷಿಣೆ ಭೂತ ಹತ್ತಿಕೊಂಡ ವರ ಮೆಲ್ಲನೆ ಮಂಟಪದಿಂದ ಓಡಿ ಹೋಗಿದ್ದಾನೆ.

ಇದನ್ನೂ ಓದಿ: ಹೆಣ್ಣು ಮಗು ಹುಟ್ಟಿದ್ದಕ್ಕಾಗಿ 10 ಲಕ್ಷ ವರದಕ್ಷಿಣೆಗೆ ಡಿಮ್ಯಾಂಡ್.. ಗಂಡನ ಟಾರ್ಚರ್​​ನಿಂದ ನೊಂದ ಹೆಂಡತಿ!

ಮೀರತ್ ಘಟನೆ

ಆರ್ಮಿ ಮೇಜರ್ ವರದಕ್ಷಿಣೆಗಾಗಿ ಹೆಂಡತಿಯ ಬೆರಳನ್ನೇ (Finger) ಕತ್ತರಿಸಿರುವ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಆರ್ಮಿ ಅಧಿಕಾರಿಯಾಗಿ ಈ ರೀತಿ ಹೆಂಡತಿಗೆ ಕಿರುಕುಳ ನೀಡಿರುವ ಘಟನೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಮೇಜರ್ ಪತ್ನಿಯ ತಂದೆ ಅಳಿಯನ (Son-In-Law) ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವರದಕ್ಷಿಣೆ ಬೇಡಿಕೆಗೆ ಆರ್ಮಿ ಮೇಜರ್ ತನ್ನ ಪತ್ನಿಯ ಬೆರಳನ್ನು ಕತ್ತರಿಸಿದ ಆರೋಪ ಕೇಳಿಬಂದಿದೆ. ಆರೋಪಿ ಮೇಜರ್ ಮೀರತ್‌ನ 510 ಆರ್ಮಿ ಬೇಸ್‌ನಲ್ಲಿ ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್‌ ವಿಭಾಗದಲ್ಲಿ ನಿಯೋಜಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ: Sexual Assault: ಮೈ ಮೇಲೆ ಎರಗಿದ ಕಾಮುಕರನ್ನು ತಡೆದಿದ್ದಕ್ಕೆ ಹಲ್ಲೆ: ಮಹಿಳೆಯ ಮುಖಕ್ಕೆ 118 ಹೊಲಿಗೆಗಳು!

30 ರ ಹರೆಯದ ಸೇನಾ ಮೇಜರ್ ಅವರ ಪತ್ನಿ ಬೆರಳಿನ ಗಾಯದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪತಿ 2014 ರಲ್ಲಿ ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ದಂಪತಿಗೆ ಐದು ವರ್ಷದ ಮಗನಿದ್ದಾನೆ ಎಂದು ವರದಿಯಾಗಿದೆ.
Published by:Divya D
First published: